Saturday 4 February 2012

ದಕ್ಷಿಣದ ಕಾಶ್ಮೀರದಲ್ಲಿ ಮರೆಯಾಗುತ್ತಿರುವ ಎರವರು

ನೆಲೆಯೂರಲು ಇವರಿಗೆ ಒಂದು ಸೂರಿಲ್ಲ. ಬೇಡಿ ತಿನ್ನುವಂತಹ ಪರಿಸ್ಥಿತಿ ಇದ್ದರೂ ನಾವು ಬಡವರು ಎಂಬ ಪರಿವೆಯೇ ಇಲ್ಲ. ಯಜಮಾನನ ಮನೆಯೇ ಇರಬೇಕಾದರೆ ಓದಿನರಮನೆಯ ಹಂಗು ನಮಗ್ಯಾಕೆ ಎಂದು ಇಂದಿಗೂ ನಾಲ್ಕಕ್ಷರ ಕಲಿಯದ ಸಮುದಾಯವಿದು.
ಸರ್ವರೋಗಕೂ ಸಾರಾಯಿ ಮದ್ದು ಎಂಬಂತೆ ಸದಾ ಮದ್ಯದ ದಾಸರಾಗಿ, ಅಪ್ಪ ಹಾಕಿದ ಆಲದಮರಕ್ಕೆ.... ಎಂಬಂತೆ ಅನಾರೋಗ್ಯಗೊಂಡರೆ ನಾಟಿ ಮದ್ದು, ಮಾಟ-ಮಂತ್ರಗಳ ಮೊರೆ ಹೋಗುತ್ತಾರೆ.
ದೇವರು, ಯಜಮಾನನಿದ್ದ ಮೇಲೆ ನಮ್ಮ ಭವಿಷ್ಯದ ಬಗ್ಗೆ ನಾವೇಕೆ ಚಿಂತಿಸಲಿ. ಕೈತುಂಬಾ ಹಣ ಗಳಿಸಿ ನಾವೇನು ಮಾಡಬೇಕು?
ಹೀಗೆ ವೈರುಧ್ಯದ ಪ್ರಶ್ನೆಗಳನ್ನು ಹಾಕುತ್ತಾ ಮೈ ದಣಿಸಿ ಹಗಲಿರುಳೂ ದುಡಿಯುತ್ತಿದ್ದಾರೆ. ಒಂದರ್ಥದಲ್ಲಿ ಇವರು ದಿನದ 24 ಗಂಟೆಯೂ ದುಡಿಯುವ ವರ್ಗದ ನಿಷ್ಠಾವಂತ ಶ್ರಮಿಕರು.
ಬಹುಶಃ ಇವರಿಲ್ಲದಿದ್ದರೆ ದಕ್ಷಿಣ ಭಾರತದ ಕಾಶ್ಮೀರವೆನಿಸಿರುವ ಕೊಡಗಿನ ಮೇಲ್ಜಾತಿಯ ಜನರು ಕಾಫಿ ತೋಟ ಮಾಡುತ್ತಿರಲಿಲ್ಲ. ಅದೇ ರೀತಿ ಈ ತೋಟಗಳನ್ನು ನಿಷ್ಠಾವಂತ ಶ್ರಮಿಕ ವರ್ಗದ ಕೈಗಿಟ್ಟು ದೇಶ ಕಾಯಲು ಸೈನ್ಯ ಸೇರುತ್ತಿರಲಿಲ್ಲವೇನೋ?
ಇವರು ಭೂಮಾಲೀಕರಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಈ ಸಮುದಾಯದ ಹೆಸರು ಎರವರು. ಆದರೆ, ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಈ ಸಮುದಾಯದ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಾ ಹೋಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸ್ವಯಂಕೃತ ಅಪರಾಧ.
ಹೌದು. ತಮ್ಮ ಕುಟುಂಬದ ಏಳ್ಗೆ, ಸುಶಿಕ್ಷಿತರಾಗಬೇಕೆಂಬ ಹಪಹಪಿತನ, ಆರೋಗ್ಯವಂತರಾಗಿರಬೇಕೆಂಬ ಬಯಕೆ ಇದ್ದಿದ್ದರೆ ಸಮುದಾಯ ವಿನಾಶದ ಅಂಚಿಗೆ ತಳ್ಳಲ್ಪಡುತ್ತಿರಲಿಲ್ಲ. ಈ ಯಾವುದೇ ಆಲೋಚನೆ ಮಾಡದೇ ಇದ್ದುದರಿಂದಲೇ ಈ ವರ್ಗ ಇಂದು ಕರಗುತ್ತಿದೆ.
ರಾಜ್ಯದ ಕೊಡಗಿನ ದಕ್ಷಿಣ ಭಾಗ ಮತ್ತು ಕೇರಳ-ಕರ್ನಾಟಕ ಗಡಿಭಾಗದ ವಯನಾಡು ಜಿಲ್ಲೆಗಳಲ್ಲಿ ಈ ಬುಡಕಟ್ಟು ಪಂಗಡದ ಕುಟುಂಬಗಳು ನೆಲೆಸಿವೆ. ಇವರು ಮೂಲತಃ ಕೇರಳದವರು ಎನ್ನುವ ಪ್ರತೀತಿ ಇದೆ. ಇವರ ಮೂಲವನ್ನು ಕೆದಕುತ್ತಾ ಹೋದರೆ ಹಲವಾರು ಕತೆಗಳು, ಐತಿಹ್ಯಗಳು ಕೇಳಿಬರುತ್ತವೆ. ಆದರೆ, ಅನಾದಿ ಕಾಲದಿಂದಲೂ ಹೇಳಿಕೊಂಡು ಬಂದಿರುವ ಕತೆಯ ಪ್ರಕಾರ ಎರವರು, ಕಾಲಚಾತ ಎಂಬ ಮೂಲ ಪುರುಷನ ಸಂತತಿಯಿಂದ ಬಂದವರು.
ಪ್ರತೀತಿಯಂತೆ ಹಿಂದೆ ಇವರಿಗೆ ಏಳು ತಲೆಮಾರಿನವರೆಗೆ ಗಂಡು ಸಂತತಿಯೇ ಇರಲಿಲ್ಲವಂತೆ. ಆಗ ಚಾತ ಮತ್ತು ಚಾತಿಯೆಂಬ ಎರಡು ಮಣ್ಣಿನ ಮೂರ್ತಿಗಳನ್ನು ಮಾಡಿ ಚಾತನ(ಪುರುಷ) ಕೈಲಿ ಒನಕೆ ಕೊಟ್ಟು, ಚಾತಿಯ(ಮಹಿಳೆ) ಕೈಲಿ ಮೊರ ಕೊಟ್ಟು ಎರಡೂ ಮೂರ್ತಿಗಳಿಗೆ ಜೀವ ಕೊಡಲಾಗಿತ್ತಂತೆ. ಆಗಿನಿಂದ ಗಂಡು ಸಂತತಿ ಹೆಚ್ಚಾಯ್ತು ಎಂದು ಹೇಳಲಾಗುತ್ತಿದೆ.
ಕೇರಳದ ವಯನಾಡಿನಿಂದ ರಾಜ್ಯಕ್ಕೆ ಬಂದವರನ್ನು ಪಣಿಯರೆಂದು, ಕೇರಳದಲ್ಲೇ ಉಳಿದುಕೊಂಡವರನ್ನು ಪಂಜಿರಿಯರೆಂದೂ ಕರೆಯಲಾಗುತ್ತಿದೆ.
ಕಪ್ಪನೆ ಮೈಬಣ್ಣದ ಸ್ವಲ್ಪ ಬಲಾಢ್ಯ ಶರೀರದ ಮೊಣಕಾಲಿವರೆಗೆ ಕಟ್ಟುವ ಪಂಚೆ ಉಟ್ಟವರು ಕಂಡರೆ ಅವರೇ ಎಳವರು ಎಂದು ಸುಲಭವಾಗಿ ಗುರುತಿಸಬಹುದು. ಕೆದರಿದ ಗುಂಗುರು ಕೂದಲು ಹೊಂದಿರುವ ಸಮುದಾಯದ ಭಾಷೆ- ಸಂಸ್ಕೃತಿಯಲ್ಲಿ ಹಲವು ವೈವಿಧ್ಯತೆಗಳನ್ನು ಕಾಣುತ್ತೇವೆ. ಕರ್ನಾಟಕದಲ್ಲಿದ್ದರೂ ಇತ್ತ ಕನ್ನಡವೂ ಅಲ್ಲದ, ಕೊಡಗಿನಲ್ಲಿದ್ದರೂ ಅತ್ತ ಕೊಡವವೂ ಅಲ್ಲದ, ಕೇರಳದಿಂದ ವಲಸೆ ಬಂದವರಾದರೂ ಮಲಯಾಳಂ ಭಾಷೆಯನ್ನೂ ಅಲ್ಲದ ರೀತಿಯ ಭಾಷೆಯಲ್ಲಿ ಇವರು ಮಾತನಾಡುತ್ತಾರೆ. ಒಂದು ರೀತಿಯಲ್ಲಿ ಮಲಯಾಳಂ-ಕೊಡವ-ಕನ್ನಡ-ತೆಲುಗು ಮಿಶ್ರಿತ ಭಾಷೆ ಇವರದ್ದು.
ಇದರ ದ್ಯೋತಕವಾಗಿ ತಲೆತಲಮಾರಿನಿಂದ ಗಂಡಸರು ಬಿದಿರಿನ ಬೊಂಬಿನಿಂದ ತಾವೇ ತಯಾರಿಸಿದ ಶಹನಾಯಿ ಮಾದರಿಯ ಚೀನಿ ಎಂಬ ಸಾಧನ ಮತ್ತು ಪ್ರಾಣಿಗಳ ಚರ್ಮದಿಂದ ತಯಾರಿಸಿದ ಢಮರು ಆಕಾರದ ದೊಡ್ಡ ಸಾಧನವನ್ನು ಬಾರಿಸುತ್ತಾರೆ. ಈ ಢಮರು ಆಕಾರದ ಸಾಧನಕ್ಕೆ 'ದುಡಿ' ಎಂದು ಕರೆಯಲಾಗುತ್ತದೆ. ಗಂಡಸರು ಈ ವಾದ್ಯಗಳನ್ನು ನುಡಿಸುತ್ತಿದ್ದರೆ, ಅದರ ತಾಳಕ್ಕೆ ತಕ್ಕಂತೆ ಮೊರ ಹಿಡಿದ ಮಹಿಳೆಯರು ಹೆಜ್ಜೆ ಹಾಕುತ್ತಿದ್ದರು.
ಪ್ರತಿದಿನ ಸಂಜೆ ಇಂತಹ ಕಾರ್ಯಕ್ರಮಗಳನ್ನು ತಮ್ಮ ಪ್ರದೇಶಗಳಲ್ಲಿ ನಡೆಸುತ್ತಿದ್ದ ಎರವರು ತಮ್ಮ ಸಾಂಸ್ಕೃತ ಸೊಬಗನ್ನು ಮೆರೆಯುತ್ತಿದ್ದರು.
ಇಂದು ಕೊಡಗಿನಲ್ಲಿ ಚೀನಿ ಮತ್ತು ದುಡಿಯ ನಾದಗಳು ಹೊರಹೊಮ್ಮುತ್ತಿಲ್ಲ. ಅದರ ಬದಲಿಗೆ ವಿನಾಶದ9 ಅಂಚಿನಲ್ಲಿರುವ ಎರವರ ಆರ್ತನಾದ ಕೇಳಿಯೂ ಕೇಳದ ಸ್ಥಿತಿಯಲ್ಲಿದೆ.
ಹೀಗಾಗಿ ಇವರ ಪರಿಸ್ಥಿತಿ ಹೇಗಿದೆಯೆಂದರೆ, 'ಅಂಬಿಲ ಮೊಟ್ಟೆ ತೂಂಗ್್ತುಪೆ ದುಡಿ ಮುರ್ಕುವ ನಲ್ಲ, ಕೊಚ್ಚುವ ಮಿರಾತಿನ ಕೂಟುಪಲ್ಲು ಚೀನಿಪಿನಿಪನಲ್ಲ...'
ಅರ್ಥ: ಎರವರ ಹುಡುಗನ ಚರ್ಮ ದುಡಿಗೆ ಆಗೋದಿಲ್ಲ, ಹಣ್ಣು ಹಣ್ಣು ಮುದುಕಿಯ ಚರ್ಮ ಚೀನಿ ನುಡಿಸೋದಿಲ್ಲ.
ಅಂದರೆ, ಎರವರು ದುಡಿ ಮತ್ತು ಚೀನಿ ನುಡಿಸುವುದನ್ನು ಮರೆತಿರುವುದನ್ನು ವ್ಯಂಗ್ಯ ಮಾಡಲೆಂದೇ ಹುಟ್ಟಿಕೊಂಡಿರುವ ಗಾದೆ ಇದು.
ಇಷ್ಟಕ್ಕೆಲ್ಲಾ ಕಾರಣಗಳೇನೆಂಬುದನ್ನು ಹುಡುಕುತ್ತಾ ಹೋದರೆ ತಪ್ಪಿತಸ್ಥರ ಸ್ಥಾನದಲ್ಲಿ ಈ ಎರವರೇ ನಿಲ್ಲುತ್ತಾರೆ. ಏಕೆಂದರೆ, ಇವರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಲೆ ತೆರೆದು ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಕೇಳಿದರೆ, 'ನಮ್ಮ ಮಕ್ಕಳು ಕಲಿತರೆ ನಿಮಗೇನು ಲಾಭ?' ಎಂಬ ಪ್ರಶ್ನೆ ಸಮುದಾಯದ ಮುಖಂಡರಿಂದ ಬರುತ್ತದೆ.
ನಿಮ್ಮ ಜೀವನ ಸುಮಧುರವಾಗಲೆಂದು ಅಲ್ಪಸ್ವಲ್ಪ ಹಣ ಕೂಡಿಡಿ ಎಂದರೆ, ಅದರ ಉಸಾಬರಿ ನಮಗ್ಯಾಕೆ ಎನ್ನುತ್ತಾ,
'ಎನಾಕೆಂತೈ ಚಾಲ. ಪಾಪೆಂಗು ಪಾಪೆಂಗು ಚಾಲ'....
ಅಂದರೆ, ದುಡ್ಡಿನ ಗೊಡವೆ ನಮಗ್ಯಾಕೆ. ನಮಗೆ ಸಾಲ ಬೇಡ. ಏನಿದ್ದರೂ ಒಬ್ಬ ಯಜಮಾನ ಮತ್ತು ಮತ್ತೊಬ್ಬ ಯಜಮಾನನ ಮಧ್ಯೆ ಸಾಲವಷ್ಟೆ ಎನ್ನುತ್ತಾರೆ.
ಇದರರ್ಥ, ಕೊಡಗಿನಲ್ಲಿ ಚೀಟಿಯ ಮೂಲಕ ಮನೆಯ ಆಳನ್ನು ಆಯ್ದುಕೊಳ್ಳುವ ಊಳಿಗಮಾನ್ಯ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ಅಂದರೆ, ಎರವ ಸಮುದಾಯದ ಕೂಲಿಯಾಳು ಒಬ್ಬ ಭೂಮಾಲೀಕನ ಮನೆಯಲ್ಲಿ ಇಂತಿಷ್ಟು ಹಣ ತೆಗೆದುಕೊಂಡು ಕೂಲಿ ಕೆಲಸ ಮಾಡುತ್ತಿರುತ್ತಾನೆ. ಇದೇ ಆಳು ನನಗೆ ಬೇಕೆಂದು ಮತ್ತೊಬ್ಬ ಬಯಸುತ್ತಾನೆ. ಆಗ ಮೊದಲ ಯಜಮಾನ ಆಳಿನ ಕೈಲೊಂದು ಚೀಟಿ ಕೊಟ್ಟು ಆಳಿನಿಂದ ನನಗೆ ಇಷ್ಟು ಹಣ ಬರಬೇಕಿದೆ. ಅದನ್ನು ನೀಡಿ ಆಳನ್ನು ನಿಮ್ಮವನನ್ನಾಗಿ ಮಾಡಿಕೊಳ್ಳಿ ಎಂದು ಬರೆದು ಹೊಸ ಯಜಮಾನನ ಬಳಿಗೆ ಕಳುಹಿಸುತ್ತಾರೆ.
ನಮ್ಮ ಹಣಕಾಸಿನ ವಿಚಾರವನ್ನು ಯಜಮಾನರೇ ನೋಡಿಕೊಳ್ಳುವಾಗ ದುಡ್ಡಿನ ಚಿಂತೆ ನಮಗ್ಯಾತಕೆ ಎನ್ನುತ್ತಾರೆ ಎರವರು.
ದಿನವಿಡೀ ಯಜಮಾನನ ತೋಟದಲ್ಲಿ ದೇಹವನ್ನು ದಂಡಿಸಿ ದುಡಿದು ಬರುತ್ತಿದ್ದ ಎರವರು ಮನೆಗೆ ಬರುತ್ತಿದ್ದಂತೆಯೇ 'ಅಂಡಲ್ ಕಞ ಕಞ. ಚಂಬಿಲ್ ನೀರು ನೀರು, ಚಕ್ಕರೆಕಾಯಿ ಮುರಿತಮ ಹ್ಯಾಟೆಮೀನು ಬರ್ತಮ, ಮುಚ್ಚಿಬೆಚ್ಚ ನೂಕಾಣುಕು ಎನ್ನ ಚಂದಮ...'
ಅರ್ಥ: ಒಲೆಯಲ್ಲಿ ಗಂಜಿ ಅನ್ನ ಅನ್ನ, ಚೆಂಬಲ್ಲಿ ನೀರು ನೀರು, ಕುಂಬಳಕಾಯಿ ಸಾರು, ಹುರಿದ ಹ್ಯಾಟೆಮೀನು ಪಕ್ಕದಲ್ಲಿದ್ದರೆ ಬಿಸಿ ಬಿಸಿ ಭೋಜನ ಎಂತಾ ಸೊಗಸು ಎನ್ನುತ್ತಿದ್ದ ಕಾಲವಿತ್ತು. ಆದರೆ, ಈಗ ಆ ಕಾಲ ಹೋಗಿ
ಬ್ರಾಂಡಿ ಶಾಪ್್ನಲ್ಲಿ ಮದ್ಯ ಏರಿಸಿ ತೂರಾಡುತ್ತಾ ಬರುವುದೇ ಸೊಗಸು ಎನ್ನುವಂತಾಗಿದೆ.
ಹೌದು. ಈ ಎರವರು ಯಾವ ರೀತಿ ಮದ್ಯದ ದಾಸರಾಗಿದ್ದಾರೆಂದರೆ, ಹೆಣ್ಣು- ಗಂಡು ಎಂಬ ಭೇದ ಭಾವ ಇಲ್ಲದೇ ಮದ್ಯ ಸೇವಿಸುತ್ತಾರೆ. ಈ ಮದ್ಯಪಾನದ ಅತಿರೇಕ ಪ್ರಾಣಕ್ಕೇ ಎರವಾಗಿರುವ ಪ್ರಸಂಗಗಳೂ ಜರುಗಿವೆ. ಮದ್ಯದ ನಶೆಯಲ್ಲಿ ಗಂಡ ಹೆಂಡತಿಯರು ನಾನು ಸತ್ತು ಹೋಗುತ್ತೇನೆ. ನೋಡೋಣ ನೀನೂ ಸತ್ತು ಹೋಗು ಎಂದು ಸವಾಲು ಪಾಟೀ ಸವಾಲು ಹಾಕುತ್ತಾರೆ. ಆಗ ಗಂಡ ನೇಣು ಹಾಕಿಕೊಳ್ಳುತ್ತಾನೆ. ನಶೆಯಲ್ಲಿದ್ದ ಹೆಂಡತಿಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ಇವರು ಪ್ರಕೃತಿ ಆರಾಧಕರು. ಆದರೆ, ಭೂಮಿಯಿಲ್ಲ. ಭೂಮಾಲೀಕನ ಭೂಮಿಯೇ ಇವರಿಗೆ ದೇವರು. ಈ ಭೂಮಿಯ ಉಳುಮೆಯಲ್ಲೇ ತೃಪ್ತಿ ಕಂಡುಕೊಂಡ ಸಮುದಾಯವಿದು. ನಿಷ್ಠೆಗೆ ಮತ್ತೊಂದು ಹೆಸರೇ ಎರವರು. ಹೀಗಾಗಿ ವರ್ಷವಿಡೀ ದುಡಿದ ಇವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಭೂಮಾಲೀಕರು ಪ್ರತಿವರ್ಷದ ಸೆಪ್ಟಂಬರ್್ನಲ್ಲಿ ಕೈಲ್್ಪೊಲ್ದ್ ಎಂಬ ಹಬ್ಬ ಆಚರಿಸುತ್ತಾರೆ. ಹಂದಿಯನ್ನು ಕೊಯ್ದು ಅದರ ತಲೆ, ಕಾಲು ಮತ್ತು ಇಂತಿಷ್ಟು ಮಾಂಸವನ್ನು ಎರವರಿಗೆ ನೀಡುತ್ತಾರೆ. ಜತೆಗೆ ಮದ್ಯವೂ ಇರುತ್ತದೆ.
ವರ್ಷವಿಡೀ ತನ್ನ ಮಾಲೀಕನಿಗೆ ನಿಷ್ಠರಾಗಿದ್ದ ಎರವ ಅಂದು ಮಾತ್ರ ತಿರುಗಿ ಬೀಳುತ್ತಾನೆ. ಅಂದು ಕಂಠಪೂರ್ತಿ ಕುಡಿದು ಮಾಲೀಕನಿಗೆ ವಾಚಾಮಗೋಚರವಾಗಿ ನಿಂದಿಸುತ್ತಾನೆ. ಆದರೆ, ಮಾಲೀಕ ಇದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಏಕೆಂದರೆ, ಆತ ತನ್ನ ನಿಷ್ಠಾವಂತ ಕಾರ್ಮಿಕ. ಅವನಿಂದಲೇ ತನ್ನ ಜೀವನ ಸಾಗುತ್ತಿರುವುದನ್ನು ಅರಿತಿರುತ್ತಾನೆ. ನಗುಮೊಗದಿಂದಲೇ ಎರವನ ಬೈಗುಳವನ್ನು ಸಹಿಸಿಕೊಳ್ಳುತ್ತಾನೆ. ಮರುದಿನ ಯಥಾಸ್ಥಿತಿಯಲ್ಲಿ ಬರುವ ಎರವ ಮಾಲೀಕ ಹೇಳಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾನೆ.
ಹೀಗಾಗಿ ದಕ್ಷಿಣ ಕೊಡಗಿನಲ್ಲಿ ನಡೆಯುವ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ. 90 ರಷ್ಟು ಎರವ ಸಮುದಾಯಕ್ಕೆ ಸೇರಿದವಾಗಿರುತ್ತವೆ. ಚೀನಿ ಮತ್ತು ದುಡಿಯನ್ನು ನುಡಿಸುವಂತಹ ಶ್ರೀಮಂತ ಕಲೆಗೆ ತಿಲಾಂಜಲಿ ಹೇಳಿರುವ ಈ ಸಮುದಾಯ ಗುಂಡಿನ ಮತ್ತಿನಲ್ಲೇ ಸದಾ ಇರುವಂತಾಗಿದೆ. ಪಟ್ಟಣಗಳಿಗೆ ಹೋದರೆ ಅಲ್ಲಿ ಕಂಠಪೂರ್ತಿ ಕುಡಿದು ರಸ್ತೆಗಳಲ್ಲೇ ಬೀಳುವಂತಹ ಪರಿಸ್ಥಿತಿಗೆ ತಮ್ಮನ್ನು ತಾವು ತಂದುಕೊಂಡಿದ್ದಾರೆ.
ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿರದ ಕಾರಣ ಸಮುದಾಯದ ಬಹುತೇಕ ಸಾವುಗಳು ಸಂಭವಿಸುವುದು ಅನಾರೋಗ್ಯದಿಂದಾಗಿಯೇ. ಕುಡಿತದ ದಾಸರಾಗಿರುವುದರಿಂದ ಇವರು 40 ರಿಂದ 45 ವರ್ಷಕ್ಕೇ ಮುದುಕರಂತೆ ಕಾಣುತ್ತಾರೆ. ಹೀಗಾಗಿ ಇವರ ಜೀವಿತಾವಧಿ ಮಧ್ಯವಯಸಿನಲ್ಲೇ ಮುಗಿದುಹೋಗುತ್ತಿರುವುದು ವಿಪರ್ಯಾಸ.
ಇದರ ಪರಿಣಾಮ ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಸೇರಿದಂತೆ ಹಲವು ಭಾಗಗಳಲ್ಲಿ ಎರವರ ಸಂಖ್ಯೆ ಕ್ಷೀಣಿಸುತ್ತಾ ಬಂದಿದೆ. 2001 ರಲ್ಲಿ ಸುಮಾರು 20 ಸಾವಿರದಷ್ಟಿದ್ದ ಜನಸಂಖ್ಯೆ ಪ್ರಸ್ತುತ 15 ಸಾವಿರದ ಗಡಿ ದಾಟುವುದಿಲ್ಲ. ಇದಕ್ಕೆ ಮತ್ತಷ್ಟು ಪ್ರಮುಖ ಕಾರಣಗಳೆಂದರೆ, ಹಣದ ಆಸೆಗಾಗಿ ಗರ್ಭನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವುದು ಮತ್ತು ಕೆಲವರು ಇತರೆ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವುದು.
ಹೀಗಾಗಿ ಎರವರ ಕುಟುಂಬಗಳು ಬೆಳೆಯುತ್ತಿಲ್ಲ. ಈ ಮೂಲಕ ರಾಜ್ಯದ ಒಂದು ಹಳೆಯ ಬುಡಕಟ್ಟು ಸಮುದಾಯ ತನ್ನ ವಿನಾಶಕ್ಕೆ ತಾನೇ ಕಾರಣವಾಗುತ್ತಿದೆ.
ವಿನಾಶದ ಅಂಚಿನಲ್ಲಿರುವ ಎರವರಲ್ಲಿ ಕುಡಿತದ ಚಟ ಬಿಡಿಸಿ, ಅವರ ಮಕ್ಕಳಿಗೆ ಕಡ್ಡಾಯವಾದ ಶಿಕ್ಷಣ ನೀಡುವಂತಹ ಕಠಿಣ ಕಾನೂನು ಪ್ರತ್ಯೇಕವಾಗಿ ಬರಬೇಕಾಗಿದೆ. ಅಲ್ಲದೇ, ಅವರಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವಂತಹ ಕೆಲಸ ಸರ್ಕಾರಗಳಿಂದ ಆಗಬೇಕಿದೆ - ಅಡ್ಡಂಡ ಕಾರ್ಯಪ್ಪ, ಎರವ ಸಮುದಾಯವನ್ನು ಅಧ್ಯಯನ ಮಾಡಿದವರು.

copyright@ravimalenahalli

ಬೆಸ್ತರ ಗಾಳಕ್ಕೆ ಇನ್ನೂ ಸಿಕ್ಕಿಲ್ಲ ನೆಮ್ಮದಿ

ಚುಕ್ಕಾಣ ಚುಕ್ಕಿ ಹೊಯ್ಯ ಚುಕ್ಕಾಣ ಚುಕ್ಕಿ ಹೊಯ್ಯ........
ಅಲ್ಲೇ ಇದೆಯೋ ಬಾನಲ್ಲೇ ಇದೆಯೋ ಹೊಯ್ಯ......
ಸಂಜೆಗತ್ತಲಲ್ಲಿ ನೀಲಿ ಆಕಾಶದ ನಕ್ಷತ್ರಗಳನ್ನು ಎಣಿಸುತ್ತಾ ಸಮುದ್ರದಲೆಗಳ ಮಧ್ಯೆ ಬಿರುಸಾಗಿ ಬಲೆ ಬೀಸುತ್ತಾ ಮೀನು ಹಿಡಿಯುವಾಗಿನ ಈ ಪಾಡ್ದನ ಈಗ ನೆನಪು ಮಾತ್ರ.
ಕಿವಿಗಿಂಪಾಗುವ ಈ ಪಾಡ್ದನ ಹಾಡುತ್ತಾ ಮೀನು ಹಿಡಿಯುವ ಕಾಯಕದಲ್ಲಿ ತೊಡಗಿದ್ದ ಕರಾವಳಿಯ ಮೊಗವೀರರ ಮೊಗದಲ್ಲಿ ಮಂದಹಾಸವಿಲ್ಲ.
ಇತ್ತ ಬಯಲು ಸೀಮೆ ಎನಿಸಿರುವ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ತಾವು ಗಂಗೆಯ ವಂಶಸ್ಥರು ಎನಿಸಿಕೊಳ್ಳುತ್ತಿರುವ ಗಂಗಾಮತಸ್ಥರಿಗೆ ಗಂಗೆಯೇ ಕೃಪೆ ತೋರುತ್ತಿಲ್ಲ.
ಮೀನು ಹಿಡಿಯುವುದನ್ನು ಬಿಟ್ಟರೆ ಬೇರಾವುದೇ ಕೆಲಸ ಗೊತ್ತಿಲ್ಲದಂತಿರುವ ಬೆಸ್ತನ ಬದುಕಿನಲ್ಲಿನ ಬೆಸುಗೆ ಬಿಟ್ಟಿದೆ.
ಇದು ರಾಜ್ಯದಲ್ಲಿ ಇರುವ ಮೀನುಗಾರರು ಅಂದರೆ, ಬೆಸ್ತ ಸಮುದಾಯದ ಈಗಿನ ದುಸ್ಥಿತಿ.
ಮೀನು ತಿಂದವರು ಅದರಲ್ಲೂ ಸಮುದ್ರದ ಮೀನು ತಿಂದವರ ಬುದ್ಧಿಮತ್ಥೆ ಹೆಚ್ಚಾಗುತ್ತದೆ. ಚುರುಕಿನಿಂದ ಚಾಲಾಕಿಗಳಾಗಿರುತ್ತಾರೆ ಎಂಬ ಪ್ರತೀತಿ ಇದೆ. ಆದರೆ, ಇದೇ ಮೀನು ತಿನ್ನಿಸುವವರ ಬದುಕು 'ಮಂದ'ವಾಗಿದೆ.
ಕೃಷಿ ಕ್ಷೇತ್ರದಲ್ಲೇ ಮೀನುಗಾರಿಕೆಯನ್ನೂ ಸೇರಿಸಲಾಗಿದೆ. ಆದರೆ, ಕೃಷಿಕರಿಗೆ ಸಿಕ್ಕಷ್ಟು ಸವಲತ್ತುಗಳು ಮೀನುಗಾರರಿಗೆ ಸಿಗುತ್ತಿಲ್ಲ.
ಇವರಿಗೆ ಬುಟ್ಟಿ ತುಂಬ ಮೀನು ಹಿಡಿದರಷ್ಟೇ ಹೊಟ್ಟೆ ತುಂಬುತ್ತದೆ. ಇಲ್ಲವಾದರೆ, ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ.
ಮೀನು ಕೃಷಿಯನ್ನು ಅವಲಂಬಿಸಿರುವ 39 ಕ್ಕೂ ಹೆಚ್ಚು ಉಪ ಸಮುದಾಯಗಳು ನಮ್ಮಲ್ಲಿವೆ. ಪ್ರಾದೇಶಿಕತೆಗೆ ತಕ್ಕಂತೆ ಈ ಸಮುದಾಯವನ್ನು ನಾನಾ ಹೆಸರಿನಲ್ಲಿ ಕರೆಯಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರ ಕನ್ನಡದಲ್ಲಿ ಇವರನ್ನು ಮೊಗವೀರ, ಮೊಗೇರಾ(ಆಡು ಭಾಷೆಯಲ್ಲಿ ಮೊಗವೀರರನ್ನು ಹೀಗೆ ಕರೆಯಲಾಗುತ್ತದೆ), ಗಂಗಾಮತಸ್ಥ, ಬೆಸ್ತ, ಮಜಿದಾ, ಅಂಬಿಗಾ, ಅಂಬಿಗೇರ್, ಕಬ್ಬಲಿಗ, ಸುನಗಾರ, ಚಾಲುವಾರ, ಕಬ್ಬೇರು, ಕೋಳಿ, ನಾಟಿಕಾರ್, ಟೋಕರೆ ಕೋಳಿ, ಕೋಯ, ಬಿನ್ನಕೋಯ ಹೀಗೆ ಹಲವು ಹೆಸರು ಇವೆ.
ರಾಜ್ಯದಲ್ಲಿ ನಡೆಯುತ್ತಿರುವ ಮೀನು ಕೃಷಿಯಲ್ಲಿ ಶೇ. 70 ಕ್ಕಿಂತಲೂ ಹೆಚ್ಚು ಸಮುದ್ರದಲ್ಲಿ ಆಗುತ್ತದೆ. ಹೀಗಾಗಿ ಮೀನುಗಾರಿಕೆ ಸಮೃದ್ಧವಾಗಿದ್ದರೂ ಈ ಸಮುದಾಯ ಇದು ಹೊಂದಿಕೆಯಾಗುತ್ತಿಲ್ಲ. ಏಕೆಂದರೆ, ಈ ಮೀನುಗಾರರ ಜಾಗದಲ್ಲಿ ಈಗ ಯಾಂತ್ರೀಕೃತ ದೋಣಿಗಳು, ಹಡಗುಗಳು ಬಂದಿವೆ. ಈ ಮೂಲಕ ಮೀನುಗಾರರ ಬಹುತೇಕ ಕೆಲಸವನ್ನು ಕಸಿದುಕೊಂಡಿವೆ. ಅಲ್ಲದೇ, ಸ್ಥಿತಿವಂತ ಮೊಗವೀರರು ಇಂತಹ ಅತ್ಯಾಧುನಿಕ ದೋಣಿ ಮತ್ತು ಹಡಗು ಹೊಂದಿದ್ದು, ಅವರ ಬಳಿ ಉಳಿದ ಮೀನುಗಾರರು ದಿನಕ್ಕಿಷ್ಟು ಸಂಬಳಕ್ಕೆ ಮೀನು ಹಿಡಿಯುವ ಕಾಯಕಕ್ಕೆ ಹೋಗಬೇಕು.
ಈ ಕಾರಣದಿಂದ ಮೊಗವೀರರಲ್ಲಿ ಬಹುತೇಕ ಮಂದಿ ತಮ್ಮ ವೃತ್ತಿಯನ್ನು ಬಿಟ್ಟು ನಗರಗಳಿಗೆ ಉದ್ಯೋಗ ಹರಸಿ ವಲಸೆ ಹೋಗುತ್ತಿದ್ದಾರೆ. ಅಲ್ಪಸ್ವಲ್ಪ ಜಮೀನು ಇದ್ದವರು ಕೃಷಿಗೆ ಪರಿವರ್ತಿತರಾಗಿದ್ದರೆ, ಮತ್ತೆ ಹಲವು ಮಂದಿಯ ಜೀವನಕ್ಕೆ ಕೂಲಿ ಕೆಲಸಗಳು ಆಸರೆಯಾಗಿವೆ.
ಹೀಗೆ ವಲಸೆ ಹೋದವರಲ್ಲಿ ಬಹುತೇಕ ಜನರು ಶೈಕ್ಷಣಿಕವಾಗಿ ಮುಂದೆ ಬಂದಿದ್ದು ಸ್ವಯಂಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ. ದೂರದ ಮುಂಬೈಗೆ ಸಾಕಷ್ಟು ಜನ ವಲಸೆ ಹೋಗಿದ್ದು, ಅಲ್ಲಿ ಹೊಟೇಲ್ ಉದ್ಯಮದಲ್ಲಿ ತಲ್ಲೀನರಾಗಿದ್ದಾರೆ. ಹೀಗಾಗಿ ಕರಾವಳಿ ಪ್ರದೇಶದ ಮೀನುಗಾರ ಸಮುದಾಯದವರಲ್ಲಿ ಶೇ. 35 ರಿಂದ 40 ಮಂದಿ ಮೀನುಗಾರಿಕೆಯನ್ನೇ ಮುಂದುವರೆಸಿಕೊಂಡು ಆರ್ಥಿಕ, ಶೈಕ್ಷಣಿಕವಾಗಿ ಮೇಲೇರದೇ ಇದ್ದ ಸ್ಥಿತಿಯಲ್ಲೇ ಇದ್ದರೆ, ಉಳಿದವರು ನಗರ ಪ್ರದೇಶಗಳಲ್ಲಿ ಉತ್ತಮ ಸ್ಥಿತಿಯ ಜೀವನ ಸಾಗಿಸುತ್ತಿದ್ದಾರೆ.
ಈ ಕರಾವಳಿ ಪ್ರದೇಶದ ಮೀನುಗಾರರ ಪರಿಸ್ಥಿತಿಗೂ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಮೀನುಗಾರರಿಗೂ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದು.
ಬೆಸ್ತರೆಂದೂ ಕರೆಯಿಸಿಕೊಳ್ಳುವ ಈ ಸಮುದಾಯ ಉತ್ತರ ಕರ್ನಾಟಕ, ಮುಂಬೈ ಮತ್ತು ಹೈದ್ರಾಬಾದ್ ಕರ್ನಾಟಕದಲ್ಲಿ ಹೆಚ್ಚು ಕೇಂದ್ರೀಕೃತವಾಗಿದೆ. ಈ ಭಾಗದವರಿಗೆ ಬೆಸ್ತರು, ಗಂಗಾಮತಸ್ಥರು, ಕೋಯಿ, ಕೋಳಿ, ಚಾಲುವಾರ, ಕಬ್ಬೇರು, ಕೋಳಿ, ನಾಟಿಕಾರ್, ಟೋಕರೆ ಕೋಳಿ, ಕೋಯ, ಬಿನ್ನಕೋಯ ಸೇರಿದಂತೆ ಹಲವು ಹೆಸರಿನಿಂದ ಕರೆಯಲಾಗುತ್ತದೆ.
ಇವರೆಲ್ಲಾ ಆರ್ಥಿಕವಾಗಿ ತೀರಾ ಹಿಂದುಳಿದವರು. ಬಹುತೇಕ ಮಂದಿ ತುಂಗಭದ್ರಾ, ಕೃಷ್ಣಾ, ಭೀಮ, ಕಾವೇರಿ ಸೇರಿದಂತೆ ಹಲವು ನದಿ ತೀರದಲ್ಲಿದ್ದು, ಇಲ್ಲಿಯೇ ಮೀನುಗಾರಿಕೆ ಮಾಡುತ್ತಿದ್ದಾರೆ. ಆದರೆ, ಇವರಲ್ಲಿ ಶೇ. 95 ಕ್ಕಿಂತಲೂ ಹೆಚ್ಚು ಆರ್ಥಿಕವಾಗಿ ಹಿಂದುಳಿದವರು, ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಗಿಟ್ಟಿಸುವಷ್ಟು ಶೈಕ್ಷಣಿಕವಾಗಿ ಮುಂದುವರೆದಿಲ್ಲ.
ಈ ಸಮುದಾಯದ ಮೀನು ಕೃಷಿಯ ವೃತ್ತಿಯನ್ನು ಇತರೆ ಧರ್ಮೀಯರು ಮತ್ತು ಮೇಲ್ವರ್ಗದ ಜನರು ಕಿತ್ತುಕೊಂಡಿದ್ದಾರೆ. ಮೀನುಗಾರಿಕೆಗೆ ಅಗತ್ಯವಾದ ಆಧುನಿಕ ದೋಣಿಗಳನ್ನು ಖರೀದಿಸಲು ಇವರು ಅಶಕ್ತರು. ಕೇವಲ ಉಟ್ಟು ಹಾಕಿ ದಿನವಿಡೀ ಮೀನು ಹಿಡಿದು ಮಾರಾಟ ಮಾಡಿದರೂ ಕುಟುಂಬದ ಸದಸ್ಯರ ಹೊಟ್ಟೆ ತುಂಬಿಸುವುದೂ ಕಷ್ಟವಾಗಿದೆ. ಅಲ್ಲದೇ, ಆಡಳಿತಗಳ ಕಟ್ಟುನಿಟ್ಟಾದ ಕಾನೂನುಗಳಿಂದ ಮೀನು ಹಿಡಿಯಲಾರದಷ್ಟು ಸ್ಥಿತಿಗೆ ಬಂದಿದ್ದಾರೆ ಇವರು. ಏಕೆಂದರೆ, ನದಿ ಮತ್ತು ಹಳ್ಳಿಗಳಲ್ಲಿರುವ ದೊಡ್ಡ ದೊಡ್ಡ ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಲಾಗುತ್ತದೆ. ಹಣವಂತರು ಗುತ್ತಿಗೆ ತೆಗೆದುಕೊಂಡು ಈ ಮೀನುಗಳನ್ನು ಶೇಖರಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಾರೆ. ಆದರೆ, ಇದೇ ವೃತ್ತಿಯನ್ನು ಹೊಂದಿರುವ ಬೆಸ್ತರಿಗೆ ಅಥವಾ ಗಂಗಾಮತಸ್ಥರಿಗೆ ಈ ಗುತ್ತಿಗೆ ಸಿಗುವುದಿಲ್ಲ. ಏಕೆಂದರೆ, ಇವರು ಹಣವಂತರಿಗೆ ಸ್ಪರ್ಧೆ ನೀಡುವಷ್ಟು ಸ್ಥಿತಿಯಲ್ಲಿಲ್ಲ.
ಗಂಗಾಮತಸ್ಥರು ಎಂದಾಕ್ಷಣ ಪಾವಿತ್ರ್ಯವಂತರು ಎಂದು ಈ ಸಮುದಾಯವನ್ನು ನಮ್ಮ ಸಮಾಜ ಪರಿಗಣಿಸುತ್ತಿಲ್ಲ. ಈಗಿನ ಪ್ರಜ್ಞಾವಂತ ಸಮಾಜ ಇವರನ್ನು ಅಸ್ಪೃಶ್ಯರೆಂದೇ ಭಾವಿಸಿದೆ. ಹೀಗಾಗಿ ಈ ಸಮುದಾಯವನ್ನು ಊರಿನಿಂದ ಹೊರಗಿಡುವ ಕೆಟ್ಟ ಸಂದ್ರದಾಯ ಇನ್ನೂ ಚಾಲ್ತಿಯಲ್ಲಿರುವುದು ತಲೆ ತಗ್ಗಿಸುವ ಸಂಗತಿ. ಮೇಲ್ಜಾತಿಯವರ ಬಳಿ ಇವರು ಸರಿ ಸಮಾನರಾಗಿ ನಿಲ್ಲುವಂತಿಲ್ಲ. ಮೇಲ್ಜಾತಿಯವರು ಕುಳಿತುಕೊಳ್ಳುವ ಗ್ರಾಮದ ಅರಳಿ ಕಟ್ಟೆಯಲ್ಲಿ ಇವರು ಕುಳಿತುಕೊಳ್ಳುವಂತಿಲ್ಲ. ಇದೇ ಮೇಲ್ಜಾತಿಯವರ ಮನೆಯಲ್ಲಿ ಕೂಲಿ ಮಾಡಿದರೂ ಅವರ ಮನೆಗಳ ಒಳಗೆ ಹೋಗುವಂತಿಲ್ಲ. ಮನೆಯ ಹಿಂಬಾಗಿಲು ಅಥವಾ ಮುಂಬಾಗಿಲ ಹೊಸ್ತಿಲಲ್ಲಿ ಇವರಿಗೆ ಪ್ರತ್ಯೇಕವಾದ ತಟ್ಟೆಯಲ್ಲಿ ಊಟಕ್ಕಿಟ್ಟು ಕಳುಹಿಸುತ್ತಾರೆ ಮೇಲ್ಜಾತಿಯವರು.
ಊರ ದೇವಾಲಯಗಳಿಗೆ ಪ್ರವೇಶ ನಿಷಿದ್ಧ. ಊರಿನಿಂದ ಸ್ವಲ್ಪ ದೂರದಲ್ಲಿ ದಲಿತರ ಕೇರಿಗಳಿದ್ದರೆ, ಗಂಗಾಮತಸ್ಥರ ಕೇರಿ ಸ್ವಲ್ಪ ಹತ್ತಿರದಲ್ಲಿರುತ್ತದೆ. ಇಂತಹ ಹೀನಾಯ ಜೀವನ ಇವರದ್ದು.
ಸಮಾಜ ಗಂಗಾಮತಸ್ಥ ಅಥವಾ ಬೆಸ್ತರನ್ನು ಈ ರೀತಿ ನೋಡಿದರೆ, ಈ ಆಧುನಿಕ ಯುಗದಲ್ಲೂ ಸಮುದಾಯ ತನ್ನ ಹಳೆಯ ಕಂದಾಚಾರಗಳನ್ನು ಬಿಟ್ಟಿಲ್ಲ. ಅನಿಷ್ಟ ಪದ್ಧತಿಗಳಲ್ಲಿ ಒಂದಾದ ದೇವದಾಸಿ ಪದ್ಧತಿಯನ್ನು ಇನ್ನೂ ರೂಢಿಸಿಕೊಂಡು ಬಂದಿದೆ ಈ ಸಮುದಾಯ. ಇಂತಹ ಪದ್ಧತಿ ಆಚರಿಸುವುದು ಬೇಡ ಎಂದು ತಿಳಿ ಹೇಳಿದರೂ ಸಮುದಾಯದ ಕುಟುಂಬಗಳು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಅರೆಬೆತ್ತಲೆ ಮಾಡಿ ಬೇವಿನ ಸೊಪ್ಪಿನಿಂದ ಮೈಮುಚ್ಚಿ ದೇವರಿಗೆ ಹರಕೆ ತೀರಿಸುವುದನ್ನು ಬಿಟ್ಟಿಲ್ಲ. ಬಿಡುವ ಲಕ್ಷಣಗಳೂ ಇಲ್ಲ.
ಇಂತಹ ವಿಲಕ್ಷಣ ಸಂಪ್ರದಾಯವನ್ನು ಸವದತ್ತಿ, ಗುಲ್ಬರ್ಗಾ, ಬೀದರ್, ಬಿಜಾಪುರ ಮತ್ತಿತರೆ ಪ್ರದೇಶಗಳಲ್ಲಿ ಆಚರಿಸಲಾಗುತ್ತಿದೆ.
ರಾಜ್ಯದಲ್ಲಿ ಸುಮಾರು 25 ಲಕ್ಷ ಜನಸಂಖ್ಯೆ ಇದ್ದರೂ ರಾಜಕೀಯವಾಗಿ ತನ್ನ ಪ್ರಾಬಲ್ಯ ಮೆರೆಯಲು ಸಾಧ್ಯವಾಗಿಲ್ಲ. ಮನೋರಮಾ ಮಧ್ವರಾಜ್, ಬಾಬುರಾವ್ ಚಿಂಚನ್ಸೂರ್್ರಂತಹ ಬೆರಳೆಣಿಕೆಯಷ್ಟು ಜನರು ರಾಜಕೀಯದಲ್ಲಿ ತೊಡಗಿದ್ದಾರಾದರೂ ಸಮುದಾಯಕ್ಕೆ ಹೇಳಿಕೊಳ್ಳುವಂತಹ ರಾಜಕೀಯ ಬೆಂಬಲ ಇಲ್ಲ.
ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಈ ಸಮುದಾಯವನ್ನು ಇತರೆ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ. ಆದರೆ, ಈ ವರ್ಗದಲ್ಲಿ ಹೆಚ್ಚು ಜಾತಿಗಳು ಇರುವುದರಿಂದ ಅವುಗಳೊಂದಿಗೆ ಮೀಸಲಾತಿಗೆ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದೆ. ಇದನ್ನು ಮನಗಂಡ ಸರ್ಕಾರ 1996 ರಲ್ಲಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿರ್ಧಾರಕ್ಕೆ ಬಂದಿತ್ತು. ಆದರೆ, ಸಮುದಾಯಗಳಲ್ಲಿರುವ ಉಪಜಾತಿಗಳ ಬಗ್ಗೆ ಕೇಂದ್ರ ಸರ್ಕಾರ ಸೃಷ್ಟಿಸಿರುವ ಗೊಂದಲಗಳಿಂದಾಗಿ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಮೊಗವೀರರಲ್ಲಿ ಸಾಕಷ್ಟು ಕುಟುಂಬಗಳು ಇನ್ನೂ ಸಾಮಾಜಿಕವಾಗಿ ಅಭಿವೃದ್ಧಿ ಕಾಣಲು ಸಾಧ್ಯವಾಗಿಲ್ಲ. ಸರ್ಕಾರಗಳು ಇಂತಹ ವರ್ಗಗಳ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಹ ಯೋಜನೆಗಳನ್ನು ರೂಪಿಸುವುದು ಅತ್ಯಗತ್ಯವಾಗಿದೆ - ಲಕ್ಷ್ಮಣ್ ಬಿ. ಕಾಂಚನ್, ಮೊಗವೀರ ಸಂಘದ ಮಾಜಿ ಅಧ್ಯಕ್ಷ.
ಹರಿಜನರಂತೆಯೇ ಕಡುಕಷ್ಟದ ಜೀವನ ಸಾಗಿಸುತ್ತಾ ಸಮಾಜದಲ್ಲಿ ತೀರಾ ಹಿಂದುಳಿದಿರುವ ಗಂಗಾಮತಸ್ಥ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಸ್ವಲ್ಪ ಮಟ್ಟಿನ ಮೀಸಲಾತಿ ದೊರಕಿ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ - ಎಚ್. ದೇವೇಂದ್ರಪ್ಪ, ಗಂಗಾಮತಸ್ಥ ಸಮುದಾಯದ ಮುಖಂಡ.

ಹಕ್ಕಿಪಿಕ್ಕಿ: ಪಕ್ಷಿರಾಜರಿಗೀಗ ಬೇಟೆಯಿಲ್ಲ

ಇವರು ಪಕ್ಷಿ ಸಂಕುಲಕ್ಕೇ ರಾಜರು. ಆದರೆ, ಪಕ್ಷಿಗಳು ಮಾತ್ರ ಸಿಗುತ್ತಿಲ್ಲ. ಕಾಡಿನರಸರೆಂಬ ಪ್ರತೀತಿಯೂ ಇದೆಯಾದರೂ ಕಾಡು ಪ್ರಾಣಿಗಳನ್ನು ಮುಟ್ಟಲು ಅರಣ್ಯ ರಕ್ಷಕರು ಬಿಡುವುದಿಲ್ಲ. ಇತ್ತ ಕೃಷಿ ಮಾಡೋಣವೆಂದರೆ ಭೂಮಿಯೂ ಇಲ್ಲ.
ಹೀಗಾಗಿ ಇದ್ದ ಬೇಟೆ ವೃತ್ತಿ ಕೈಬಿಟ್ಟಿದೆ. ಬೇಟೆಯಾಡುತ್ತಿದ್ದ ಹಲವು ಕೈಗಳಿಗೆ ಇಂದು ಭಿಕ್ಷೆ ಬೇಡುವ ಪರಿಸ್ಥಿತಿ. ಈ ದೈನೇಸಿ ಜೀವನ ಸಾಗಿಸುತ್ತಿರುವವರು ಹಕ್ಕಿಪಿಕ್ಕಿ ಸಮುದಾಯ.
ಹುಟ್ಟೂರು ದೂರದ ಗುಜರಾತ್. ಸ್ವಾತಂತ್ರ್ಯಪೂರ್ವದಲ್ಲಿ ಕಾಡುಮೇಡುಗಳಲ್ಲಿ ಬೇಟೆಯಾಡುತ್ತಾ ದೇಶದ ವಿವಿಧ ರಾಜ್ಯಗಳಲ್ಲಿ ಹಂಚಿಹೋಗಿದೆ ಈ ಸಮುದಾಯ. ಅದೇ ರೀತಿ ಕರ್ನಾಟಕದ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಮೊದಲು ನೆಲೆಗೊಂಡರು. ಸುತ್ತಲೂ ಇರುವ ಸಣ್ಣಪುಟ್ಟ ಕಾಡಿನಲ್ಲಿ ಬೇಟೆಯಾಡುತ್ತಾ ಕೈಗೆ ಸಿಕ್ಕ ಕಾಡು ಪ್ರಾಣಿಗಳನ್ನು ಒಡೆದುರುಳಿಸುತ್ತಿದ್ದರು. ಹೀಗೆ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಿ ಅದರ ಮಾಂಸವನ್ನು ಮಾರಾಟ ಮಾಡುತ್ತಿದ್ದರು.
ಇದರಿಂದ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರು. ಆದರೆ, ದಿನ ಕಳೆದಂತೆ ಅರಣ್ಯ ಕಾನೂನುಗಳು ಬಿಗಿಗೊಳ್ಳುತ್ತಾ ಬಂದವು. ಪರಿಣಾಮ ಈ ಹಕ್ಕಿಪಿಕ್ಕಿ ಸಮುದಾಯ ಕಕ್ಕಾಬಿಕ್ಕಿಯಾಯಿತು. ಏಕೆಂದರೆ, ನಂಬಿಕೊಂಡಿದ್ದ ಬೇಟೆಯನ್ನೇ ಇಂತಹ ಕಠಿಣ ಕಾನೂನುಗಳು ಕಿತ್ತುಕೊಂಡಿದ್ದವು.
ರಾಜ್ಯದಲ್ಲಿ ಹೆಗ್ಗಡದೇವನಕೋಟೆ, ನಾಗಮಂಗಲ, ಕೆಂಗೇರಿ, ಪಾಂಡವಪುರ, ಚಾಮರಾಜನಗರ, ಶಿವಮೊಗ್ಗ, ಕೋಲಾರ, ಬೀದರ್, ಕುಂಬಳಗೋಡು, ಚಿಕ್ಕಬಳ್ಳಾಪುರ, ಕನಕಪುರ, ಹುಬ್ಬಳ್ಳಿ, ಬನ್ನೇರುಘಟ್ಟ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಈ ಸಮುದಾಯದ ಕುಟುಂಬಗಳಿವೆ.
ಬೇಟೆಯಾಡುತ್ತಾ ಊರಿಂದ ಊರಿಗೆ ಅಲೆಯುತ್ತಿದ್ದ ಇವರನ್ನು ಆದಿವಾಸಿ ಅಲೆಮಾರಿ ಬುಡಕಟ್ಟು ಸಮುದಾಯದ ವರ್ಗವೆಂದು ಹೇಳಲಾಗುತ್ತದೆ. ಹತ್ತಾರು ಕುಟುಂಬಗಳು ಸೇರಿ ಊರಿನ ಹೊರಗೆ ಖಾಲಿ ಜಾಗವೊಂದರಲ್ಲಿ ಟೆಂಟ್್ಗಳನ್ನು ಹಾಕಿಕೊಂಡು ಅಲ್ಲಿಯೇ ಕೆಲ ದಿನ ಅಥವಾ ತಿಂಗಳ ಕಾಲ ಜೀವನ ಸಾಗಿಸುತ್ತಿದ್ದರು.
ಹೀಗೆ ಹುಣಸೂರು ತಾಲೂಕಿನ ಒಂದು ಪ್ರದೇಶದಲ್ಲಿ ವಾಸವಾಗಿದ್ದ ಈ ಸಮುದಾಯವನ್ನು ಕಂಡುಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ಅವರು ಮಮ್ಮಲ ಮರುಗಿದ್ದರು. ಸಮುದಾಯಕ್ಕೆ ಒಂದು ನೆಲೆ ನೀಡಬೇಕೆಂದು ಪಣ ತೊಟ್ಟ ಅರಸು ಅವರು ಹಕ್ಕಿಪಿಕ್ಕಿ ಕುಟುಂಬಗಳು ನೆಲೆಸಿದ್ದ ಪ್ರದೇಶವನ್ನೇ 'ಪಕ್ಷಿರಾಜಪುರ' ಎಂದುನಾಮಕರಣ ಮಾಡಿದರು. ಈ ಪ್ರದೇಶದಿಂದ 2 ಕಿಲೋ ಮೀಟರ್ ದೂರದಲ್ಲಿ ವಾಸಿಸುತ್ತಿದ್ದ ಪ್ರದೇಶಕ್ಕೆ ಎರಡನೇ ಪಕ್ಷಿರಾಜಪುರ ಎಂದು ನಾಮಕರಣ ಮಾಡಿದರು. ಗರುಡ ಚಿಹ್ನೆಯನ್ನೂ ನೀಡಿದ್ದರಂತೆ. ಅಂದಿನಿಂದ ಇಂದಿನವರೆಗೆ ಸಮುದಾಯದವರ ಬೇಟೆಗೆ ಪಕ್ಷಿಗಳು ಸಿಗದಿದ್ದರೂ ಇವರು ಪಕ್ಷಿರಾಜರಾಗಿದ್ದಾರೆ.
ಹೀಗೆ ವಿವಿಧ ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿರುವ ಸಮುದಾಯಕ್ಕೆ ಸೇರಿದ ಸುಮಾರು 25 ರಿಂದ 30 ಸಾವಿರ ಜನರಿದ್ದಾರೆ.
ಇವರಲ್ಲಿ ಬೇಟೆ ಸ್ಥಗಿತಗೊಳ್ಳುತ್ತಿದ್ದಂತೆ ಹಕ್ಕಿಪಿಕ್ಕಿಗಳಿಗೆ ದಿಕ್ಕು ತೋಚದಂತಾಯಿತು. ಇದೇ ವೇಳೆ ಸ್ವಲ್ಪ ಮಟ್ಟಿಗೆ ನೆರವಿಗೆ ಬಂದದ್ದು ಸರ್ಕಾರ. ಕೆಲವು ಹಳ್ಳಿಗಳ ಹಕ್ಕಿಪಿಕ್ಕಿ ಕುಟುಂಬಗಳಿಗೆ ಸರ್ಕಾರದ ಭೂಮಿಯನ್ನು ವ್ಯವಸಾಯ ಮಾಡಲು ಬಿಟ್ಟುಕೊಟ್ಟಿತು. ಈ ಜಮೀನಿನಲ್ಲಿ ಕೆಲವರು ಕೃಷಿಯನ್ನು ನಡೆಸಿದರೆ, ಮತ್ತೆ ಕೆಲವರು ಅಲೆಮಾರಿಗಳಾದರು. ಊರಿಂದ ಊರಿಗೆ ವಲಸೆ ಹೋಗುತ್ತಾ ಸಣ್ಣ ಪುಟ್ಟ ಕೂಲಿ ಕೆಲಸಗಳನ್ನು ರೂಢಿಸಿಕೊಂಡು ಬಂದಿದ್ದಾರೆ.
ಸಮುದಾಯದ ವಿಶೇಷವೆಂದರೆ, ಬಹುತೇಕ ಜನ ಆಸ್ಪತ್ರೆ ಮುಖವನ್ನೇ ನೋಡುವುದಿಲ್ಲ. ಏಕೆಂದರೆ, ಬೇಟೆಯಾಡುತ್ತಾ ಕಾಡಿಗೆ ಹೋಗುತ್ತಿದ್ದ ಅವರು ಬೇಟೆಯ ಜತೆಗೆ ಗಿಡಮೂಲಿಕೆಗಳನ್ನೂ ಸಂಗ್ರಹಿಸುತ್ತಿದ್ದರು. ಇದೇ ಅವರಿಗೆ ಸಿದ್ಧೌಷಧ. ಎಂತಹ ರೋಗವಾದರೂ ಗಿಡಮೂಲಿಕೆಗಳಿಂದ ತಯಾರಿಸುವ ಔಷಧಿಯನ್ನು ನೀಡುವುದು ವಾಡಿಕೆ. ಇಂತಹ ಔಷಧಿಯನ್ನು ತಯಾರಿಸುವ ವೃತ್ತಿಯನ್ನೇ ಕೆಲವರು ಮುಂದುವರೆಸಿದ್ದಾರೆ.
ಮತ್ತೆ ಕೆಲವು ಕುಟುಂಬಗಳ ಮಹಿಳೆಯರು ಕಟ್ಟುವ ಪ್ಲಾಸ್ಟಿಕ್ ಹೂವು, ತೋರಣವನ್ನು ಪುರುಷರು ನಗರ, ಪಟ್ಟಣ ಪ್ರದೇಶಗಳಿಗೆ ತಂದು ಮಾರಾಟ ಮಾಡುತ್ತಾರೆ.
ಬಹುತೇಕ ಮಂದಿ ಅನಕ್ಷರಸ್ಥರಾದರೂ ವ್ಯಾಪಾರ ವೃತ್ತಿಯಲ್ಲಿ ಹಿಂದೆ ಬಿದ್ದಿಲ್ಲ. ಪ್ಲಾಸ್ಟಿಕ್ ಹೂವು ಸೇರಿದಂತೆ ಹತ್ತು ಹಲವಾರು ಅಲಂಕಾರಿಕಾ ವಸ್ತುಗಳನ್ನು ಹೊರ ರಾಜ್ಯಗಳಿಂದ ಖರೀದಿಸಿ ನಮ್ಮ ರಾಜ್ಯದ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ. ನಗರ ಪ್ರದೇಶಗಳಲ್ಲಿ ಆಯೋಜನೆಗೊಳ್ಳಲಿರುವ ವಸ್ತು ಪ್ರದರ್ಶನಗಳಲ್ಲಿ ಇವರದೊಂದು ಮಳಿಗೆ ಇರುತ್ತದೆ. ಅಲ್ಲಿ ಅಲಂಕಾರಿಕಾ ವಸ್ತುಗಳನ್ನು ಪ್ರದರ್ಶನಕ್ಕಿಡುತ್ತಾರೆ.
ಇದರೊಂದಿಗೆ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಗಳು ಮತ್ತು ಇತರೆ ವಸ್ತುಗಳ ಬಗ್ಗೆ ಮಾಹಿತಿಯನ್ನೂ ನೀಡುತ್ತಾರೆ ಮತ್ತು ವಸ್ತುಗಳ ಮಾರಾಟವನ್ನೂ ಮಾಡುತ್ತಾರೆ. ಇದರಲ್ಲಿ ಬಂದ ಅಲ್ಪಸ್ವಲ್ಪ ಲಾಭದಿಂದ ಜೀವನ ಸಾಗುತ್ತಿದೆ.
ಇಂತಹ ವ್ಯಾಪಾರದಲ್ಲಿ ತೊಡಗಿರುವ ಈ ವರ್ಗ ಒಂದು ರೀತಿಯಲ್ಲಿ ಎಲೈಟ್ ಗುಂಪಿಗೆ ಸೇರಿದ್ದು.
ನಗರ ಪ್ರದೇಶದಲ್ಲಿ ಇನ್ನೂ ಒಂದು ವರ್ಗವಿದೆ. ಬೆಂಗಳೂರಿನಂತಹ ನಗರಗಳಲ್ಲಿ ವಾಸಿಸುತ್ತಿರುವ ಈ ಸಮುದಾಯದ ಕುಟುಂಬಗಳಲ್ಲಿ ಕೆಲವು ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿದ್ದರೆ, ಮತ್ತೆ ಕೆಲವು ರಸ್ತೆ ಬದಿಯಲ್ಲಿ, ವೃತ್ತಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುವ ಕಾಯಕ ಮುಂದುವರೆಸಿವೆ.
ಗ್ರಾಮಾಂತರ ಪ್ರದೇಶದಲ್ಲಿರುವ ಮತ್ತು ಕಾಡಿನಂಚಿನಲ್ಲಿರುವ ಹಕ್ಕಿಪಿಕ್ಕಿ ಸಮುದಾಯ ಬಹುತೇಕ ಬೇಟೆಗಾರಿಕೆಯನ್ನು ನಿಲ್ಲಿಸಿದ್ದರೂ ಅರಣ್ಯ ಅಥವಾ ಅದರ ಸುತ್ತಮುತ್ತ ಯಾವುದಾದರೂ ಪ್ರಾಣಿ ಸಾವನ್ನಪ್ಪಿದರೆ ಇವರೇ ಕಾರಣಕರ್ತರೆಂಬ ಕೇಸುಗಳನ್ನು ಹಾಕಲಾಗುತ್ತಿದೆ. ಈ ಮೂಲಕ ಅರಣ್ಯ ಮತ್ತು ಪೊಲೀಸ್ ಇಲಾಖೆ ಕಿರುಕುಳ ನೀಡುತ್ತಿವೆ ಎಂಬ ಅಳಲನ್ನು ಸಮುದಾಯ ತೋಡಿಕೊಳ್ಳುತ್ತಿದೆ. ಆದರೆ, ಇದಕ್ಕೆ ಕಿವಿಗೊಡುವ ಗೋಜಿಗೆ ಯಾರೂ ಹೋಗುತ್ತಿಲ್ಲ.
ಸಾಮಾಜಿಕವಾಗಿ ತೀರ ಹಿಂದುಳಿದಿರುವ ಈ ಸಮುದಾಯವನ್ನು ಪರಿಶಿಷ್ಟ ಪಂಗಡವೆಂದು ಪರಿಗಣಿಸಲಾಗಿದೆ. ಉದ್ಯೋಗ, ಶಿಕ್ಷಣ ಸೇರಿದಂತೆ ಮತ್ತಿತರೆ ಮೀಸಲಾತಿಯೂ ಈ ವರ್ಗಕ್ಕಿದೆ. ಆದರೆ, ಮಾಹಿತಿ ಮತ್ತು ಸಂಪರ್ಕದ ಕೊರತೆ, ಅವಿದ್ಯಾವಂತರಿಂದಾಗಿ ಮೀಸಲಾತಿ ಸೌಲಭ್ಯ ಸಮರ್ಪಕವಾಗಿ ತಲುಪುತ್ತಿಲ್ಲ. ಉದ್ಯೋಗ ಪಡೆದುಕೊಳ್ಳುವಂತಹ ವಿದ್ಯಾರ್ಹತೆ ಇಲ್ಲದವರೇ ಇದ್ದಾರೆ. ಹೀಗಾಗಿ ಸರ್ಕಾರಿ ಉದ್ಯೋಗವೆಂಬುದು ಇವರಿಗೆ ಗಗನ ಕುಸುಮವಾಗಿದೆ.
ನಗರ ಪ್ರದೇಶಗಳಲ್ಲಿ ಓಡಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಮುದಾಯದಲ್ಲಿ ಸ್ವಲ್ಪ ಜಾಗೃತಿ ಮೂಡುತ್ತಿದೆ. ಇತರರನ್ನು ಪ್ರಶ್ನಿಸುವ ಸಾಮಾನ್ಯ ಜ್ಞಾನ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಹತ್ತನೇ ತರಗತಿ ಪೂರ್ಣಗೊಳಿಸಿ ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಸುಮಾರು 10 ಕ್ಕೂ ಹೆಚ್ಚು ಮಂದಿ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಆಯ್ಕೆಯಾಗಿ ಜನಪ್ರತಿನಿಧಿಗಳಾಗಿದ್ದಾರೆ. ಈ ಮೂಲಕ ತಮ್ಮ ಸಮುದಾಯ ಇರುವ ಗ್ರಾಮಗಳ ಉದ್ಧಾರಕ್ಕಾಗಿ ಪಣ ತೊಟ್ಟಿದ್ದಾರೆ.
ಈ ಸ್ವಲ್ಪ ಮಟ್ಟಿನ ಶೈಕ್ಷಣಿಕ ಏಳ್ಗೆಯನ್ನು ಹೊರತುಪಡಿಸಿದರೆ ಹಕ್ಕಿಪಿಕ್ಕಿ ಸಮುದಾಯ ಆರ್ಥಿಕವಾಗಿಯಾಗಲೀ ಅಥವಾ ಸಾಮಾಜಿಕವಾಗಿಯಾಗಲೀ ಮುಂದೆ ಬರಲು ಇನ್ನೂ ಎಣಗಾಡುತ್ತಿದೆ.
ಗುಜರಾತಿ ಇವರ ಮಾತೃಭಾಷೆ. ಮರಾಠಿ, ಕೊಂಕಣಿ, ಹಿಂದಿ ಭಾಷೆಗಳ ಮಂದಿ ಇವರ ಭಾಷೆಯನ್ನು ಸುಲಭವಾಗಿ ಅರ್ಥೈಸಿಕೊಳ್ಳಬಲ್ಲರು.
ಸಮುದಾಯದಲ್ಲಿ ಪ್ರಮುಖವಾಗಿ ಕಾಳಿವಾಳ್, ಮೆವಾಡು ಮತ್ತು ಗುಜರಾತೋ ಎಂಬ ಮೂರು ಪಂಗಡಗಳಿವೆ.
ಈ ಮೂರು ಪಂಗಡಗಳ ಮಧ್ಯೆ ಸಂಬಂಧಗಳು ಬೆಳೆಯುತ್ತವೆ. ಆದರೆ, ಆಚರಣೆ ಮಾತ್ರ ಸ್ವಲ್ಪ ವಿಭಿನ್ನ.
ಕಾಳಿವಾಳ್ ಪಂಗಡದವರು ಕಾಳಿಕಾದೇವಿಯನ್ನು ಪೂಜಿಸಿದರೆ, ಮೆವಾಡು ಅವರಿಗೆ ಯಲ್ಲಮ್ಮ ಆರಾಧ್ಯದೈವ. ಗುಜರಾತೋ ಅವರಿಗೆ ಚಾಮುಂಡಿದೇವಿ.
ಹಬ್ಬ ಹರಿದಿನಗಳಲ್ಲಿ ಗುಜರಾತೋ ಪಂಗಡದವರು ದೇವಿಗೆ ಕೋಣವನ್ನು ಬಲಿ ಕೊಟ್ಟರೆ, ಉಳಿದೆರಡು ಪಂಗಡಗಳು ಕುರಿಯನ್ನು ಬಲಿ ಕೊಡುತ್ತವೆ. ಕಾಳಿವಾಳ್ ಮತ್ತು ಮೆವಾಡ್ ಪಂಗಡದ ಹೆಣ್ಣು ಗುಜರಾತೋ ಪಂಗಡದ ಗಂಡನ್ನು ಮದುವೆಯಾದರೆ ತನ್ನ ತವರು ಮನೆಯಲ್ಲಿ ಹಬ್ಬಗಳಂದು ಬಲಿ ಕೊಡುವ ಕುರಿಯನ್ನು ತಿನ್ನುವಂತಿಲ್ಲ. ಅದೇ ರೀತಿ ಗುಜರಾತೋ ಪಂಗಡದ ಹೆಣ್ಣು ಕಾಳಿವಾಳ್ ಅಥವಾ ಮೆವಾಡ್ ಪಂಗಡದ ಗಂಡನ್ನು ಮದುವೆಯಾದರೆ ತನ್ನ ತವರು ಮನೆಯಲ್ಲಿ ಬಲಿಕೊಡುವ ಕೋಣವನ್ನು ತಿನ್ನುವುದು ನಿಷಿದ್ಧ.
ನಮ್ಮ ಸಮುದಾಯಕ್ಕೆ ಸರ್ಕಾರದ ಯೋಜನೆಗಳ ಸೌಲಭ್ಯಗಳು ಸಿಗುತ್ತಿಲ್ಲ. ಇದುವರೆಗೆ ಸೌಲಭ್ಯಗಳು ಇವೆ ಎಂಬುದೇ ಗೊತ್ತಾಗದೇ ಸಮುದಾಯ
ಕತ್ತಲಲ್ಲಿತ್ತು. ನಮಗೆ ಮೊದಲು ಆಗಬೇಕಿರುವ ಕೆಲಸವೆಂದರೆ ಸಮುದಾಯದ ಹೆಚ್ಚು ಕುಟುಂಬಗಳು ಇರುವ ಕಡೆ ಶಾಲೆ ಮತ್ತು ಹಾಸ್ಟೆಲ್ ಆರಂಭಿಸಬೇಕು.
ಅದೇ ರೀತಿ ನಮ್ಮ ಕೃಷಿ ಭೂಮಿಗಳನ್ನು ನೀರಾವರಿ ವ್ಯವಸ್ಥೆಗೆ ಸೇರಿಸಬೇಕು -ಶೀನು ಸತೀಶ್್ಕುಮಾರ್, ಹಕ್ಕಿಪಿಕ್ಕಿ ಸಮುದಾಯದ ನಾಯಕಿ.

ಅಭಿವೃದ್ಧಿ ಕಾಣಬೇಕಿರುವ ಹೆಳವರು

ಇವರ ಒಟ್ಟು ಸಂಖ್ಯೆ ಸುಮಾರು 80 ಸಾವಿರ. ಇದಿಷ್ಟೇ ಜನರಿಗೆ 180 ಕ್ಕೂ ಹೆಚ್ಚು ಬೆಡಗುಗಳು ಅಥವಾ ಕುಲಗಳು. ಅಂದರೆ, ಪ್ರತಿ 444 ಜನರಿಗೆ ಒಂದು ಕುಲ!
ಅಲ್ಪಸ್ವಲ್ಪ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೂ ವೃತ್ತಿ ಭಿಕ್ಷಾಟನೆ. ಇವರು ಅಂಗವಿಕಲರಲ್ಲ. ಆದರೂ ಅಂಗವೈಕಲ್ಯತೆಗೆ ಸಮಾನವಾದ ಪದದಿಂದ ಸಂಬೋಧಿಸಲಾಗುತ್ತದೆ.
ಅವರೇ ಹೆಳವರು.
ಗ್ರಾಮೀಣ ಪ್ರದೇಶದಲ್ಲಿ ಹೆಳವ ಎಂದರೆ ಸ್ವಾಧೀನ ಕಳೆದುಕೊಂಡ ಕಾಲನ್ನು ಹೊಂದಿರುವವನೆಂದರ್ಥ. ಹೆಳವ ಎಂಬುದು ಒಂದು ಬುಡಕಟ್ಟು ಸಮುದಾಯದ ಹೆಸರು. ಈ ಸಮುದಾಯಕ್ಕೆ ಹೆಳವ ಎಂಬ ಹೆಸರು ಬಂದಿದ್ದಕ್ಕೆ ಹಲವಾರು ಐತಿಹ್ಯಗಳಿವೆ. ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ವ್ಯವಸಾಯ ಮಾಡುವ ಒಂದು ಕುಟುಂಬದಲ್ಲಿ 6 ಮಂದಿ ಗಂಡು ಮಕ್ಕಳಿರುತ್ತಾರೆ. ಅದರಲ್ಲಿ ಒಬ್ಬನಿಗೆ ಕಾಲು ಊನವಾಗಿರುತ್ತದೆ. ಆದರೆ, ಉಳಿದ ಐವರಿಗೆ ಈತನನ್ನು ಕಂಡರೆ ಆಗಿಬರುತ್ತಿರಲಿಲ್ಲ.
ಏಕೆಂದರೆ ನಾವೆಲ್ಲಾ ದುಡಿದು ತಂದಿದ್ದನ್ನು ಈತ ತಿನ್ನುತ್ತಾನೆ ಎಂಬ ಅಲಕ್ಷ್ಯ ಅವರಿಗಿತ್ತು. ಆದರೆ, ತಾಯಿಗೆ ಮಾತ್ರ ಈ ಊನ ಮಗನನ್ನು ಕಂಡರೆ ಎಲ್ಲಿಲ್ಲದ ಅಕ್ಕರೆ. ಇದರಿಂದ ಆಕ್ರೋಶಗೊಂಡ ಐವರು ಅಣ್ಣತಮ್ಮಂದಿರು ಕುಂಟ ಸೋದರನನ್ನು ಹತ್ಯೆ ಮಾಡಲೂ ಮುಂದಾಗುತ್ತಾರೆ. ಆದರೆ, ಮನೆಯಲ್ಲಿ ಸಾಕಿದ್ದ ಬಸವ(ಎತ್ತು) ಪ್ರತಿ ಸಂದರ್ಭದಲ್ಲೂ ಕುಂಟನ ನೆರವಿಗೆ ಬರುತ್ತದೆ.
ಕಡೆಗೊಂದು ದಿನ ಆಸ್ತಿ ಪಾಲು ಮಾಡುವ ಸಂದರ್ಭದಲ್ಲಿ ಮನೆಯ ಹಿರಿಯರೆಲ್ಲಾ ಮಕ್ಕಳನ್ನು ಕೂರಿಸಿ ಐವರು ಮಕ್ಕಳಿಗೆ ಆಸ್ತಿ ಪಾಲು ಮಾಡುತ್ತಾರೆ. ಕುಂಟನಿಗೆ ಸ್ವಂತಕ್ಕೆ ದುಡಿದು ತಿನ್ನುವ ಶಕ್ತಿ ಇಲ್ಲ ಎಂಬ ಕಾರಣಕ್ಕೆ ಆತನ ಮುದ್ದಿನ ಎತ್ತು ಮತ್ತು ಗಂಟೆಯನ್ನು ನೀಡುತ್ತಾರೆ. ಈತ ಪ್ರತಿ ವರ್ಷ ಸುಗ್ಗಿ ಕಾಲದಲ್ಲಿ ಎತ್ತಿನ ಮೇಲೆ ಸವಾರಿ ಮಾಡಿ ಗಂಟೆಯನ್ನು ಬಾರಿಸುತ್ತಾ ಐವರು ಸೋದರರ ಮನೆಗೆ ಹೋಗಿ ತನ್ನ ಪಾಲಿನ ಕಾಳು ಕಡ್ಡಿಯನ್ನು ಭಿಕ್ಷಾ ರೂಪದಲ್ಲಿ ತಂದು ತಿನ್ನಬೇಕೆಂಬ ಷರತ್ತು ವಿಧಿಸುತ್ತಾರೆ.
ಕಾಲಕ್ರಮೇಣ ಈ ಕುಂಟನ ವಂಶವೃಕ್ಷ ಬೆಳೆಯಿತಾದರೂ ಕುಟುಂಬದಲ್ಲಿ ಯಾರೂ ಊನಗೊಂಡವರಿರಲಿಲ್ಲ. ಆದರೆ, ಅಪ್ಪ ಮಾಡಿದ ಭಿಕ್ಷಾಟನೆಯನ್ನು ಮಕ್ಕಳು, ಅವರ ಮಕ್ಕಳು ಮುಂದುವರೆಸುತ್ತಾ ಬಂದರು. ಇದು ಮುಂದೊಂದು ದಿನ ದೊಡ್ಡ ಸಂಸಾರವಾಗಿ ರೂಪುಗೊಂಡಿದೆ. ಇದೇ ಕಾರಣಕ್ಕಾಗಿ ಈ ಕುಟುಂಬ ಅಥವಾ ವಂಶವನ್ನು 'ಹೆಳವ' ಎಂದು ಕರೆಯಲಾಯಿತು ಎಂಬ ಪ್ರತೀತಿ ಪುರಾಣಗಳಲ್ಲಿ ದಾಖಲಾಗಿದೆ.
ಭಿಕ್ಷಾಟನೆ ಒಕ್ಕಲಿಗರ ಅಥವಾ ಕೃಷಿಕರ ಮನೆಯಲ್ಲಿ ಭಿಕ್ಷೆ ಎತ್ತುವ ಈ ಕಾಯಕ ಇಂದಿಗೂ ಮುಂದುವರೆದಿದೆ.
ಎತ್ತಿನ ಮೇಲೆ ಸವಾರಿ ಮಾಡುತ್ತಾ ಇಡೀ ಕುಟುಂಬದೊಂದಿಗೆ ಊರಿಂದ ಊರಿಗೆ ಅಲೆಯುತ್ತಾ ಬಂದಿದ್ದ ಈ ಸಮುದಾಯವನ್ನು ಅಲೆಮಾರಿಗಳೆಂದು ಪರಿಗಣಿಸಲಾಗಿದೆ. ಇವರನ್ನು ಬುಡಕಟ್ಟು ವರ್ಗದವರೆಂದು ಹೇಳಲಾಗುತ್ತಿದ್ದರೂ ಕಾಡು ಮೇಡುಗಳಲ್ಲಿ ಜೀವಿಸುವುದಿಲ್ಲ. ಜನವಸತಿ ಪ್ರದೇಶಗಳಲ್ಲಿ ಜನರೊಂದಿಗೆ ಬೆರೆತು ಜೀವನ ಸಾಗಿಸುತ್ತಿದ್ದಾರೆ. ಅಲೆಮಾರಿಗಳು ಎಂದು ಕರೆಯಿಸಿಕೊಂಡಿದ್ದರೂ ಇತ್ತೀಚಿನ ದಿನಮಾನದಲ್ಲಿ ಹೆಳವರು ಒಂದು ಊರಿನಲ್ಲಿ ನೆಲೆ ನಿಂತಿದ್ದಾರೆ. ಆ ಊರಿನಿಂದಲೇ ತಮ್ಮ ಭಿಕ್ಷಾಟನೆ ಕಾಯಕವನ್ನು ನಡೆಸುತ್ತಿದ್ದಾರೆ.
ಈ ಸಮುದಾಯದ ಹೆಚ್ಚು ಜನ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲೇ ವಾಸವಾಗಿದ್ದರೆ. ಅಂದರೆ, ಈ ಜಿಲ್ಲೆಯಲ್ಲಿ ಸುಮಾರು 14 ಸಾವಿರದಷ್ಟು ಜನ ಇದ್ದಾರೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಸುಮಾರು 12 ಸಾವಿರದಷ್ಟಿದ್ದಾರೆ.
ಉಳಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿರುವ ಸಮುದಾಯದ ಒಟ್ಟು ಕುಟುಂಬಗಳ ಸಂಖ್ಯೆ ಸುಮಾರು 14 ಸಾವಿರ ಇದ್ದರೆ, ಜನಸಂಖ್ಯೆ ಸುಮಾರು 80 ಸಾವಿರ.
ಈ ಸಮುದಾಯದಲ್ಲಿ ಪ್ರಮುಖವಾಗಿ ಎತ್ತಿನ ಹೆಳವರು, ಗಂಟೆ ಹೆಳವರು ಮತ್ತು ಚಾಪೆ ಹೆಳವರು ಎಂದು ಗುರುತಿಸಲಾಗಿದೆ.
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಎತ್ತಿನ ಹೆಳವರು ಕಂಡುಬಂದರೆ, ದಕ್ಷಿಣ ಕರ್ನಾಟಕದಲ್ಲಿ ಗಂಟೆ ಹೆಳವರಿದ್ದಾರೆ. ಅದೇ ರೀತಿ ಬೀದರ್, ಗುಲ್ಬರ್ಗಾ, ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಚಾಪೆ ಹೆಳವರು ಜೀವಿಸುತ್ತಿದ್ದಾರೆ.
ಎತ್ತಿನ ಹೆಳವರು ಮತ್ತು ಗಂಟೆ ಹೆಳವರು ಚಾಪೆ ಹೆಳವರಿಗಿಂತ ಮೇಲ್ದರ್ಜೆಯವರೆಂದು ಹೇಳಲಾಗುತ್ತದೆ. ಏಕೆಂದರೆ, ಎತ್ತಿನವರು ಮತ್ತು ಗಂಟೆ ಹೆಳವರ ಸಂಪ್ರದಾಯಗಳಲ್ಲಿ ಬಹುತೇಕ ಸಾಮ್ಯತೆ ಕಂಡುಬರುತ್ತದೆ. ಗಂಟೆ ಹೆಳವರು ತಮ್ಮ ಬಗಲಲ್ಲಿ ದೊಡ್ಡ ಜೋಳಿಗೆ ಹಿಡಿದು ಗಂಟೆ ಬಾರಿಸುತ್ತಾ ನಿಗದಿತ ಒಕ್ಕಲುಗಳಿಗೆ ಅಂದರೆ ಕೃಷಿ ಮಾಡುವ ಒಂದು ಸಮುದಾಯದ ಮನೆಗಳಿಗೆ ಹೋಗಿ ಭಿಕ್ಷೆ ಎತ್ತುತ್ತಾರೆ. ಅವರು ಬಾರಿಸುವ ಗಂಟೆಯನ್ನು ಒಕ್ಕಲುಗಳೇ ಕೊಡಿಸಿರುತ್ತಾರೆ. ಅವರು ಕೊಡಿಸಿದ ಗಂಟೆಯನ್ನು ಅದೇ ಒಕ್ಕಲುಗಳಲ್ಲಿ ಬಾರಿಸಬೇಕು. ಒಂದು ಒಕ್ಕಲಿನ ಗಂಟೆಯನ್ನು ಮತ್ತೊಂದು ಒಕ್ಕಲಲ್ಲಿ ಬಾರಿಸಿದರೆ ಅದು ಅಪರಾಧವಾದಂತೆ.
ಆದರೆ, ಎತ್ತಿನ ಹೆಳವರು ಎತ್ತಿನ ಮೇಲೆ ಸವಾರಿ ಮಾಡಿಕೊಂಡು ಭಿಕ್ಷಾಟನೆ ಮಾಡುತ್ತಾರೆ. ಇದೊಂದು ವೈರುಧ್ಯ ಬಿಟ್ಟರೆ ಎರಡೂ ಪಂಗಡಗಳಲ್ಲಿ ಒಂದೇ ರೀತಿಯ ಸಂಪ್ರದಾಯವಿದೆ.
ಆದರೆ, ಭಿಕ್ಷಾಟನೆಯಲ್ಲಿ ತೊಡಗಿದರೂ ಚಾಪೆ ಹೆಳವರು ಹಂದಿಯನ್ನು ಸಾಕುತ್ತಾರೆ. ಇವರಿಗೆ ಇಂತಹದ್ದೇ ಒಕ್ಕಲಲ್ಲಿ ಭಿಕ್ಷೆ ಬೇಡಬೇಕೆಂಬ ನಿಬಂಧನೆಯೂ ಇಲ್ಲ. ಹೀಗಾಗಿ ಈ ಸಮುದಾಯ ಕೀಳು ಎಂದು ನಂಬಲಾಗಿದೆ.
ಎತ್ತಿನ ಮತ್ತು ಗಂಟೆ ಹೆಳವರ ಮಧ್ಯೆ ವೈವಾಹಿಕ ಸಂಬಂಧಗಳು ಇವೆಯಾದರೂ ಈ ಪಂಗಡಗಳು ಚಾಪೆ ಹೆಳವರ ಜತೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ.
ಕೆಲವೇ ಕೆಲವು ಸಾವಿರದಷ್ಟು ಜನಸಂಖ್ಯೆ ಇರುವ ಈ ಮೂರು ಪಂಗಡಗಳಲ್ಲಿ ಅರಳಿ ಕುಲ, ಬಳಗಾರ ಕುಲ, ಬೆಳಗೂಗಿನವರು, ಬೇವಿನವರು, ಬೊಮ್ಮ, ಮಂಗಲವರು, ಮುತ್ತಿನ ಸತ್ತರಗಿಲವರು, ಮನೆಗಲವರು, ವಜಮೂನಿಯವರು, ಸಂಕಲವರು, ಸದರಿನವರು, ಹಾವುಲವರು, ಬಂಡಿಕುಲ, ಬಂಗಾರ ಕುಲ, ಗಂಟ ಕುಲ, ಜ್ಯೋತಿಕುಲ ... ಹೀಗೆ ಬರೋಬ್ಬರಿ 180 ಕ್ಕೂ ಅಧಿಕ ಬೆಡಗುಗಳಿವೆ.
ಇವರನ್ನು 'ಕುಲ ಕೊಂಡಾಡುವರು' ಎಂತಲೂ ಕರೆಯಲಾಗುತ್ತದೆ. ಏಕೆಂದರೆ, ಕೈಲೊಂದು ದಪ್ಪನೆಯ ಪುಸ್ತಕ. ಆ ಪುಸ್ತಕದಲ್ಲಿ ಭಿಕ್ಷಾಟನೆಗೆ ಹೋಗುವ ಒಕ್ಕಲುಗಳ ವಂಶವಾಳಿಯನ್ನು ನಮೂದಿಸಿರುತ್ತಾರೆ. ಇದನ್ನೇ ಭಿಕ್ಷಾಟನೆ ಸಂದರ್ಭದಲ್ಲಿ ಹೇಳಿ ಭಿಕ್ಷೆ ನೀಡುವಂತೆ ಮನವೊಲಿಸುತ್ತಾರೆ. ಇಂತಹ ಬೃಹತ್ ಪುಸ್ತಕಕ್ಕೆ ಚಿಪ್ಪೋಡು ಎನ್ನಲಾಗುತ್ತದೆ.
ಅನಾದಿ ಕಾಲದಿಂದಲೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿಯುತ್ತಾ ಬಂದಿರುವ ಹೆಳವರ ಪರಿಸ್ಥಿತಿಯಲ್ಲಿ ಪ್ರಸ್ತುತ ಯಾವುದೇ ಬದಲಾವಣೆ ಕಾಣಲು ಸಾಧ್ಯವಾಗಿಲ್ಲ. ಕೃಷಿಯನ್ನು ಅವಲಂಬಿಸಿದ್ದ ಒಕ್ಕಲುಗಳಲ್ಲಿ ಬಹುತೇಕ ಮಂದಿ ವೃತ್ತಿಯನ್ನು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಇಲ್ಲವೇ ಪರ್ಯಾಯ ಉದ್ಯೋಗ ಮಾಡುತ್ತಿದ್ದಾರೆ. ಹೀಗಾಗಿ ಈ ಒಕ್ಕಲುಗಳನ್ನೇ ನಂಬಿದ್ದ ಹೆಳವರಿಗೆ ಭಿಕ್ಷೆ ಇಲ್ಲದಂತಾಗಿದೆ.
ಹೀಗಾಗಿ ಭಿಕ್ಷಾಟನೆಯನ್ನು ಕೈಬಿಟ್ಟಿರುವ ಬಹುತೇಕ ಕುಟುಂಬಗಳು ಕೂಲಿ ನಾಲಿ ಬದುಕು ಸವೆಸುವಂತಹ ದುಸ್ಥಿತಿ ಬಂದೊದಗಿದೆ. ಆದರೆ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳು ಮೂಲ ವೃತ್ತಿಯನ್ನು ಬಿಡದೇ ಮುಂದುವರೆಸಿಕೊಂಡು ಬಂದಿವೆ. ಇನ್ನೂ ಕೆಲವರು ಅಲ್ಪಸ್ವಲ್ಪ ಕೃಷಿ ಭೂಮಿ ಹೊಂದಿ ಕೃಷಿಯತ್ತ ವಾಲಿದ್ದಾರೆ.
ಇನ್ನು ಶೈಕ್ಷಣಿಕವಾಗಿ ಒಂದೊಂದೇ ಹೆಜ್ಜೆ ಮುಂದೆ ಬರುತ್ತಿರುವ ಸಮುದಾಯದ ಕೆಲವರು ನ್ಯಾಯಾಧೀಶರು, ವಕೀಲರು, ವೈದ್ಯ ವೃತ್ತಿ ಸೇರಿದಂತೆ ಮತ್ತಿತರೆ ಉನ್ನತ ಹುದ್ದೆಗೇರಿದ್ದಾರೆ. ಆದರೆ, ಇಂತಹವರ ಸಂಖ್ಯೆ ಗೌಣವಾಗಿದೆ. ಆದರೆ, ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಎಂಬುದು ಮರೀಚಿಕೆಯಾಗಿದೆ.
ತೀರಾ ಕೆಳಸ್ತರದ ಜೀವನ ಸಾಗಿಸುತ್ತಿರುವ ಸಮುದಾಯವನ್ನು ಸರ್ಕಾರಗಳು ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿವೆ. ಆದರೆ, ಇದರಿಂದಾಗಿ ಇತರೆ ಸಮುದಾಯಗಳ ಜತೆ ಮೀಸಲಾತಿ ವಿಚಾರದಲ್ಲಿ ಸ್ಪರ್ಧಿಸಲಾಗದೇ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ.
ಸಮಾಜದಲ್ಲಿ ತೀರಾ ಹಿಂದುಳಿದಿರುವ ಹೆಳವರು ಬುಡಕಟ್ಟು ವರ್ಗಕ್ಕೆ ಸೇರಿದವರಾಗಿದ್ದಾರೆ. ಆದರೆ, ಇವರನ್ನು ಇತರೆ ಹಿಂದುಳಿದ ವರ್ಗಕ್ಕೆ ಸೇರಿಸಿರುವುದರಿಂದ ಸೂಕ್ತ ರೀತಿಯಲ್ಲಿ ಸರ್ಕಾರದ ಯಾವುದೇ ಮೀಸಲಾತಿ ಸೌಲಭ್ಯಗಳು ಸಿಗಂತಾಗಿವೆ. ಈ ಹಿನ್ನೆಲೆಯಲ್ಲಿ ಹೆಳವರು ಸೇರಿದಂತೆ ಎಲ್ಲಾ ಬುಡಕಟ್ಟು ಸಮುದಾಯಗಳಿಗೆ  ಎಸ್ಸಿ, ಎಸ್ಟಿ ಮಾದರಿಯಲ್ಲಿ ಪ್ರತ್ಯೇಕ ವರ್ಗವನ್ನು ರೂಪಿಸಿ ಪ್ರತ್ಯೇಕ ಮೀಸಲಾತಿ ನೀಡಬೇಕು. ಈ ಮೂಲಕ ಇವರಿಗೆ ಸಂವಿಧಾನಬದ್ಧವಾದ ಸೌಲಭ್ಯಗಳನ್ನು ಕಲ್ಪಿಸಿ ಅವರ ಶ್ರೇಯೋಭಿವೃದ್ಧಿಗೆ ನಾಂದಿ ಹಾಡಬೇಕಿದೆ -ಡಾ.ಎ.ಎಸ್. ಪ್ರಭಾಕರ, ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ.

ಕುಣಬಿಯರ ಕಲ್ಯಾಣ ಪದ್ಧತಿಯ ಸೋಜಿಗ!

ಅಲ್ಲೊಂದು ಬೃಹದಾಕಾರವಾದ ವಡೆ. ಆ ವಡೆಯೇ ಮಧುಮಗನಿಗೆ ಅತ್ತೆ!
ಇಂತಹ ವೈಚಿತ್ರ್ಯ ಎಲ್ಲಾದರೂ ಕೇಳಿದ್ದೇವೆಯೇ?
ಇಲ್ಲ. ಆದರೂ ಇದು ಇಂದಿಗೂ ಚಾಲ್ತಿಯಲ್ಲಿರುವ ಸಂಪ್ರದಾಯ.
ರಾಜ್ಯದ ಪಶ್ಚಿಮಘಟ್ಟದಲ್ಲಿ ವಾಸಿಸುತ್ತಿರುವ ಹಲವಾರು ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಕುಣಬಿ ಸಮುದಾಯದಲ್ಲಿ ಇಂತಹ ಪದ್ಧತಿ ಜಾರಿಯಲ್ಲಿದೆ.
ಇವರ ಮದುವೆ ಸಂಪ್ರದಾಯ ನಾಗರಿಕ ಸಮಾಜವನ್ನು ಒಂದು ಕಾಣದ ಲೋಕಕ್ಕೆ ಕೊಂಡೊಯ್ಯುತ್ತದೆ.
ಎಲ್ಲಾ ಸಮುದಾಯದಂತೆ ಈ ಸಮುದಾಯದಲ್ಲಿ ಹೆಣ್ಣನ್ನು ನೋಡಲು ವರನ ಮನೆಯವರು ಮೊದಲು ಹೋಗುವುದಿಲ್ಲ. ಬದಲಿಗೆ ಊರ ಪ್ರಮುಖರೊಬ್ಬರು ವರನ ಕುಟುಂಬದ ರಾಯಭಾರಿಯಾಗಿ ವಧುವಿನ ಮನೆಗೆ ಹೋಗಿ ಹೆಣ್ಣನ್ನು ನೋಡುತ್ತಾರೆ. ಹೆಣ್ಣು ಮತ್ತು ಗಂಡಿನ ಬೆಡಗು ಒಂದೇ ಆಗಿದ್ದರೆ ಪರಸ್ಪರ ಮದುವೆಯಾಗುವಂತಿಲ್ಲ.
ಈ ರಾಯಭಾರಿ ಹೆಣ್ಣನ್ನು ನೋಡಿ ಆಕೆ ಒಪ್ಪಿಗೆಯಾದಲ್ಲಿ ಮಾತ್ರ ಹುಡುಗನ ಕುಟುಂಬಕ್ಕೆ ಸೇರಿದ ಐವರು ಮುತ್ತೈದೆಯರನ್ನು ಹುಡುಗಿಯ ಮನೆಗೆ ಕರೆದುಕೊಂಡು ಹೋಗುತ್ತಾನೆ. ಈ ಮುತ್ತೈದೆಯರು ಹೆಣ್ಣಿಗೆ ಎಣ್ಣೆ ಅರಿಶಿನ ಹಚ್ಚಿ ನಂತರ ಎಲೆ ಅಡಿಕೆ ಕೊಟ್ಟು ಪರಸ್ಪರ ಒಪ್ಪಿಗೆ ಸೂಚಿಸುತ್ತಾರೆ.
ಈ ಒಪ್ಪಿಗೆ ಆದ ಮರುದಿನವೇ ಮದುವೆ!
ಅಷ್ಟರ ವೇಳೆಗಾಗಲೇ ತಮ್ಮ ಬಂಧುಬಳಗದವರಿಗೆ ಆಹ್ವಾನ ನೀಡಲಾಗುತ್ತದೆ. ಮದುವೆ ನಡೆಯುವುದು ಹುಡುಗಿಯ ಮನೆಯಲ್ಲಲ್ಲ. ಬದಲಿಗೆ ಗಂಡಿನ ಮನೆಯ ವಿಶಾಲವಾದ ಆವರಣದಲ್ಲಿ. ಮದುವೆಯ ದಿನ ಹೆಣ್ಣು ಮತ್ತು ಗಂಡಿನ ಸೋದರ ಮಾವಂದಿರು ಎತ್ತಿಕೊಂಡು ಬಂದು ಹಸೆಮಣೆಯ ಮೇಲೆ ನಿಲ್ಲಿಸುತ್ತಾರೆ.
ಬಕುಳದ ಹೂವಿನಿಂದ ಸಿದ್ಧಪಡಿಸಿದ ಹಾರಗಳನ್ನು ಗಂಡು ಹೆಣ್ಣು ಪರಸ್ಪರ ಬದಲಾಯಿಸಿಕೊಳ್ಳುತ್ತಾರೆ. ಇದಕ್ಕೆ ಪೌರೋಹಿತ್ಯ ವಹಿಸುವುದು 'ಮಾತ್ಯಾವಳಿ ಜಾಣ' ಎಂಬ ಸಮುದಾಯದ ಹಿರಿಯ ಪೂಜಾರಿ.
ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ವಿವಾಹ ಬಂಧನವಾಗುತ್ತದೆ.
ಆದರೆ, ವಿಶಿಷ್ಟವೆಂದರೆ ಈ ಶುಭಸಮಾರಂಭದ ವೇಳೆ ವರ ತನ್ನ ಅತ್ತೆಯನ್ನು ನೋಡುವುದು ನಿಷಿದ್ಧ. ದೊಡ್ಡದಾದ ವಡೆಯೊಂದನ್ನು ತಯಾರು ಮಾಡುತ್ತಾರೆ. ಎಲ್ಲಾ ಶಾಸ್ತ್ರಗಳು ಮುಗಿಯುವವರೆಗೆ ವರನ ಪಾಲಿಗೆ ಈ ವಡೆಯೇ ಅತ್ತೆ. ಶಾಸ್ತ್ರಗಳ ನಂತರ ವಡೆಯೊಂದಿಗೆ ಅನ್ನ ಬಡಿಸುವ ಮಹಿಳೆಯೇ ಅತ್ತೆ. ಆಗಲೇ ವರ ಆಕೆಯ ಮುಖ ನೋಡುವುದು.
ಬುಡಕಟ್ಟು ಸಮುದಾಯಗಳಲ್ಲಿ ಅತ್ಯಂತ ಬಡತನದಲ್ಲಿರುವ ಸಮುದಾಯವೆಂದರೆ ಈ ಕುಣಬಿಯರು. ರಾಜ್ಯದಲ್ಲಿ ಸುಮಾರು 25 ಸಾವಿರದಷ್ಟು ಈ ಸಮುದಾಯದ ಜನಸಂಖ್ಯೆ ಇದೆ. ಬಹುತೇಕ ಕುಣಬಿಯರು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಯಲ್ಲಾಪುರ, ಅಂಕೋಲ, ಕಾರವಾರ, ಹೊನ್ನಾವರ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕುಗಳ ಪಶ್ಚಿಮಘಟದ ವನಸಿರಿಯ ಸೆರೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ದಕ್ಷಿಣ ಕನ್ನಡದ ಕರಾವಳಿ ಪ್ರದೇಶದಲ್ಲಿ ಜೀವಿಸುತ್ತಿದ್ದಾರೆ. ಆದರೆ, ಇವರಿಗೆ ಕುಡುಬಿಯರು ಎಂದು ಕರೆಯಲಾಗುತ್ತದೆ. ಆದರೆ, ಕುಣುಬಿಯರು ಮತ್ತು ಕುಡುಬಿಯರು ಸಮುದಾಯದ ಬಹುತೇಕ ಸಂಪ್ರದಾಯ, ಆಚಾರ ವಿಚಾರಗಳಲ್ಲಿ ಸಾಮ್ಯತೆ ಕಾಣಬಹುದು.
ದಕ್ಷಿಣ ಕನ್ನಡದ ಕರಾವಳಿ ತೀರದಲ್ಲಿನ ಕುಂದಾಪುರ, ಮಂಗಳೂರು, ಉಡುಪಿ ಬಾರ್ಕೂರು, ಮಂದರ್ತಿ, ಕೊಕ್ಕರ್ಣೆ, ಸುರಾಲು, ಬಿಲ್ಲಾಡಿ, ಹೆಸ್ಕುಂದ, ಹಾಲಾಡಿ, ಬಜಪೆ, ಕೊಲ್ಲೂರು ಸೇರಿದಂತೆ ಮತ್ತಿತರರೆ ಪ್ರದೇಶಗಳಲ್ಲಿ ಕುಡುಬಿಗಳು ವಾಸಿಸುತ್ತಿದ್ದಾರೆ.
ಕುಣಬಿ ಮತ್ತು ಕುಡುಬಿಯರ ಭಾಷೆ ಪ್ರಾದೇಶಿಕತೆಗೆ ತಕ್ಕಂತೆ ಇದೆ. ಕರಾವಳಿಯಲ್ಲಿ ತುಳು, ಗೋವಾಕ್ಕೆ ಸನಿಹದಲ್ಲಿರುವ ಉತ್ತರ ಕನ್ನಡದ ಕುಣಬಿಯರು ಕೊಂಕಣಿ ಮತ್ತು ಕುಂದಾಪುರ ಸೇರಿದಂತೆ ಮತ್ತೆ ಕೆಲವು ಭಾಗದಲ್ಲಿ ಕನ್ನಡ ಮಾತನಾಡುತ್ತಾರೆ.
1795 ರಲ್ಲಿ ಫ್ರಾನ್ಸಿಸ್ ಬುಕಾನನ್ ಎಂಬ ಸಂಶೋಧಕ ಪಶ್ಚಿಮಘಟ್ಟದಲ್ಲಿ ಸುತ್ತಾಡಿ ಕುಣಬಿಯರ ಬಗ್ಗೆ ಸಂಶೋಧನೆ ನಡೆಸಿದ್ದ. ಅವನ ಪ್ರಕಾರ ಕುಣಬಿಯರು ಕರ್ನಾಟಕ ಮೂಲದವರೇ ಎಂದು ಪ್ರತಿಪಾದಿಸಿದ್ದ. ಪೋರ್ಚುಗೀಸರ ಕಾಲದಲ್ಲಿ ಪ್ಲೇಗ್ ಸಂಭವಿಸಿದ್ದರಿಂದ ಮತ್ತು ಬಲವಂತದ ಮತಾಂತರಕ್ಕೆ ಹೆದರಿ ಕುಣಬಿಯರು ಗೋವಾ ರಾಜ್ಯಕ್ಕೆ ಗುಳೇ ಹೋಗಿದ್ದರು. ನಂತರದ ಅವಧಿಯಲ್ಲಿ ಮತ್ತೆ ಕರ್ನಾಟಕಕ್ಕೆ ಬಂದರು ಎಂಬ ವಾದಗಳೂ ಇವೆ. ಆದರೆ, ಈ ಮೂಲದ ಇನ್ನೂ ತರ್ಕಗಳು ಮುಂದುವರೆದಿವೆ.
ಇವರನ್ನು ಅಲೆಮಾರಿ ಬುಡಕಟ್ಟಿಗೆ ಸೇರಿದವರೆಂದು ಹೇಳಲಾಗುತ್ತಿದೆ. ಕಾಡಿನಲ್ಲಿ ಆಹಾರ ಪದಾರ್ಥಗಳ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಕಾಲ ಕ್ರಮೇಣ ಕಾಡಿನಲ್ಲೇ ಅಲ್ಪಸ್ವಲ್ಪ ಭೂಮಿಯನ್ನು ಉಳುಮೆ ಮಾಡುವುದನ್ನು ಕರಗತ ಮಾಡಿಕೊಂಡ ಸಮುದಾಯ 'ಕುಮರಿ ಬೇಸಾಯ' ಅಂದರೆ, ಸ್ಥಳಾಂತರ ಕೃಷಿ. ಖಾಲಿ ಬಿದ್ದ ಅರಣ್ಯ ಪ್ರದೇಶದ ಇಳಿಜಾರು ಪ್ರದೇಶವನ್ನು ಹಸನುಗೊಳಿಸಿ ಅಲ್ಲಿ ಬಿತ್ತನೆ ಮಾಡಿ ಚಿಲ್ಲರೆ ಆದಾಯ ಗಳಿಸುತ್ತಿದ್ದರು. ಆದರೆ, ಈ ಭೂಮಿಯ ಒಡೆಯರು ಮಾತ್ರ ಇವರಲ್ಲ. ಈ ಕೃಷಿಯನ್ನು ಅವಲಂಬಿಸಿದ ನಂತರ ಇವರು ಸ್ಥಳದಿಂದ ಸ್ಥಳಕ್ಕೆ ತಮ್ಮ ವಾಸ್ತವ್ಯವನ್ನು ಬದಲಾಯಿಸುವುದನ್ನು ಬಿಟ್ಟರು. ಹೀಗಾಗಿ ಇವರನ್ನು ಅರೆ ಅಲೆಮಾರಿಗಳು ಎನ್ನಲಾಗುತ್ತಿದೆ.
ಈ ಕುಮರಿ ಬೇಸಾಯದಿಂದ ಅಲ್ಪಸ್ವಲ್ಪ ಆದಾಯ ಗಳಿಸುತ್ತಿದ್ದ ಕುಣಬಿಯರು ದಿನ ಕಳೆದಂತೆ ಅರಣ್ಯ ಕಾನೂನುಗಳು ಕಠಿಣವಾಗುತ್ತಿದ್ದಂತೆ ಅನಿವಾರ್ಯವಾಗಿ ವೃತ್ತಿಯನ್ನು ಕೈಬಿಡಬೇಕಾಯಿತು. ಪರಿಣಾಮ ಬಹುತೇಕ ಎಲ್ಲಾ ಕುಟುಂಬಗಳು ಭೂ ಮಾಲೀಕರ ತೋಟ, ಗದ್ದೆಗಳಲ್ಲಿ ಕೂಲಿ ಮಾಡುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿವೆ. ಹೀಗಾಗಿ ತೀರಾ ಕಡುಬಡತನದ ಸೆರಗಿನಲ್ಲೇ ವಾಸಿಸುತ್ತಿರುವ ಇವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಈಗೇನೂ ಬದಲಾವಣೆಯಾಗಿಲ್ಲ. ಭೂಮಾಲೀಕರ ಶೋಷಣೆ ತಪ್ಪಿಲ್ಲ.
ಪ್ರಸ್ತುತ ಸನ್ನಿವೇಶದಲ್ಲಿ ಆಶ್ರಯ ನೀಡಿದ್ದ ಅರಣ್ಯ ಭೂಮಿ ಇವರ ಕೈತಪ್ಪಿ ಹೋಗಿದೆ. ಆಹಾರ ಸಂಗ್ರಹಣೆ ಮಾಡುವಂತಿಲ್ಲ. ಬೇಟೆಯಂತೂ ನಿಷಿದ್ಧ. ಈ ಎಲ್ಲಾ ಕಾರಣಗಳಿಂದಾಗಿ ಕಡುಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಈ ಸಮುದಾಯ ಮತ್ತಷ್ಟು ಕೆಳಸ್ತರಕ್ಕೆ ತಳ್ಳಲ್ಪಟ್ಟಿದೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಬುಡಕಟ್ಟು ಸಮುದಾಯವನ್ನು ಗೋವಾ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಅರೆ ಅಲೆಮಾರಿ ಎಂದು ಪರಿಗಣಿಸಲಾಗಿದೆಯೇ ಹೊರತು ಯಾವುದೇ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿಲ್ಲ.
ಇತರೆ ಬುಡಕಟ್ಟು ಸಮುದಾಯಗಳ ರೀತಿಯಲ್ಲಿ ಕುಣಬಿ ಮತ್ತು ಕುಡುಬಿಯರು ಹೇಳಿಕೊಳ್ಳುವ ರೀತಿಯಲ್ಲಿ ಮುಂದುವರೆದಿಲ್ಲ. ಇದ್ದರೂ ಕೇವಲ ಬೆರಳೆಣಿಯಷ್ಟು ಜನ ಮಾತ್ರ ನಾಲ್ಕಕ್ಷರ ಕಲಿತಿದ್ದಾರೆ.
ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು, ಕುಮರಿ ಬೇಸಾಯವನ್ನು ಸಕ್ರಮ ಮಾಡಬೇಕೆಂದು ಹಲವು ದಶಕಗಳಿಂದ ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದಾರೆ. ಆದರೆ, ಧ್ವನಿ ಇಲ್ಲದವರ ಇವರ ಕೂಗು ಆಡಳಿತ ನಡೆಸುವವರ ಕಿವಿಗೆ ಕೇಳುತ್ತಿಲ್ಲ.
ಕುಣಬಿ ಸಮುದಾಯ ನಾಗರಿಕ ಸಮಾಜದಲ್ಲೇ ಅತ್ಯಂತ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ದುರ್ಗತಿಯಲ್ಲಿ ಬದುಕುತ್ತಿರುವ ಸಮುದಾಯವನ್ನು ಸರ್ಕಾರ ಅರೆ ಅಲೆಮಾರಿ ಎಂದು ಪರಿಗಣಿಸಿದೆಯಾದರೂ ಯಾವುದೇ ಮೀಸಲಾತಿ ಸೌಲಭ್ಯವನ್ನು ನೀಡಿಲ್ಲ. ಹೀಗಾಗಿ ಇವರನ್ನು ಕನಿಷ್ಟ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ತಲೆತಲಾಂತರದಿಂದ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯ ಮಾಲೀಕತ್ವವನ್ನು ಕೊಡಬೇಕಾದ ಅಗತ್ಯತೆ ಇದೆ -ಡಾ. ಹಿ.ಚಿ. ಬೋರಲಿಂಗಯ್ಯ, ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ.

ಕಮ್ಮಾರರ ಬದುಕು ಉರಿವ ಅಗ್ನಿ ಜತೆಗಿನ  ಸರಸ

ಅಲ್ಲೊಂದು ಬೃಹದಾಕಾರವಾದ ವಡೆ. ಆ ವಡೆಯೇ ಮಧುಮಗನಿಗೆ ಅತ್ತೆ!
ಇಂತಹ ವೈಚಿತ್ರ್ಯ ಎಲ್ಲಾದರೂ ಕೇಳಿದ್ದೇವೆಯೇ?
ಇಲ್ಲ. ಆದರೂ ಇದು ಇಂದಿಗೂ ಚಾಲ್ತಿಯಲ್ಲಿರುವ ಸಂಪ್ರದಾಯ.
ರಾಜ್ಯದ ಪಶ್ಚಿಮಘಟ್ಟದಲ್ಲಿ ವಾಸಿಸುತ್ತಿರುವ ಹಲವಾರು ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಕುಣಬಿ ಸಮುದಾಯದಲ್ಲಿ ಇಂತಹ ಪದ್ಧತಿ ಜಾರಿಯಲ್ಲಿದೆ.
ಇವರ ಮದುವೆ ಸಂಪ್ರದಾಯ ನಾಗರಿಕ ಸಮಾಜವನ್ನು ಒಂದು ಕಾಣದ ಲೋಕಕ್ಕೆ ಕೊಂಡೊಯ್ಯುತ್ತದೆ.
ಎಲ್ಲಾ ಸಮುದಾಯದಂತೆ ಈ ಸಮುದಾಯದಲ್ಲಿ ಹೆಣ್ಣನ್ನು ನೋಡಲು ವರನ ಮನೆಯವರು ಮೊದಲು ಹೋಗುವುದಿಲ್ಲ. ಬದಲಿಗೆ ಊರ ಪ್ರಮುಖರೊಬ್ಬರು ವರನ ಕುಟುಂಬದ ರಾಯಭಾರಿಯಾಗಿ ವಧುವಿನ ಮನೆಗೆ ಹೋಗಿ ಹೆಣ್ಣನ್ನು ನೋಡುತ್ತಾರೆ. ಹೆಣ್ಣು ಮತ್ತು ಗಂಡಿನ ಬೆಡಗು ಒಂದೇ ಆಗಿದ್ದರೆ ಪರಸ್ಪರ ಮದುವೆಯಾಗುವಂತಿಲ್ಲ.
ಈ ರಾಯಭಾರಿ ಹೆಣ್ಣನ್ನು ನೋಡಿ ಆಕೆ ಒಪ್ಪಿಗೆಯಾದಲ್ಲಿ ಮಾತ್ರ ಹುಡುಗನ ಕುಟುಂಬಕ್ಕೆ ಸೇರಿದ ಐವರು ಮುತ್ತೈದೆಯರನ್ನು ಹುಡುಗಿಯ ಮನೆಗೆ ಕರೆದುಕೊಂಡು ಹೋಗುತ್ತಾನೆ. ಈ ಮುತ್ತೈದೆಯರು ಹೆಣ್ಣಿಗೆ ಎಣ್ಣೆ ಅರಿಶಿನ ಹಚ್ಚಿ ನಂತರ ಎಲೆ ಅಡಿಕೆ ಕೊಟ್ಟು ಪರಸ್ಪರ ಒಪ್ಪಿಗೆ ಸೂಚಿಸುತ್ತಾರೆ.
ಈ ಒಪ್ಪಿಗೆ ಆದ ಮರುದಿನವೇ ಮದುವೆ!
ಅಷ್ಟರ ವೇಳೆಗಾಗಲೇ ತಮ್ಮ ಬಂಧುಬಳಗದವರಿಗೆ ಆಹ್ವಾನ ನೀಡಲಾಗುತ್ತದೆ. ಮದುವೆ ನಡೆಯುವುದು ಹುಡುಗಿಯ ಮನೆಯಲ್ಲಲ್ಲ. ಬದಲಿಗೆ ಗಂಡಿನ ಮನೆಯ ವಿಶಾಲವಾದ ಆವರಣದಲ್ಲಿ. ಮದುವೆಯ ದಿನ ಹೆಣ್ಣು ಮತ್ತು ಗಂಡಿನ ಸೋದರ ಮಾವಂದಿರು ಎತ್ತಿಕೊಂಡು ಬಂದು ಹಸೆಮಣೆಯ ಮೇಲೆ ನಿಲ್ಲಿಸುತ್ತಾರೆ.
ಬಕುಳದ ಹೂವಿನಿಂದ ಸಿದ್ಧಪಡಿಸಿದ ಹಾರಗಳನ್ನು ಗಂಡು ಹೆಣ್ಣು ಪರಸ್ಪರ ಬದಲಾಯಿಸಿಕೊಳ್ಳುತ್ತಾರೆ. ಇದಕ್ಕೆ ಪೌರೋಹಿತ್ಯ ವಹಿಸುವುದು 'ಮಾತ್ಯಾವಳಿ ಜಾಣ' ಎಂಬ ಸಮುದಾಯದ ಹಿರಿಯ ಪೂಜಾರಿ.
ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ವಿವಾಹ ಬಂಧನವಾಗುತ್ತದೆ.
ಆದರೆ, ವಿಶಿಷ್ಟವೆಂದರೆ ಈ ಶುಭಸಮಾರಂಭದ ವೇಳೆ ವರ ತನ್ನ ಅತ್ತೆಯನ್ನು ನೋಡುವುದು ನಿಷಿದ್ಧ. ದೊಡ್ಡದಾದ ವಡೆಯೊಂದನ್ನು ತಯಾರು ಮಾಡುತ್ತಾರೆ. ಎಲ್ಲಾ ಶಾಸ್ತ್ರಗಳು ಮುಗಿಯುವವರೆಗೆ ವರನ ಪಾಲಿಗೆ ಈ ವಡೆಯೇ ಅತ್ತೆ. ಶಾಸ್ತ್ರಗಳ ನಂತರ ವಡೆಯೊಂದಿಗೆ ಅನ್ನ ಬಡಿಸುವ ಮಹಿಳೆಯೇ ಅತ್ತೆ. ಆಗಲೇ ವರ ಆಕೆಯ ಮುಖ ನೋಡುವುದು.
ಬುಡಕಟ್ಟು ಸಮುದಾಯಗಳಲ್ಲಿ ಅತ್ಯಂತ ಬಡತನದಲ್ಲಿರುವ ಸಮುದಾಯವೆಂದರೆ ಈ ಕುಣಬಿಯರು. ರಾಜ್ಯದಲ್ಲಿ ಸುಮಾರು 25 ಸಾವಿರದಷ್ಟು ಈ ಸಮುದಾಯದ ಜನಸಂಖ್ಯೆ ಇದೆ. ಬಹುತೇಕ ಕುಣಬಿಯರು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಯಲ್ಲಾಪುರ, ಅಂಕೋಲ, ಕಾರವಾರ, ಹೊನ್ನಾವರ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕುಗಳ ಪಶ್ಚಿಮಘಟದ ವನಸಿರಿಯ ಸೆರೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ದಕ್ಷಿಣ ಕನ್ನಡದ ಕರಾವಳಿ ಪ್ರದೇಶದಲ್ಲಿ ಜೀವಿಸುತ್ತಿದ್ದಾರೆ. ಆದರೆ, ಇವರಿಗೆ ಕುಡುಬಿಯರು ಎಂದು ಕರೆಯಲಾಗುತ್ತದೆ. ಆದರೆ, ಕುಣುಬಿಯರು ಮತ್ತು ಕುಡುಬಿಯರು ಸಮುದಾಯದ ಬಹುತೇಕ ಸಂಪ್ರದಾಯ, ಆಚಾರ ವಿಚಾರಗಳಲ್ಲಿ ಸಾಮ್ಯತೆ ಕಾಣಬಹುದು.
ದಕ್ಷಿಣ ಕನ್ನಡದ ಕರಾವಳಿ ತೀರದಲ್ಲಿನ ಕುಂದಾಪುರ, ಮಂಗಳೂರು, ಉಡುಪಿ ಬಾರ್ಕೂರು, ಮಂದರ್ತಿ, ಕೊಕ್ಕರ್ಣೆ, ಸುರಾಲು, ಬಿಲ್ಲಾಡಿ, ಹೆಸ್ಕುಂದ, ಹಾಲಾಡಿ, ಬಜಪೆ, ಕೊಲ್ಲೂರು ಸೇರಿದಂತೆ ಮತ್ತಿತರರೆ ಪ್ರದೇಶಗಳಲ್ಲಿ ಕುಡುಬಿಗಳು ವಾಸಿಸುತ್ತಿದ್ದಾರೆ.
ಕುಣಬಿ ಮತ್ತು ಕುಡುಬಿಯರ ಭಾಷೆ ಪ್ರಾದೇಶಿಕತೆಗೆ ತಕ್ಕಂತೆ ಇದೆ. ಕರಾವಳಿಯಲ್ಲಿ ತುಳು, ಗೋವಾಕ್ಕೆ ಸನಿಹದಲ್ಲಿರುವ ಉತ್ತರ ಕನ್ನಡದ ಕುಣಬಿಯರು ಕೊಂಕಣಿ ಮತ್ತು ಕುಂದಾಪುರ ಸೇರಿದಂತೆ ಮತ್ತೆ ಕೆಲವು ಭಾಗದಲ್ಲಿ ಕನ್ನಡ ಮಾತನಾಡುತ್ತಾರೆ.
1795 ರಲ್ಲಿ ಫ್ರಾನ್ಸಿಸ್ ಬುಕಾನನ್ ಎಂಬ ಸಂಶೋಧಕ ಪಶ್ಚಿಮಘಟ್ಟದಲ್ಲಿ ಸುತ್ತಾಡಿ ಕುಣಬಿಯರ ಬಗ್ಗೆ ಸಂಶೋಧನೆ ನಡೆಸಿದ್ದ. ಅವನ ಪ್ರಕಾರ ಕುಣಬಿಯರು ಕರ್ನಾಟಕ ಮೂಲದವರೇ ಎಂದು ಪ್ರತಿಪಾದಿಸಿದ್ದ. ಪೋರ್ಚುಗೀಸರ ಕಾಲದಲ್ಲಿ ಪ್ಲೇಗ್ ಸಂಭವಿಸಿದ್ದರಿಂದ ಮತ್ತು ಬಲವಂತದ ಮತಾಂತರಕ್ಕೆ ಹೆದರಿ ಕುಣಬಿಯರು ಗೋವಾ ರಾಜ್ಯಕ್ಕೆ ಗುಳೇ ಹೋಗಿದ್ದರು. ನಂತರದ ಅವಧಿಯಲ್ಲಿ ಮತ್ತೆ ಕರ್ನಾಟಕಕ್ಕೆ ಬಂದರು ಎಂಬ ವಾದಗಳೂ ಇವೆ. ಆದರೆ, ಈ ಮೂಲದ ಇನ್ನೂ ತರ್ಕಗಳು ಮುಂದುವರೆದಿವೆ.
ಇವರನ್ನು ಅಲೆಮಾರಿ ಬುಡಕಟ್ಟಿಗೆ ಸೇರಿದವರೆಂದು ಹೇಳಲಾಗುತ್ತಿದೆ. ಕಾಡಿನಲ್ಲಿ ಆಹಾರ ಪದಾರ್ಥಗಳ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಕಾಲ ಕ್ರಮೇಣ ಕಾಡಿನಲ್ಲೇ ಅಲ್ಪಸ್ವಲ್ಪ ಭೂಮಿಯನ್ನು ಉಳುಮೆ ಮಾಡುವುದನ್ನು ಕರಗತ ಮಾಡಿಕೊಂಡ ಸಮುದಾಯ 'ಕುಮರಿ ಬೇಸಾಯ' ಅಂದರೆ, ಸ್ಥಳಾಂತರ ಕೃಷಿ. ಖಾಲಿ ಬಿದ್ದ ಅರಣ್ಯ ಪ್ರದೇಶದ ಇಳಿಜಾರು ಪ್ರದೇಶವನ್ನು ಹಸನುಗೊಳಿಸಿ ಅಲ್ಲಿ ಬಿತ್ತನೆ ಮಾಡಿ ಚಿಲ್ಲರೆ ಆದಾಯ ಗಳಿಸುತ್ತಿದ್ದರು. ಆದರೆ, ಈ ಭೂಮಿಯ ಒಡೆಯರು ಮಾತ್ರ ಇವರಲ್ಲ. ಈ ಕೃಷಿಯನ್ನು ಅವಲಂಬಿಸಿದ ನಂತರ ಇವರು ಸ್ಥಳದಿಂದ ಸ್ಥಳಕ್ಕೆ ತಮ್ಮ ವಾಸ್ತವ್ಯವನ್ನು ಬದಲಾಯಿಸುವುದನ್ನು ಬಿಟ್ಟರು. ಹೀಗಾಗಿ ಇವರನ್ನು ಅರೆ ಅಲೆಮಾರಿಗಳು ಎನ್ನಲಾಗುತ್ತಿದೆ.
ಈ ಕುಮರಿ ಬೇಸಾಯದಿಂದ ಅಲ್ಪಸ್ವಲ್ಪ ಆದಾಯ ಗಳಿಸುತ್ತಿದ್ದ ಕುಣಬಿಯರು ದಿನ ಕಳೆದಂತೆ ಅರಣ್ಯ ಕಾನೂನುಗಳು ಕಠಿಣವಾಗುತ್ತಿದ್ದಂತೆ ಅನಿವಾರ್ಯವಾಗಿ ವೃತ್ತಿಯನ್ನು ಕೈಬಿಡಬೇಕಾಯಿತು. ಪರಿಣಾಮ ಬಹುತೇಕ ಎಲ್ಲಾ ಕುಟುಂಬಗಳು ಭೂ ಮಾಲೀಕರ ತೋಟ, ಗದ್ದೆಗಳಲ್ಲಿ ಕೂಲಿ ಮಾಡುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿವೆ. ಹೀಗಾಗಿ ತೀರಾ ಕಡುಬಡತನದ ಸೆರಗಿನಲ್ಲೇ ವಾಸಿಸುತ್ತಿರುವ ಇವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಈಗೇನೂ ಬದಲಾವಣೆಯಾಗಿಲ್ಲ. ಭೂಮಾಲೀಕರ ಶೋಷಣೆ ತಪ್ಪಿಲ್ಲ.
ಪ್ರಸ್ತುತ ಸನ್ನಿವೇಶದಲ್ಲಿ ಆಶ್ರಯ ನೀಡಿದ್ದ ಅರಣ್ಯ ಭೂಮಿ ಇವರ ಕೈತಪ್ಪಿ ಹೋಗಿದೆ. ಆಹಾರ ಸಂಗ್ರಹಣೆ ಮಾಡುವಂತಿಲ್ಲ. ಬೇಟೆಯಂತೂ ನಿಷಿದ್ಧ. ಈ ಎಲ್ಲಾ ಕಾರಣಗಳಿಂದಾಗಿ ಕಡುಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಈ ಸಮುದಾಯ ಮತ್ತಷ್ಟು ಕೆಳಸ್ತರಕ್ಕೆ ತಳ್ಳಲ್ಪಟ್ಟಿದೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಬುಡಕಟ್ಟು ಸಮುದಾಯವನ್ನು ಗೋವಾ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಅರೆ ಅಲೆಮಾರಿ ಎಂದು ಪರಿಗಣಿಸಲಾಗಿದೆಯೇ ಹೊರತು ಯಾವುದೇ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿಲ್ಲ.
ಇತರೆ ಬುಡಕಟ್ಟು ಸಮುದಾಯಗಳ ರೀತಿಯಲ್ಲಿ ಕುಣಬಿ ಮತ್ತು ಕುಡುಬಿಯರು ಹೇಳಿಕೊಳ್ಳುವ ರೀತಿಯಲ್ಲಿ ಮುಂದುವರೆದಿಲ್ಲ. ಇದ್ದರೂ ಕೇವಲ ಬೆರಳೆಣಿಯಷ್ಟು ಜನ ಮಾತ್ರ ನಾಲ್ಕಕ್ಷರ ಕಲಿತಿದ್ದಾರೆ.
ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು, ಕುಮರಿ ಬೇಸಾಯವನ್ನು ಸಕ್ರಮ ಮಾಡಬೇಕೆಂದು ಹಲವು ದಶಕಗಳಿಂದ ಹೋರಾಟಗಳನ್ನು ನಡೆಸುತ್ತಲೇ ಬಂದಿದ್ದಾರೆ. ಆದರೆ, ಧ್ವನಿ ಇಲ್ಲದವರ ಇವರ ಕೂಗು ಆಡಳಿತ ನಡೆಸುವವರ ಕಿವಿಗೆ ಕೇಳುತ್ತಿಲ್ಲ.
ಕುಣಬಿ ಸಮುದಾಯ ನಾಗರಿಕ ಸಮಾಜದಲ್ಲೇ ಅತ್ಯಂತ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ದುರ್ಗತಿಯಲ್ಲಿ ಬದುಕುತ್ತಿರುವ ಸಮುದಾಯವನ್ನು ಸರ್ಕಾರ ಅರೆ ಅಲೆಮಾರಿ ಎಂದು ಪರಿಗಣಿಸಿದೆಯಾದರೂ ಯಾವುದೇ ಮೀಸಲಾತಿ ಸೌಲಭ್ಯವನ್ನು ನೀಡಿಲ್ಲ. ಹೀಗಾಗಿ ಇವರನ್ನು ಕನಿಷ್ಟ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು.
ತಲೆತಲಾಂತರದಿಂದ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯ ಮಾಲೀಕತ್ವವನ್ನು ಕೊಡಬೇಕಾದ ಅಗತ್ಯತೆ ಇದೆ -ಡಾ. ಹಿ.ಚಿ. ಬೋರಲಿಂಗಯ್ಯ, ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ.

ಅಭಿವೃದ್ಧಿ ಕಾಣದ "ಸಿದ್ದಿ'ಗಳು

ಭಾರತದ ಆಫ್ರಿಕನ್ನರು!
ದಟ್ಟ ಕಾನನವೇ ಇವರಿಗೆ ಸರ್ವಸ್ವ. ಕಾಡು ಬಿಟ್ಟು ನಾಡಿಗೆ ಬರಲು ಇವರ ಮನಸು ಒಪ್ಪುವುದಿಲ್ಲ. ಒಂದು ವೇಳೆ ಒಪ್ಪಿದರೂ ಅವರ ಆಚರಣೆಗಳು ಅವಕಾಶ ನೀಡುವುದಿಲ್ಲ.
ಕಾಡು ಮೇಡು ಅಲೆದು ಜೀವನ ಸಾಗಿಸುವ ಇವರು ನಾಗರಿಕ ಜನ ಸಮುದಾಯದ ಪಾಲಿಗೆ ಅಸ್ಪೃಶ್ಯರು. ಹೀಗಾಗಿಯೇ ಇಂತಹ ಸಮುದಾಯದ ಸಹವಾಸವೇ ಬೇಡ ಎಂಬ ಭಾವನೆಯಿಂದ ಕಾಡನ್ನು ಬಿಟ್ಟು ನಾಡಿಗೆ ಬರುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅರಣ್ಯ ಉತ್ಪನ್ನಗಳ ಸಾಗಣೆ ಮೇಲೆ ಹಾಕಿರುವ ನಿರ್ಬಂಧ ಮತ್ತು ಕಾಡಿನಲ್ಲಿ ವಾಸ ಮಾಡಲು ಹಲವಾರು ನಿಬಂಧನೆಗಳನ್ನು ವಿಧಿಸಿರುವುದರಿಂದ ಈ ಸಮುದಾಯ ಅನಿವಾರ್ಯವಾಗಿ ನಾಡಿನತ್ತ ವಲಸೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವುದು ಸಿದ್ದಿ ಸಮುದಾಯ.
ಇವರನ್ನು ಭಾರತದ ಆಫ್ರಿಕನ್ನರು ಎಂದು ಕರೆಯಲಾಗುತ್ತದೆ. ಏಕೆಂದರೆ, ಇವರ ಮೂಲ ಆಫ್ರಿಕಾ ದೇಶವೆಂಬ ಪ್ರತೀತಿ ಇದೆ. ಆದರೆ, ಇದಕ್ಕೆ ಪೂರಕವಾದ ಯಾವುದೇ ಲಿಖಿತ ದಾಖಲೆಗಳಿಲ್ಲ. ಆದಾಗ್ಯೂ ಕರ್ನಾಟಕ ಗೆಜೆಟಿಯರ್್ನಲ್ಲಿ ಈ ಸಿದ್ದಿಗಳ ಮೂಲದ ಬಗ್ಗೆ ಉಲ್ಲೇಖವಿದೆ. ಅದರಂತೆ ಪೋರ್ಚುಗೀಸರು ಮತ್ತು ಅರಬ್ ವ್ಯಾಪಾರಿಗಳು ಆಫ್ರಿಕಾದ ದಕ್ಷಿಣ ಭಾಗ ಅಥವಾ ಕೇಂದ್ರ ಭಾಗದಿಂದ ಈ ಸಮುದಾಯದವರನ್ನು ಕರೆತಂದು ಭಾರತದಲ್ಲಿ ಜೀತಕ್ಕಿಟ್ಟಿದ್ದರು.
ಇನ್ನೂ ಒಂದು ಮಾಹಿತಿ ಪ್ರಕಾರ 16 ಮತ್ತು 19 ನೇ ಶತಮಾನಗಳ ಅವಧಿಯಲ್ಲಿ ಆಫ್ರಿಕಾ ರಾಷ್ಟ್ರಗಳಾದ ಮೊಜಾಂಬಿಕ್, ಉಗಾಂಡ, ಕೆನ್ಯಾ, ಬೆಂಬಾ, ಕಾಂಗೋ, ನೈಜೀರಿಯಾ, ನಂಜಿಬಾರ್, ಇಥಿಯೋಪಿಯಾ ಮತ್ತು ತಾಂಜೇನಿಯಾದ ಕೆಲವು ಕುಟುಂಬಗಳನ್ನು ಪೋರ್ಚುಗೀಸರು, ಬ್ರಿಟಿಷರು ಮತ್ತು ಅರಬ್ ದೊರೆಗಳು ಗೋವಾ ರಾಜ್ಯವನ್ನು ಆಕ್ರಮಿಸಿಕೊಂಡಾಗ ಅಲ್ಲಿಗೆ ಕರೆ ತಂದಿದ್ದರು. ಹೀಗೆ ಕರೆತಂದ ಈ ಸಮುದಾಯ ದೊರೆಗಳ ಸೇವಕರಾಗಿ ದುಡಿಯುತ್ತಿದ್ದರು.
ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದಾಗ್ಯೂ ಹೈದ್ರಾಬಾದ್್ನ ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲ್ಯುಕ್ಯುಲರ್ ಬಯಾಲಜಿ(ಸಿಸಿಎಂಬಿ) ಸಂಸ್ಥೆ ನಡೆಸಿರುವ ಸಂಶೋಧನೆ ಪ್ರಕಾರ ಸಿದ್ದಿ ಸಮುದಾಯ ಆಫ್ರಿಕಾ ದೇಶದ ವಂಶವಾಹಿಯಾಗಿದೆ ಎಂಬುದನ್ನು ದೃಢಪಡಿಸಿದೆ.
ಇವರು ಕರ್ನಾಟಕಕ್ಕೆ ಬಂದು 400 ವರ್ಷಗಳೇ ಕಳೆದಿವೆ. ರಾಜ್ಯದ ಉತ್ತರಕನ್ನಡ ಜಿಲ್ಲೆಯ ಹಳಿಯಾಳ, ಅಂಕೋಲ, ಮುಂಡಗೋಡು, ಶಿರಸಿಯ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿದ್ದಿಗಳಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಧಾರವಾಡದ ಕಲಘಟಗಿಯಲ್ಲಿ ಸಿದ್ದಿ ಸಮುದಾಯ ವಾಸವಾಗಿದೆ. ಹೀಗೆ ಅಲ್ಲಲ್ಲಿ ಚದುರಿರುವ ಈ ಸಮುದಾಯದ ಒಟ್ಟು ಜನಸಂಖ್ಯೆ ಕೇವಲ 30 ಸಾವಿರದಷ್ಟು.
ಇನ್ನು ದೇಶದಲ್ಲಿ ಅತ್ಯಧಿಕವಾಗಿ ಸಿದ್ದಿ ಜನಾಂಗ ಇರುವ ರಾಜ್ಯವೆಂದರೆ ಗುಜರಾತ್. ಅಲ್ಲಿ ಸಿದಿ ಎಂದು ಕರೆಯಲಾಗುವ ಈ ಸಮುದಾಯದ ಜನಸಂಖ್ಯೆ ಸುಮಾರು 50 ಸಾವಿರ. ಅದೇ ರೀತಿ ಆಂಧ್ರಪ್ರದೇಶದಲ್ಲೂ ಇದೇ ಹೆಸರಿನಿಂದ ಕರೆಯಲ್ಪಡುವ ಇವರ ಸಂಖ್ಯೆ ಅತ್ಯಲ್ಪ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಿಗಳು ಕಾಡಿನಲ್ಲಿ ವಾಸ ಮಾಡಿದರೆ, ಖಾನಾಪುರ ಮತ್ತು ಕಲಘಟಗಿಯಲ್ಲಿ ಜನವಸತಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
ನಾಗರಿಕ ಸಮಾಜದ ಪಾಲಿಗೆ ಇವರು ಅಸ್ಪೃಶ್ಯರು. ವಲಸೆ ಬಂದ ದಿನದಿಂದಲೂ ಇವರನ್ನು ಮೇಲ್ವರ್ಗದ ಜನಾಂಗ ಕೂಲಿ ನಾಲಿ ಮಾಡುವ ಸಮುದಾಯದವರೆಂದು ಗುರುತಿಸಿದೆ.ಹೀಗಾಗಿ ಸಮಾಜದ ಬಹುತೇಕ ಕುಟುಂಬಗಳ ಸದಸ್ಯರು ಮೇಲ್ವರ್ಗದ ಮನೆಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದಾರೆ.
ಇನ್ನೂ ಕೆಲವು ಕುಟುಂಬಗಳು ತಮ್ಮ ಮೂಲ ಕಸುಬು ಬೇಟೆಯನ್ನೇ ಮುಂದುವರೆಸಿಕೊಂಡು ಬಂದಿದ್ದವು. ಇದರ ಜತೆಗೆ ಜೇನು, ಮೆಣಸು, ರಾಮಪತ್ರೆ ಸೇರಿದಂತೆ ಮತ್ತಿತರೆ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಚಟುವಟಿಕೆಗಳಿಗೆ ಸರ್ಕಾರಗಳು ಕಡಿವಾಣ ಹಾಕಿದ ಪರಿಣಾಮ ಸಮುದಾಯ ಸಂಕಷ್ಟಕ್ಕೀಡಾಗಿದೆ.
ಆರ್ಥಿಕವಾಗಿ ತೀರಾ ಹಿಂದುಳಿದ ಸಮುದಾಯವಾಗಿರುವ ಸಿದ್ದಿಗಳಿಗೆ ಶಿಕ್ಷಣ ಎಂಬುದು ಅಷ್ಟಕ್ಕಷ್ಟೆ. ಏಕೆಂದರೆ, ಬಡತನ, ಜೀತದಂತಹ ಕಾರಣಗಳು ಶಿಕ್ಷಣಕ್ಕೆ ಅಘೋಷಿತ ನಿರ್ಬಂಧ ಹಾಕಿವೆ. ಕುಟುಂಬದ ಯಜಮಾನ ನಾನಾ ಕಾರಣಗಳಿಗೆ ಜಮೀನ್ದಾರನ ಬಳಿ ಸಾಲ ಮಾಡುತ್ತಾನೆ. ಅದನ್ನು ತೀರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ತಾನು, ತನ್ನ ಹೆಂಡತಿ ಮಕ್ಕಳನ್ನು ಜಮೀನ್ದಾರನ ಹೊಲ, ಗದ್ದೆಗಳಲ್ಲಿ ಜೀತದಾಳಾಗಿ ದುಡಿತಕ್ಕೆ ದೂಡುತ್ತಾನೆ.
ಸಾಮಾನ್ಯ ಜ್ಞಾನವಿಲ್ಲದಿರುವುದರ ಲಾಭ ಪಡೆದು ಸಿದ್ದಿಗಳನ್ನು ನಿರಂತರವಾಗಿ ಶೋಷಿಸುತ್ತಾ ಬಂದಿದ್ದಾರೆ. ಹೀಗಾಗಿ ಆರ್ಥಿಕ ಪ್ರಗತಿ ಎಂಬುದು ಸಿದ್ದಿಗಳಿಗೆ ಸಿದ್ಧಿಸಿಲ್ಲ.
ಇನ್ನು ಕೆಲವು ಕುಟುಂಬಗಳು ಬೇಟೆ ವೃತ್ತಿ ಬಿಟ್ಟು ಗೋವಾಕ್ಕೆ ವಲಸೆ ಹೋಗಿ ಅಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದಾರೆ. ಜತೆಗೆ ಓದಿನರಮನೆಗೆ ಹೋಗಬೇಕಾಗಿದ್ದ ಮಕ್ಕಳನ್ನೂ ಬಾಲ ಕಾರ್ಮಿಕರನ್ನಾಗಿಸಿದ್ದಾರೆ. ಇವರ ವಿಚಿತ್ರ ವೈಶಿಷ್ಟ್ಯತೆ ಎಂದರೆ, ನಾಳೆಯ ಬಗ್ಗೆ ಯೋಚಿಸುವುದೇ ಇಲ್ಲ. ಇಂದು ದುಡಿದದ್ದನ್ನು ಇಂದೇ ಕಳೆಯಬೇಕೆಂಬ ಹುಂಬತನ ಇವರದ್ದು. ಏಕೆ ಹೀಗೆ ಎಂದು ಕೇಳಿದರೆ, ನಮ್ಮಲ್ಲಿ ಶಕ್ತಿ ಇದೆ. ದುಡಿದು ತಿನ್ನುವ ತಾಕತ್ತು ಇದೆ ಎನ್ನುತ್ತಾರೆ.
ಬಡತನದ ಬೇಗೆಯಲ್ಲಿ ಬೇಯುತ್ತಿರುವ ಸಮುದಾಯದಲ್ಲಿ ಬಾಲ್ಯ ವಿವಾಹ ನಿಷಿದ್ಧವಲ್ಲ. ಶೈಕ್ಷಣಿಕವಾಗಿ ಹಿಂದೆ ಬೀಳಲು ಮತ್ತೊಂದು ಕಾರಣವೆಂದರೆ, ಶಾಲೆಗಳು ವಾಸ ಸ್ಥಳಕ್ಕಿಂತ ದೂರ ಇರುವುದು. ಬಸ್್ನಲ್ಲಿ ಪ್ರಯಾಣ ಮಾಡಿ ಮಕ್ಕಳು ಓದಬೇಕು. ಆದರೆ, ಬಸ್್ಚಾರ್ಜ್್ಗೆ ನೀಡಲು ಒಮ್ಮೊಮ್ಮೆ ಹಣ ಇರುವುದಿಲ್ಲ ಎನ್ನುವ ಕಾರಣವನ್ನು ಇವರು ನೀಡುತ್ತಾರೆ.
ಆದರೆ, ಇದಕ್ಕೆ ಅಪವಾದವೆಂಬಂತೆ ಸಮುದಾಯ ಮೋಹನ್್ಸಿದ್ದಿ ಎಂಬ ಯುವಕ ಎಂಎಸ್್ಡಬ್ಲ್ಯೂ ಸ್ನಾತಕೋತ್ತರ ಪದವಿ ಪಡೆದಿರುವುದು. ಜತೆಗೆ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇಡೀ ದೇಶದಲ್ಲಿರುವ ಸಿದ್ದಿ ಸಮುದಾಯದಲ್ಲಿ ಹೀಗೆ ಉನ್ನತ ವ್ಯಾಸಂಗ ಮಾಡಿದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮೋಹನ್್ಸಿದ್ದಿ ಪಾತ್ರರಾಗಿದ್ದಾರೆ.
ಇರುವ 30 ಸಾವಿರದಷ್ಟು ಜನರಲ್ಲಿ ಮೂರು ಧರ್ಮಗಳ ಸಮಾಗಮವಾಗಿದೆ. ಇವರಲ್ಲಿ ಹಿಂದೂಗಳು ಬಹುಸಂಖ್ಯಾತರಾದರೆ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದವರೂ ಇದ್ದಾರೆ. ಹಿಂದೂಗಳಿಗೆ ಕೊಂಕಣಿ ಮಾತೃಭಾಷೆಯಾದರೆ, ಮುಸ್ಲಿಂರಿಗೆ ಉರ್ದು ಮತ್ತು ಕ್ರಿಶ್ಚಿಯನ್ನರಿಗೆ ಮರಾಠಿ ಮಾತೃಭಾಷೆಯಾಗಿದೆ.
ಮೂರು ಧರ್ಮಗಳು ತಮ್ಮ ಧರ್ಮಗಳಿಗೆ ಅನುಗುಣವಾಗಿ ಮದುವೆ ಸೇರಿದಂತೆ ಇತರೆ ಶುಭ ಸಮಾರಂಭಗಳನ್ನು ಮಾಡುತ್ತವೆ. ಇಲ್ಲೊಂದು ಗಮನಿಸಬೇಕಾದ ಅಂಶವೆಂದರೆ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಸಮುದಾಯದಲ್ಲಿ ತಮ್ಮ ಧಾರ್ಮಿಕ ಗುರುಗಳು ಬಂದು ಮದುವೆ ಕಾರ್ಯಗಳನ್ನು ಮುಗಿಸಿ ಹೋದ ನಂತರ ಹಿಂದೂ ಧರ್ಮದ ರೀತಿಯಲ್ಲೇ ಗುಟ್ಟಾಗಿ ಕೆಲವು ಪದ್ಧತಿಗಳನ್ನು ಆಚರಿಸುತ್ತವೆ. ಹಿಂದೂಧರ್ಮದಲ್ಲಿ ಮಧುಮಗಳು ಗಂಡನ ಮನೆಯ ಹೊಸ್ತಿಲಿನಲ್ಲಿಟ್ಟ ಅಕ್ಕಿ ತುಂಬಿದ ಸೇರನ್ನು ಕಾಲಿನಿಂದ ಒದ್ದು ಒಳ ಹೋಗಬೇಕು. ಇದೇ ಪದ್ಧತಿಯನ್ನು ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದವರು ಧರ್ಮಗುರುಗಳಿಗೆ ಗೊತ್ತಾಗದಂತೆ ಆಚರಣೆ ಮಾಡುತ್ತಾರೆ.
ಇವರಿಗೆ ಅರಣ್ಯವೇ ದೇವರು. ಆದರೆ, ಪೂಜಿಸುವುದು ತಮ್ಮ ಹಿರಿಯರನ್ನು. ಅಂದರೆ, ಮರಣ ಹೊಂದಿದ ತಮ್ಮ ಕುಟುಂಬದ ಹಿರಿಯರನ್ನು ದೇವರೆಂದು ಭಾವಿಸುತ್ತಾರೆ. ಅವರೇ ಆರಾಧ್ಯದೈವ. ಹೀಗಾಗಿ ವರ್ಷಕ್ಕೆ ಎರಡು ಬಾರಿ ಅಂದರೆ, ನವರಾತ್ರಿ ವೇಳೆ ಮತ್ತು ಹೋಳಿ ಹಬ್ಬದ ವೇಳೆ ಹಿರಿಯರ ಪೂಜೆಯನ್ನು ನೆರವೇರಿಸುತ್ತಾರೆ. ಅಲ್ಲದೇ ಮನೆಯಲ್ಲಿ ಯಾವುದೇ ಶುಭಸಮಾರಂಭಗಳು ಆರಂಭವಾಗುವ ಮುನ್ನ ಹಿರಿಯರನ್ನು ನೆನಪಿಸಿಕೊಳ್ಳಲೆಂದೇ ಪೂಜಿಸುತ್ತಾರೆ.
ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಈ ಸಿದ್ದಿಗಳನ್ನು ಮೀಸಲಾತಿ ವಿಚಾರದಲ್ಲಿ ಎರಡು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. ಉತ್ತರ ಕನ್ನಡದಲ್ಲಿರುವ ಮೂರೂ ಧರ್ಮಗಳ ಸಿದ್ದಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರೆ, ಉಳಿದ ಭಾಗಗಳ ಸಿದ್ದಿಗಳನ್ನು ಅಲ್ಪಸಂಖ್ಯಾತರ ಪಟ್ಟಿಗೆ ಸೇರಿಸಲಾಗಿದೆ.
ಬಹುತೇಕ ಆಫ್ರಿಕಾದ ಗುಡ್ಡಗಾಡು ಪ್ರದೇಶದ ಜನರಂತೆ ಜಾನಪದ ಉಡುಗೆ ತೊಡುಗೆಗಳಿಗೆ ಮಹತ್ವ ನೀಡುವ ಸಿದ್ದಿಗಳು, ಪ್ರಾಣಿಗಳ ಚರ್ಮದಿಂದ ತಾವೇ ತಯಾರಿಸುವ 'ಡಮಾಮ್್' ಎಂಬ ಹೆಸರಿನ ಡೋಲು ಬಾರಿಸುತ್ತ ವನ ದೇವತೆಯನ್ನು ಪೂಜಿಸುವ ದಿನ ಇಡೀ ರಾತ್ರಿ ಹಾಡಿ ಕುಣಿದು ಕುಪ್ಪಳಿಸುತ್ತಾರೆ.
ನಮ್ಮ ಸಮುದಾಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸೇರಿದಂತೆ ಎಲ್ಲಾ ವರ್ಗದಲ್ಲೂ ತೀರಾ ಹಿಂದುಳಿದಿದೆ. ಅರಣ್ಯವಾಸಿಗಳಾಗಿರುವ ನಮಗೆ ಅರಣ್ಯ ಪ್ರದೇಶದಲ್ಲಿ ವಾಸಿಸುವ ಹಕ್ಕನ್ನು ಕಸಿಯಲಾಗುತ್ತಿದೆ. ಶ್ರೀಮಂತ ವರ್ಗದಿಂದ ಶೋಷಣೆಗಳಾಗುತ್ತಿವೆ. ಇಂತಹ ಶೋಷಣೆಯನ್ನು ತಪ್ಪಿಸುವಂತಹ ಕೆಲಸವನ್ನು ಸರ್ಕಾರಗಳು ಮಾಡಿ, ನಮಗೂ ಬದುಕುವ ಹಕ್ಕನ್ನು ಕಲ್ಪಿಸಬೇಕಿದೆ - ಮೋಹನ್್ಸಿದ್ದಿ, ಸಿದ್ದಿ ಸಮುದಾಯದ ಮುಖಂಡ.

ರಾಜರ ಪ್ರೀತಿಪಾತ್ರರಿಗೆ ರಾಜಕೀಯದಲ್ಲೂ ಪ್ರಾತಿನಿಧ್ಯ

ಹಳ್ಳಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದವರು. ರಾಜಮಹಾರಾಜರಿಗೆ ನಂಬಿಕಸ್ಥರಾಗಿದ್ದವರು. ಕೋಟೆಯೊಳಗೆ ಇರುವೆಯೂ ಪ್ರವೇಶಿಸದಂತೆ ನೋಡಿಕೊಂಡು ಸಂಸ್ಥಾನಗಳನ್ನು ಕಾಯಲೆಂದೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು.
ರಾಜರ ನಂತರ ಊರಿನ ಶಾನುಭೋಗರು, ಪಟೇಲರು, ಗೌಡರ ನಿಷ್ಠಾವಂತ ಸೇನಾನಿಗಳಾಗಿದ್ದವರು. ಹಿಂದೂಸ್ತಾನಕ್ಕೆ ಮುಕುಟಪ್ರಾಯದಂತಹ ಬೃಹತ್ ಕಾವ್ಯ 'ರಾಮಾಯಣ'ವನ್ನು ರಚಿಸಿಕೊಟ್ಟ ವಾಲ್ಮೀಕಿ ಮಹರ್ಷಿಯ ವಂಶಸ್ಥರಿವರು.
ವಾಲ್ಮೀಕಿಯನ್ನೇ ತಮ್ಮ ದೈವ ಎಂದು ಆರಾಧಿಸುವವರನ್ನು ವಾಲ್ಮೀಕಿಯೆಂತಲೂ, ಊರುಗಳನ್ನು ಕಾಯುವ ಮತ್ತು ಸಣ್ಣ ಪುಟ್ಟ ಸಂಸ್ಥಾನಗಳನ್ನು ಆಳಿದ್ದಕ್ಕೆ ನಾಯಕರೆಂದೂ, ಊರುಗಳಲ್ಲಿ ಪಾಳೇಗಾರಿಕೆ ಮಾಡಿಕೊಂಡಿದ್ದಕ್ಕೆ ಪಾಳೇಗಾರರೆಂತಲೂ, ಹಳ್ಳಿಗಳಲ್ಲಿ ನೀರು ಪೂರೈಸುವ ಕಾಯಕ ನಡೆಸಿಕೊಂಡು ಬಂದಿದ್ದಕ್ಕೆ ನೀರುಗಂಟಿ(ತಳವಾರ)ಗಳೆಂದೂ... ಹೀಗೆ ನಾನಾ ಹೆಸರಿನಲ್ಲಿ ಕರೆಯಲಾಗುತ್ತಿದೆ ಈ ನಾಯಕ ಸಮುದಾಯವನ್ನು.
ಇದರ ಜತೆಗೆ ರಾಜರ ಕಾಲದಿಂದಲೂ ಕಾಡು ಮೇಡುಗಳಲ್ಲಿ ಬೇಟೆ ಮಾಡುತ್ತಾ ಜೀವನ ಸಾಗಿಸುತ್ತಿದ್ದುದರಿಂದ ಬೇಡರೆಂಬ ಹೆಸರೂ ಈ ಜನಾಂಗಕ್ಕೆ ಬಂದಿದೆ.
ಈ ಸಮುದಾಯಕ್ಕೆ ಹೆಚ್ಚಾಗಿ ಕರೆಯುವ ಹೆಸರು ವಾಲ್ಮೀಕಿ ಎಂದು. ಈ ಹೆಸರು ಬಂದಿದ್ದರ ಹಿಂದೆ ಒಂದು ಐತಿಹ್ಯವೇ ಅಡಗಿದೆ.
ವಾಲ್ಮೀಕಿಯ ಮೂಲ ಹೆಸರು ರತ್ನಾಕರ. ಈತನ ವೃತ್ತಿ ಬೇಟೆಯಾಡುವುದು. ಹೀಗೆ ಬೇಟೆಯಾಡುವ ಸಂದರ್ಭದಲ್ಲಿ ರತ್ನಾಕರ ಕಾಡಿನಲ್ಲಿ ಮೈಮರೆತು ರಾಮನಾಮ ಧ್ಯಾನದಲ್ಲಿ ಮುಳುಗಿದ್ದಾಗ ಆತನ ಸುತ್ತ ಬೃಹತ್ತಾದ ಹುತ್ತ ಬೆಳೆದುಕೊಂಡಿತು ಎಂಬ ಪ್ರತೀತಿ ಇದೆ. ಸಂಸ್ಕೃತದಲ್ಲಿ ಹುತ್ತಕ್ಕೆ 'ವಲ್ಮೀಕಿ' ಎಂದು ಕರೆಯಲಾಗುತ್ತದೆ. ಹುತ್ತದಲ್ಲಿದ್ದ ರತ್ನಾಕರ ಇಡೀ ಹಿಂದೂಸ್ತಾನಕ್ಕೆ ಕೊಡುಗೆಯಾಗಿ ರಾಮಾಯಣ ರಚಿಸಿದ. ಹೀಗಾಗಿ ಬೇಡರ ಸಮುದಾಯದ ಈ ರತ್ನಾಕರ ಹುತ್ತದಲ್ಲಿದ್ದ ಧ್ಯಾನ ಮಾಡಿದ್ದರಿಂದ ದಿನ ಕಳೆದಂತೆ ವಾಲ್ಮೀಕಿಯಾಗಿ, ವಾಲ್ಮೀಕಿ ಮಹರ್ಷಿಯಾಗಿ ಬೇಡ ಸಂಕುಲಕ್ಕೆ ದೇವರಾದರು.
ಅಂದಿನಿಂದ ಬೇಡರ ಸಮುದಾಯ ವಾಲ್ಮೀಕಿ ಎಂದು ಪರಿಗಣಿಸಲ್ಪಟ್ಟಿದೆ.
ಇದೇ ಬೇಡರೆಂದರೆ ರಾಜರಿಗೆ ಎಲ್ಲಿಲ್ಲದ ಪ್ರೀತಿ-ವಿಶ್ವಾಸ. ಏಕೆಂದರೆ, ರಾಜರು ಬೇಟೆಗೆ ಹೋದಾಗಲೆಲ್ಲಾ ಈ ಬೇಡರನ್ನು ಕರೆದೊಯ್ಯುತ್ತಿದ್ದರು ಮತ್ತು ಅವರಿಗೆ ಬೇಟೆಯಾಡಲು ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದರು.
ಈ ಬೇಡರಿಗೆ ಧೈರ್ಯವಂತರು ಎಂಬುದು ಅನ್ವರ್ಥನಾಮ. ಏಕೆಂದರೆ, ಮುಂದೆ ಎದುರಾಗುವ ಯಾವ ಅಪಾಯವನ್ನು ಲೆಕ್ಕಿಸದೇ ಮುನ್ನುಗ್ಗಿ ಬೇಟೆಯಾಡುವಂತಹ ಧೈರ್ಯ, ಸ್ಥೈರ್ಯ ಅವರಲ್ಲಿತ್ತು. ಹೀಗಾಗಿಯೇ ರಾಜರು ಬೇಡರನ್ನು ತಮ್ಮ ಸಂಸ್ಥಾನದಲ್ಲಿ ಸೈನಿಕರಾಗಿ ನೇಮಕ ಮಾಡಿಕೊಳ್ಳುತ್ತಿದ್ದರು. ವಿರೋಧಿ ಸೈನ್ಯದ ಸದ್ದಡಗಿಸಬಲ್ಲ ಯುದ್ಧ ನೈಪುಣ್ಯತೆ ಅವರಲ್ಲಿತ್ತು. ಆ ಕಾಲಕ್ಕೆ ಅವರಲ್ಲಿ ಗೆರಿಲ್ಲಾ ಮಾದರಿಯ ಹೋರಾಟವಿತ್ತು.
ರಾಜರ ಆಡಳಿತಗಳು ಪರ್ಯಾವಸನಗೊಳ್ಳುತ್ತಿದ್ದಂತೆಯೇ ದೇಶಕ್ಕೆ ದಂಡೆತ್ತಿ ಬಂದ ಬ್ರಿಟಿಷರ ಕಣ್ಣಿಗೆ ಮೊದಲು ಬಿದ್ದವರೇ ಈ ಬೇಡರು. ಏಕೆಂದರೆ, ಬ್ರಿಟಿಷರು ಭಾರತಕ್ಕೆ ಬರುವ ಮೊದಲೇ ಬೇಡರ ಹೋರಾಟದ ಬಗ್ಗೆ ತಿಳಿದುಕೊಂಡಿದ್ದರು.
ಅಲ್ಲಲ್ಲಿ ಸಣ್ಣ ಪುಟ್ಟ ಸಂಸ್ಥಾನಗಳಲ್ಲಿ, ಹಳ್ಳಿಗಳ ಸಮೂಹದಲ್ಲಿ ನಾಯಕರಾಗಿ ಆಡಳಿತ ನಡೆಸುತ್ತಿದ್ದ ಇವರನ್ನು ಮೊದಲು ಮಟ್ಟ ಹಾಕಲು ಬ್ರಿಟಿಷರು ಮುಂದಾದರು. ಆದರೆ, ಅವರ ಕೆಚ್ಚೆದೆಯ ಹೋರಾಟದ ಮುಂದೆ ಬ್ರಿಟಿಷರ ಆಟ ನಡೆಯಲಿಲ್ಲ. ಕ್ರಮೇಣ ದೇಶವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡ ಬ್ರಿಟಿಷರು ಬೇಡರ ವಿರುದ್ಧ ಕಾನೂನು ಕ್ರಮ ಜರುಗಿಸುವ ದೃಷ್ಟಿಯಿಂದ 'ಕ್ರಿಮಿನಲ್ ಟ್ರೈಬ್ ಆಕ್ಟ್್' ಜಾರಿಗೆ ತಂದರು. ಈ ಮೂಲಕ ಕಾಡುಮೇಡುಗಳಲ್ಲಿ ಬೇಟೆಯಾಡುತ್ತಿದ್ದವರನ್ನು ಎಡಮುರಿ ಕಟ್ಟಿ ಶಿಕ್ಷಿಸಿದರು.
ಬ್ರಿಟಿಷರ ಹಾವಳಿ ಮತ್ತು ಬದಲಾದ ಸಂಸ್ಕೃತಿಯಿಂದಾಗಿ ಬೇಡರು, ವಾಲ್ಮೀಕಿ, ನಾಯಕರು ತಮ್ಮ ಕುಲಕಸುಬನ್ನೇ ಮರೆಯಬೇಕಾಯಿತು. ಆಧುನಿಕ ಜಗತ್ತಿಗೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಅವರ ಮುಂದೆ ಸವಾಲಾಗಿ ನಿಂತಿತು.
ಚಿತ್ರದುರ್ಗ, ಕೆಳದಿ, ರಾಯದುರ್ಗ, ಹರಪನಹಳ್ಳಿ, ತರೀಕೆರೆ, ಸಂತೆಬೆನ್ನೂರು, ನಾಯಕನಹಟ್ಟಿ, ಕಣಕುಪ್ಪೆ, ಸಿರಾ, ಗುಮ್ಮನಾಯಕನಪಾಳ್ಯ, ಹಾಗಲವಾಡಿ, ನಿಡಗಲ್ಲು, ಪರತಿಕೋಟೆ, ಬಾಣಾವರ ಸೇರಿದಂತೆ ಹಲವೆಡೆ ನಡೆದುಕೊಂಡು ಬಂದಿದ್ದ ನಾಯಕರ ಸಂಸ್ಥಾನಗಳು ಅಸ್ತಿತ್ವವನ್ನು ಕಳೆದುಕೊಂಡವು. ವೀರಮದಕರಿ ನಾಯಕ, ಸರ್ಜಪ್ಪನಾಯಕ, ದೊಡ್ಡ ಸಂಕಣ್ಣ ನಾಯಕ, ಉಮಾಜಿ ನಾಯಕರಂತಹ ಹಲವರು ಸಂಸ್ಥಾನಗಳನ್ನು ಆಳಿದವರು.
ಇಂತಹ ವೀರ ಯೋಧರ ಈ ಸಮುದಾಯದ ಈಗಿನ ಪರಿಸ್ಥಿತಿ ಹೇಳಿಕೊಳ್ಳುವಂತಿಲ್ಲ. ರಾಜ್ಯದೆಲ್ಲೆಡೆ ಹರಿದು ಹಂಚಿಹೋಗಿರುವ ಸಮುದಾಯ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ.
ರಾಜ್ಯದಲ್ಲಿ ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ರಾಯಚೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ಬಿಜಾಪುರ, ಚಾಮರಾಜನಗರ, ಯಾದಗಿರಿ, ಗುಲ್ಬರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರಮುಖವಾಗಿ ಈ ಸಮುದಾಯ ಇದೆ.
ಈ ವಾಲ್ಮೀಕಿ ಸಮುದಾಯವನ್ನು ವಾಲ್ಮೀಕಿ, ಬೇಡ, ನಾಯಕ, ಬೇಡರ್, ತಳವಾರ, ಪಾಳೆಗಾರ ಸೇರಿದಂತೆ 15 ಕ್ಕೂ ಹೆಚ್ಚು ಹೆಸರಿನಲ್ಲಿ ಕರೆಯಲಾಗುತ್ತಿದೆ.
ಇಂದಿನ ಸ್ಥಿತಿಯನ್ನು ಗಮನಿಸಿದರೆ, ಇತರೆ ಪರಿಶಿಷ್ಟ ವರ್ಗಗಳಿಗೆ ಹೋಲಿಸಿದರೆ, ಈ ವಾಲ್ಮೀಕಿ ಸಮುದಾಯ ರಾಜಕೀಯ ಕ್ಷೇತ್ರದಲ್ಲಿ ಒಂದು ಹೆಜ್ಜೆ ಮುಂದಿದೆ. 18 ಶಾಸಕರು ಮತ್ತು ಇಬ್ಬರು ಸಂಸದರನ್ನು ಹೊಂದಿರುವ ಈ ಸಮುದಾಯ ಸ್ವಲ್ಪ ಮಟ್ಟಿಗೆ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಬಾಲಚಂದ್ರ ಜಾರಕಿಹೊಳಿ ಮತ್ತವರ ಸಹೋದರರು, ಬಿ.ಶ್ರೀರಾಮುಲು ಮತ್ತು ಅವರ ಸಹೋದರಿ ಜೆ.ಶಾಂತ, ರಾಜೂಗೌಡ ಸೇರಿದಂತೆ ಹಲವಾರು ಮುಖಂಡರು ರಾಜಕೀಯವಾಗಿ ಹೆಸರು ಮಾಡಿದವರು.
ಆದರೆ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಅಷ್ಟಕಷ್ಟೆ. ರಾಜಕೀಯವಾಗಿ ಬಲಾಢ್ಯರಾದವರು ಆರ್ಥಿಕ ಪ್ರಗತಿ ಕಂಡಿದ್ದರೆ, ಉಳಿದ ಶೇ. 90 ಕ್ಕೂ ಹೆಚ್ಚು ಮಂದಿ ದುಸ್ಥಿತಿಯಲ್ಲಿದ್ದಾರೆ.
ಏಕೆಂದರೆ, ಅವರು ಹಿಂದಿನಿಂದಲೂ ನಂಬಿಕೊಂಡು ಬಂದಿದ್ದ ಬೇಟೆ, ಪಾಳೇಗಾರಿಕೆ, ತಳವಾರಿಕೆ ಸೇರಿದಂತೆ ಹಲವು ಕುಲಕಸುಬುಗಳು ಇನ್ನಿಲ್ಲದಂತಾಗಿವೆ. ಈ ಕುಲಕಸುಬನ್ನು ಕೈಬಿಟ್ಟಿರುವ ಸಮುದಾಯ ಈಗ ವ್ಯವಸಾಯ, ಜಾನುವಾರು ಮತ್ತು ಕುರಿ ಸಾಕಾಣಿಕೆ, ಕೂಲಿನಾಲಿ ಮಾಡಿ ಬದುಕುತ್ತಿದೆ.
ಪರಿಶಿಷ್ಟ ಜಾತಿಯಲ್ಲಿ ಸುಮಾರು 50 ಜಾತಿಗಳನ್ನು ಸೇರಿಸಲಾಗಿದೆ. ಇದರಲ್ಲಿ ವಾಲ್ಮೀಕಿ ಜನಸಂಖ್ಯೆಯೇ ಅಧಿಕ. ಈ ವರ್ಗಕ್ಕೆ ಶೇ. 7.5 ರಷ್ಟು ಮೀಸಲಾತಿಯನ್ನು ನಿಗದಿ ಮಾಡಿದ್ದರೂ ಅನುದಾನ ಸಿಗುತ್ತಿರುವುದು ಕೇವಲ ಶೇ.3 ರಷ್ಟಾಗಿದೆ. ಆದರೆ, ಈ ಅನುದಾನ ಸಮರ್ಪಕವಾಗಿ ಜನಾಂಗಕ್ಕೆ ತಲುಪುತ್ತಿಲ್ಲ. ಏಕೆಂದರೆ, ಸುಳ್ಳು ಜಾತಿ ಪತ್ರಗಳನ್ನು ಪಡೆದಿರುವವರಿಗೆ ಇದರ ಅರ್ಧಪಾಲು ಸೇರುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹವರನ್ನು ಮಟ್ಟ ಹಾಕಿ ಶೇ. 7.5 ರಷ್ಟು ಮೀಸಲಾತಿ ನೀಡುವತ್ತ ಸರ್ಕಾರಗಳು ಗಮನಹರಿಸಬೇಕಿದೆ - ಸಿರಿಗೆರೆ ತಿಪ್ಪೇಶ್, ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ.

ನೇಕಾರನ ಬದುಕಲ್ಲಿ ಕತ್ತಲಿಗೆ ಕಾರಣವೇನು?

ಕೈಲಾಸವಾಸಿ, ಅರ್ಧ ನಾರೀಶ್ವರ, ಚರ್ಮಧಾರಿ ಶಿವನಿಗೆ ತೊಡಲು ಬಟ್ಟೆ ಕೊಟ್ಟವರು ಇವರು.
ಹೀಗೊಂದು ಪ್ರತೀತಿ ಶತಶತಮಾನಗಳಿಂದ ಕೇಳಿ ಬರುತ್ತಿದೆ.
ಆದರೆ, ದೇವರಿಗೇ ಬಟ್ಟೆ ತೊಡಿಸಿದ್ದವರಿಗೆ ಈಗ ತೊಡಲು ಬಟ್ಟೆಯೂ ಇಲ್ಲದಂತಾಗಿದೆ. ಆಧುನಿಕತೆಯ ದಾಳಿಯಿಂದ ಇವರ ಬದುಕೇ ಮೂರಾಬಟ್ಟೆಯಾಗುವ ಸ್ಥಿತಿ ತಲುಪಿದೆ.
ಇಂತಹ ದುಸ್ತರ ಜೀವನಕ್ಕೆ ಸಾಕ್ಷಿಯಾಗುತ್ತಿರುವುದು ನೇಕಾರ ಸಮುದಾಯ.
ನೇಕಾರರು ನೇಯ್ದರೆ ಮಾನ ಮುಚ್ಚಲು ತುಂಡು ಬಟ್ಟೆ ಸಿಗುತ್ತದೆ. ಅದಿಲ್ಲದಿದ್ದರೆ, ಊಹಿಸಲೂ ಸಾಧ್ಯವಿಲ್ಲ.
ತಮಗೆ ತುಂಡು ಬಟ್ಟೆ ಇದ್ದರೂ ಸಾಕು, ಲಕ್ಷಾಂತರ ಜನರ ಮೈತುಂಬಾ ಧರಿಸುವ ಬಟ್ಟೆ ನೇಯ್ದುಕೊಡುತ್ತಾ ಬಂದಿರುವ ಈ ಸಮುದಾಯ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವುದರಿಂದ ಪ್ರವರ್ಗ 2-ಎ ನಲ್ಲಿ ಗುರುತಿಸಲಾಗಿದೆ.
ನೇಕಾರ ಸಮುದಾಯ ಹುಟ್ಟಿಕೊಂಡ ಬಗ್ಗೆ ಒಂದು ಪ್ರತೀತಿ ಇದೆ. ಅದೆಂದರೆ, ದೇವರು ತನ್ನ ಜಿವ್ಹೆಯಿಂದ(ನಾಲಗೆ) ಒಂದು ಮಾನವ ರೂಪವನ್ನು ಸೃಷ್ಟಿಸಿದನು. ಇಡೀ ಮಾನವ ಸಂಕುಲದ ಮಾನ ಮುಚ್ಚಲು ನೀನು ಬಟ್ಟೆ ನೇಯುವಂತೆ ಈ ಮಾನವ ರೂಪಕ್ಕೆ ಆದೇಶ ನೀಡಿದನಂತೆ. ಅಂದಿನಿಂದ ನೇಕಾರಿಕೆ ಎಂಬ ವೃತ್ತಿ ಹುಟ್ಟಿಕೊಂಡಿತಂತೆ. ಈ ವೃತ್ತಿಯನ್ನು ಮುಂದುವರೆಸಿಕೊಂಡು ಬಂದಿರುವವರನ್ನು ನೇಕಾರರು ಎಂದು ಗುರುತಿಸಲಾಗಿದೆ.
ರಾಜ್ಯದಲ್ಲಿ ನೇಕಾರರಲ್ಲಿ ದೇವಾಂಗ, ಪದ್ಮಶಾಲಿ, ತೊಗಟವೀರ, ಪಟ್ಟಸಾಲೆ, ಕುರುಹಿನ ಶೆಟ್ಟಿ, ಸ್ವಕುಳ ಸಾಳಿ, ಸಾಳಿ, ಜಾಡ, ಹಠಗಾರ ಹೀಗೆ 26 ಉಪ ಪಂಗಡಗಳಿವೆ. ಈ ಎಲ್ಲಾ ಪಂಗಡಗಳು ಪ್ರತ್ಯೇಕವಾಗಿ ಗುರುತಿಸಿಕೊಂಡಿರುವುದೂ ನೇಕಾರ ಸಮುದಾಯ ಎಲ್ಲಾ ಕ್ಷೇತ್ರಗಳಲ್ಲಿ ಹಿಂದೆ ಬೀಳಲು ಕಾರಣ.
ಸಮುದಾಯಕ್ಕೆ ದೇವಾಂಗ ಜನಾಂಗ ಅಣ್ಣನ ಸ್ಥಾನದಲ್ಲಿ ನಿಲ್ಲುತ್ತದೆ. ದೇವರಿಗೆ ಅಂಗವಸ್ತ್ರವನ್ನು ನೀಡಿದ್ದರಿಂದ ದೇವಾಂಗರು ಎಂಬ ಹೆಸರು ಬಂದಿದೆ ಎಂಬ ಐತಿಹ್ಯ ಇದೆ.
ರಾಜ್ಯದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ನೇಕಾರ ಸಮುದಾಯದ ಕನಿಷ್ಟ ಒಂದಾದರೂ ಉಪಪಂಗಡ ಜನರು ವಾಸಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ನೇಕಾರರು ಹಳೆ ಮೈಸೂರು, ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಇದ್ದಾರಾದರೂ ಬಹಳ ಕಡಿಮೆ ಎಂದು ಹೇಳಬಹುದು. ಉತ್ತರ ಕರ್ನಾಟಕದ ಬಾಗಲಕೋಟೆ, ಚಿತ್ರದುರ್ಗ, ಬೆಳಗಾವಿ, ಬಿಜಾಪುರ, ಹುಬ್ಬಳ್ಳಿ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಈ ಸಮುದಾಯ ಕಂಡು ಬರುತ್ತದೆ.
ಹೀಗೆ ರಾಜ್ಯದೆಲ್ಲೆಡೆ ಹರಿದು ಹಂಚಿ ಹೋಗಿರುವ ನೇಕಾರರ ಸಂಖ್ಯೆ 40 ಲಕ್ಷ ಇರಬಹುದು ಎಂಬ ಅಂದಾಜಿದೆ. ಈ ಬಗ್ಗೆ ಇನ್ನೂ ನಿಖರ ಅಂಕಿಅಂಶ ಲಭ್ಯವಾಗಿಲ್ಲ. ಏಕೆಂದರೆ, ಪಂಗಡಗಳಾಗಿ ಗುರುತಿಸಿಕೊಂಡಿರುವುದರಿಂದ ಜಾತಿ ಆಧಾರದ ಲೆಕ್ಕ ಇನ್ನೂ ಸಿಕ್ಕಿಲ್ಲ.
'ಸಮಾಜಕ್ಕೆ ಬಟ್ಟೆ ಕೊಟ್ಟ ನೇಕಾರನ ಹೆಂಡತಿ ಬೆತ್ತಲು. ಅವನ ಬದುಕು ಕತ್ತಲು'.
ನೇಕಾರರ ಇಂದಿನ ಸ್ಥಿತಿಗತಿ ಹೇಳಲು ಈ ಮಾರ್ಮಿಕ ನುಡಿ ಸಾಕು. ರಾಜ್ಯದಲ್ಲಿ ಇತ್ತೀಚಿನ ದಿನಗಳವರೆಗೆ ಮನೆಗೊಂದು ಕೈಮಗ್ಗಗಳಿದ್ದವು. ಒಂದು ರೇಷ್ಮೆ ಸೀರೆ ನೇಯಬೇಕಾದರೆ ಈ ಕೈಮಗ್ಗ ನೇಕಾರರಿಗೆ ಹತ್ತಾರು ದಿನಗಳೇ ಹಿಡಿಯುತ್ತಿದ್ದವು. ಕಲಾತ್ಮಕತೆಯ ಸೀರೆಗಳನ್ನು ಸಿದ್ಧಪಡಿಸುವ ಮೂಲಕ ನೇಕಾರರು ರಾಜ್ಯದ ಕಲಾ ಸಂಪತ್ತನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದರು.
ಆದರೆ, ಅಭಿವೃದ್ಧಿ ನೆಪದಲ್ಲಿ ಜಾರಿಗೆ ಬಂದ ಉದಾರೀಕರಣ, ಜಾಗತೀಕರಣಗಳೆಂಬ ಪೆಡಂಭೂತಗಳು ಈ ಕೈಮಗ್ಗ ನೇಕಾರರ ಹಸನಾದ ಬದುಕನ್ನು ಬರಡಾಗಿಸಿದವು. ಈಗ ಕೈಮಗ್ಗಗಳು ನೂಲು ಇಲ್ಲದ ಚರಕಗಳಂತಾಗಿವೆ. ಸ್ಥಿತಿವಂತರು ಮಾತ್ರ ಕೈಮಗ್ಗಗಳ ಜಾಗದಲ್ಲಿ ವಿದ್ಯುತ್ ಮಗ್ಗಗಳು ಸ್ಥಾಪಿತಗೊಂಡಿವೆ.
ವಿದ್ಯುತ್ ಮಗ್ಗಗಳಿಗೆ ಬಂಡವಾಳ ಹಾಕಲು ಸಾಧ್ಯವಾಗದ ಲಕ್ಷಾಂತರ ಕುಟುಂಬಗಳು ಸ್ಥಿತಿವಂತರ ಮಗ್ಗಗಳಲ್ಲಿ ಬಟ್ಟೆ ನೇಯುವ ಕೂಲಿ ಮಾಡುತ್ತಿದ್ದಾರೆ. ಇನ್ನೂ ಹಲವು ಕುಟುಂಬಗಳು ಕುಲಕಸುಬನ್ನೇ ಬಿಟ್ಟು ಪರ್ಯಾಯ ವೃತ್ತಿಗಳತ್ತ ಸಾಗಿದ್ದಾರೆ. ಭೂಮಿ ಇದ್ದವರು ಕೃಷಿ ಅವಲಂಬಿಸಿದ್ದಾರೆ. ಆದರೆ, ವಿದ್ಯುತ್ ಅಭಾವದಿಂದಾಗಿ ವಿದ್ಯುತ್ ಮಗ್ಗಗಳೂ ನೇಯ್ಗೆ ಸದ್ದು ನಿಲ್ಲಿಸಿವೆ. ಇದರ ಜತೆಗೆ ಅತಿಯಾದ ರೇಷ್ಮೆ ಮೇಲಿನ ತೆರಿಗೆ, ದುಬಾರಿ ವಿದ್ಯುತ್ ದರ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸಲಾಗದೇ ವೃತ್ತಿಗೆ ತಿಲಾಂಜಲಿ ಹಾಕಿದ್ದಾರೆ.
ರಾಜ್ಯದೆಲ್ಲೆಡೆ ಸುತ್ತಾಡಿದರೆ, ಅಲ್ಲೊಂದು ಇಲ್ಲೊಂದು ಕೈಮಗ್ಗಗಳು ಸಿಗಬಹುದು. ಆದರೆ, ಹಠಕ್ಕೆ ಬಿದ್ದವರೆಂಬಂತೆ ಮೊಳಕಾಲ್ಮೂರು, ಸುರಪುರ ಮತ್ತು ಇಳಕಲ್್ನಲ್ಲಿ ನೇಕಾರರು ಇನ್ನೂ ಕೈಮಗ್ಗಗಳನ್ನು ಇಟ್ಟುಕೊಂಡು ತಮ್ಮ ವೃತ್ತಿಯನ್ನು ಮುಂದುವರೆಸಿದ್ದಾರೆ.
ಯಾವುದೇ ಒಂದು ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಉತ್ತಮವಾಗಿದ್ದರೆ ಮಾತ್ರ ಶೈಕ್ಷಣಿಕ ಪರಿಸ್ಥಿತಿಯೂ ಉತ್ತಮವಾಗಿರಲು ಸಾಧ್ಯ. ಆದರೆ, ನೇಕಾರರ ಸಮುದಾಯ ಈ ಕ್ಷೇತ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದೆ. ಇದರಿಂದ ಹೊರಬರಲು ಇನ್ನೂ ಸಾಧ್ಯವಾಗಿಲ್ಲ.
ಇದಕ್ಕೆ ಪ್ರಮುಖ ಕಾರಣ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದೊರೆಯದ ಪ್ರಾಧಾನ್ಯತೆ. ಮತ್ತೊಂದು ಪ್ರಮುಖ ಕಾರಣವೆಂದರೆ, ನೇಕಾರ ಸಮುದಾಯದ 26 ಕ್ಕೂ ಹೆಚ್ಚು ಉಪಪಂಗಡಗಳು ಒಗ್ಗಟ್ಟು ಪ್ರದರ್ಶಿಸದಿರುವುದು.
ಸರ್ಕಾರಗಳು ರಾಜ್ಯದಲ್ಲಿ ನೇಕಾರಿಕೆಗೆ ಕೃಷಿಯ ನಂತರದ ಸ್ಥಾನ ನೀಡುತ್ತಾ ಬಂದಿವೆ. ಆದರೆ, ಸರ್ಕಾರದ ಹತ್ತು ಹಲವು ಕಾರ್ಯಕ್ರಮಗಳು ನೇರವಾಗಿ ನೇಕಾರರಿಗೆ ತಲುಪುವ ಬದಲು ಮಾರ್ಗಮಧ್ಯದಲ್ಲೇ ಮಧ್ಯವರ್ತಿಗಳ ಕಬಂಧಬಾಹುಗಳಿಗೆ ಸಿಲುಕುತ್ತಿವೆ. ಹೀಗಾಗಿ ಸಮುದಾಯ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಿಂದ ವಂಚಿತವಾಗುತ್ತಿದೆ.
ಇನ್ನು ರಾಜಕೀಯ ಪ್ರಾತಿನಿಧ್ಯ ವಿಚಾರದಲ್ಲಿ ವೈಯಕ್ತಿಕ ವರ್ಚಸ್ಸಿನಲ್ಲಿ ಮುಂದೆ ಬಂದವರು ಮಾತ್ರ ರಾಜಕೀಯ ಕ್ಷೇತ್ರದಲ್ಲಿ ಬೆಳವಣಿಗೆ ಕಂಡಿದ್ದಾರೆ. ನಾಲ್ಕನೇ ಅತಿ ದೊಡ್ಡ ಸಮುದಾಯ ಎಂದು ಬಿಂಬಿತವಾಗಿರುವ ಈ ಸಮುದಾಯಕ್ಕೆ ರಾಜಕೀಯ ಪಕ್ಷಗಳು ನೀಡಿರುವ ಪ್ರಾತಿನಿಧ್ಯ ಹೇಳಿಕೊಳ್ಳುವಂತಿಲ್ಲ.
ಆದರೂ, ಕೆ.ಸಿ. ಕೊಂಡಯ್ಯ, ಉಮಾಶ್ರೀ, ಎಂ.ಡಿ. ಲಕ್ಷ್ಮೀನಾರಾಯಣ, ಮಲ್ಲಿಕಾರ್ಜುನ ಬನ್ನಿ, ಮಲ್ಲಿಕಾರ್ಜುನ ನಾಗಪ್ಪ, ಕುಂಬ್ಳೆ ಸುಂದರರಾವ್ ಸೇರಿದಂತೆ ಬೆರಳೆಣಿಕೆಯಷ್ಟು ಜನ ಮಾತ್ರ ರಾಜಕೀಯದಲ್ಲಿ ಹೆಸರು ಮಾಡುತ್ತಿದ್ದಾರೆ.
ಸಮಾಜದ ಮುಖ್ಯವಾಹಿನಿಗೆ ಸಮುದಾಯವನ್ನು ತರುವ ನಿಟ್ಟಿನಲ್ಲಿ ಕೆಲವು ನಾಯಕರು ಬದ್ಧತೆ ತೋರಿದ್ದು, ಇದಕ್ಕಾಗಿ ಎಲ್ಲಾ ಉಪಪಂಗಡಗಳನ್ನು ಒಂದೇ ಸೂರಿನಡಿ ತರುವ ಪ್ರಯತ್ನ ನಡೆಸಿದ್ದಾರೆ.
ರಾಜ್ಯದಲ್ಲಿ ಪ್ರಮುಖ ಸಮುದಾಯವಾದ ನೇಕಾರ ಮತ್ತು ಇತರೆ ಪಂಗಡಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ತೀರಾ ಹಿಂದುಳಿದಿರುವ ಈ ಸಮುದಾಯದ ಅಭಿವೃದ್ಧಿಗೆ ಸರ್ಕಾರಗಳು ಒತ್ತು ನೀಡಬೇಕಿದೆ. ಹರಿದು ಹಂಚಿ ಹೋಗಿರುವ ಸಮುದಾಯದ ಎಲ್ಲಾ ಪಂಗಡಗಳನ್ನು ಒಂದೇ ವೇದಿಕೆಯಡಿ ತಂದು ಅದರ ಶ್ರೇಯೋಭಿವೃದ್ಧಿಗೆ ಒಕ್ಕೂಟ ಮುನ್ನುಡಿ ಬರೆದಿದೆ - ಚಂದ್ರಕಾಂತ ಎನ್. ಭಂಡಾರೆ, ಉಪಾಧ್ಯಕ್ಷ, ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ.

ಕುಂಬಾರರೀಗ ಕುಲಕಸುಬು ನೆಚ್ಚಿಕೊಳ್ಳುವಂತಿಲ್ಲ

ಮನೆಯನ್ನು ಬೆಳಗುವ ದೀಪ, ಮಡಿಕೆ, ಗಡಿಗೆ, ಗುಡಾಣ... ಹೀಗೆ ಹತ್ತು ಹಲವಾರು ಬಗೆಯ ವಸ್ತುಗಳನ್ನು ನಾಗರಿಕತೆ ಬೆಳೆದ ದಿನದಿಂದಲೂ ತಯಾರಿಸುತ್ತಾ ಬಂದಿದ್ದಾರೆ.
ಹಸಿ ಮಣ್ಣಿನಲ್ಲೇ ಬೆರೆತು, ಹದ ಮಾಡಿ ಅದಕ್ಕೊಂದು ಮೂರ್ತರೂಪ ಕೊಡುತ್ತಾ ತಮ್ಮ ಜೀವನವನ್ನು ಹಸನುಗೊಳಿಸಲು ಹೋರಾಡುತ್ತಲೇ ಬಂದಿದ್ದಾರೆ. ಆದರೆ, ಹೋರಾಟಕ್ಕೆ ಇನ್ನೂ ಫುಲ್್ಸ್ಟಾಪ್ ಬಿದ್ದಿಲ್ಲ.
ಇಂತಹ ಹೋರಾಟ ನಡೆಸುತ್ತಿರುವುದು ಕುಂಬಾರ ಸಮುದಾಯ.
ಇವರ ಕುಲಕಸುಬು ಕುಂಬಾರಿಕೆ. ಅಂದರೆ, ಮಣ್ಣಿನಿಂದ ಪಾತ್ರೆಗಳನ್ನು ತಯಾರಿಸುವ ಕಾಯಕ. ಬ್ರಿಟಿಷರ ಕಾಲದವರೆಗೆ ಕೈತುಂಬಾ ಕೆಲಸ, ಕುಟುಂಬ ಸದಸ್ಯರ ಹೊಟ್ಟೆ ತುಂಬುವಷ್ಟು ಊಟ ಸಿಗುತ್ತಿತ್ತು. ತದ ನಂತರ ಆಧುನಿಕತೆ ಬೆಳೆದಂತೆಲ್ಲಾ ಮಣ್ಣಿನ ಮಡಿಕೆ ತಯಾರಿಸುವ ಈ ವೃತ್ತಿ ನೇಪಥ್ಯಕ್ಕೆ ಸರಿಯುತ್ತಾ ಬಂದಿದೆ.
ಮಡಿಕೆ ಇದ್ದ ಜಾಗದಲ್ಲಿ ಸ್ಟೀಲ್ ಪಾತ್ರೆಗಳು ಬಂದಿವೆ. ಮಣ್ಣಿನ ದೀಪಗಳ ಸಾಲನ್ನು ಗಾಜಿನ ದೀಪಗಳು ಆವರಿಸಿಕೊಂಡಿವೆ. ಗುಡಾಣ(ರೈತರು ಬೆಳೆದ ಉತ್ಪನ್ನಗಳನ್ನು ವರ್ಷಗಟ್ಟಲೇ ಶೇಖರಿಸಿಡುವ ದೊಡ್ಡದಾದ ಮಣ್ಣಿನ ಪಾತ್ರೆ)ಗಳನ್ನು ಪ್ಲಾಸ್ಟಿಕ್, ಫೈಬರ್್ನ ಡ್ರಮ್್ಗಳು ಇನ್ನಿಲ್ಲದಂತೆ ಮಾಡಿವೆ.
ಹೀಗೆ ಪಾತ್ರೆಗಳನ್ನು ತಯಾರಿಸುವ ಕೈಗಾರಿಕೆಗಳು ಕುಂಬಾರನ ಕೈಗೆ ಕೆಲಸ ಇಲ್ಲದಂತೆ ಮಾಡಿವೆ.
ರಾಜ್ಯದಲ್ಲಿ ಈ ಕುಂಬಾರ ಸಮುದಾಯಕ್ಕೆ ಸೇರಿದವರನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಕರೆಯಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಕುಲಾಲ, ಮೂಲ್ಯ ಎಂದು ಕರೆದರೆ, ಉತ್ತರ ಕನ್ನಡದಲ್ಲಿ ಗುನಗ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ.
ತುಮಕೂರಿನಲ್ಲಿ ಶೆಟ್ಟಿ, ಉತ್ತರ ಕರ್ನಾಟಕದಲ್ಲಿ ವೀರಶೈವ ಕುಂಬಾರ, ಹಳೇ ಮೈಸೂರು ಭಾಗದಲ್ಲಿ ಕುಂಬಾರ ಎನ್ನಲಾಗುತ್ತಿದೆ. ಇವರೆಲ್ಲರ ಮಾತೃಭಾಷೆ ಕನ್ನಡ. ಅದೇ ರೀತಿ ತೆಲುಗು ಕುಂಬಾರರು, ತಮಿಳು ಕುಂಬಾರರು ಎಂದು ಅವರಾಡುವ ಭಾಷೆಯ ಆಧಾರದಲ್ಲಿ ಹೆಸರಿಸಲಾಗಿದೆ.
ಹೀಗೆ ರಾಜ್ಯದಲ್ಲಿ ಕುಂಬಾರ ಸಮುದಾಯದ 14 ಕ್ಕೂ ಹೆಚ್ಚು ಉಪಜಾತಿಗಳಿವೆ.
ಈ ಸಮುದಾಯ ಪ್ರಮುಖವಾಗಿ ಎರಡು ದೈವಗಳನ್ನು ಆರಾಧಿಸುತ್ತದೆ. ಉತ್ತರ ಕರ್ನಾಟಕದಲ್ಲಿ ಇರುವ ವೀರಶೈವ ಕುಂಬಾರರು ಶಿವನನ್ನು ಪೂಜಿಸುತ್ತಾರೆ. ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲಿನ ಭಾಗದವರಿಗೆ ವಿಷ್ಣು ಆರಾಧ್ಯದೈವ. ಆದರೆ, ಹಳೆಯ ಮೈಸೂರು ಭಾಗದಲ್ಲಿ ವಿಷ್ಣು ಮತ್ತು ಶಿವನನ್ನೂ ಆರಾಧಿಸುತ್ತಾರೆ. ಮತ್ತೆ ಕೆಲವರು ಶಾಲಿವಾಹನನನ್ನು  ಭಕ್ತರಾಗಿದ್ದಾರೆ.
ಸಮುದಾಯಕ್ಕೆ ವಿಶಿಷ್ಟವಾದ ಜೀವನ ಶೈಲಿ ಇಲ್ಲದಿದ್ದರೂ ಮಹಿಳೆಯರ ಆಚಾರ-ವಿಚಾರ ಸ್ವಲ್ಪ ಭಿನ್ನ. ಒಂದು ಪಂಗಡದ ಮಹಿಳೆಯರು ಮೂಗುತಿ ಹಾಕುವುದಿಲ್ಲ. ಮತ್ತೊಂದು ಸಮುದಾಯದವರು ಧರಿಸುತ್ತಾರೆ. ಈ ಎರಡೂ ಸಮುದಾಯಗಳಿಗೂ ಪರಸ್ಪರ ಸಂಬಂಧ ಬೆಳೆಸುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಕೂಡಿಬರುತ್ತಿವೆ.
ಶ್ರೀಕೃಷ್ಣದೇವರಾಯನ ಕಾಲದಲ್ಲಿ ಪುರುಷನೊಬ್ಬ ತನ್ನ ಕುಟುಂಬದ ಸದಸ್ಯೆಗೆ ಮೂಗುತಿ ತರಲು ಮಾರುಕಟ್ಟೆಗೆ ಹೋದವನು ಮನೆಗೆ ವಾಪಾಸ್ ಬರಲೇ ಇಲ್ಲವಂತೆ. ಅಂದಿನಿಂದ ಇಂದಿನವರೆಗೆ ಈ ಸಮುದಾಯದ ಮಹಿಳೆಯರಿಗೆ ಮೂಗುತಿ ದೂರ. ತುಮಕೂರು ಭಾಗದಲ್ಲಿ ಈ ಸಮುದಾಯಕ್ಕೆ ಸೇರಿದ ಹಲವಾರು ಕುಟುಂಬಗಳಿವೆ.
ಇತರೆ ಮುಂದುವರೆದ ಜನಾಂದಗ ರೀತಿಯಲ್ಲಿ ಕುಂಬಾರ ಕುಟುಂಬಗಳು ಗುಂಪು ಗುಂಪಾಗಿ ವಾಸಿಸುತ್ತಿಲ್ಲ. ಊರಿಗೊಂದು ಕುಲಕಸುಬಿನ ಕುಟುಂಬ ಎಂಬ ರೀತಿಯಲ್ಲಿ ಒಂದು ಗ್ರಾಮಕ್ಕೆ ಒಂದು ಅಥವಾ ಎರಡು ಕುಟುಂಬಗಳು ಜೀವಿಸುತ್ತಿವೆ.
ಇವರ ಸಾಮಾಜಿಕ ಸ್ಥಿತಿಗತಿ ಅಷ್ಟಕಷ್ಟೆ. ತೀರಾ ಹಿಂದುಳಿದ ವರ್ಗಕ್ಕೆ ಸೇರಿರುವ ಸಮುದಾಯ ನಂಬಿಕೊಂಡದ್ದು ಕುಂಬಾರಿಕೆ ವೃತ್ತಿಯನ್ನು. ಆದರೆ, ದಿನ ಕಳೆದಂತೆ ವೃತ್ತಿ ಕಣ್ಮರೆಯಾಗುತ್ತಾ ಬಂದಿರುವುದರಿಂದ ಕೃಷಿ ಅಥವಾ ಕೂಲಿ ಮಾಡಿ ಹೊಟ್ಟೆ ಹೊರೆಯುವಂತಹ ಸ್ಥಿತಿ ಬಂದೊದಗಿದೆ. ರಾಜ್ಯದಲ್ಲಿ ಸುಮಾರು 16 ಲಕ್ಷ ಜನಸಂಖ್ಯೆ ಇರುವ ಈ ಸಮುದಾಯದ ಕೇವಲ 75 ಸಾವಿರದಿಂದ 1 ಲಕ್ಷದಷ್ಟು ಜನ ಮಾತ್ರ ವೃತ್ತಿಯನ್ನು ಮುಂದುವರೆಸಿದ್ದಾರೆ.
ಆಧುನಿಕತೆಯ ಭರಾಟೆ ಮಧ್ಯೆ ತಮ್ಮ ವೃತ್ತಿಯನ್ನು ಕೈಬಿಟ್ಟು ನಗರ ಪ್ರದೇಶಗಳಿಗೆ ಉದ್ಯೋಗ ಅರಸಿ ವಲಸೆ ಹೋದವರೇ ಹೆಚ್ಚು. ಇವರಲ್ಲಿ ಸ್ವಲ್ಪ ಸ್ಥಿತಿವಂತರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಅವರು ಕೈತುಂಬಾ ಸಂಬಳ ಬರುವಂತಹ ಉದ್ಯೋಗ ಗಿಟ್ಟಿಸುವಂತಾಗಿದೆ. ಉಳಿದಂತೆ ಬಹುತೇಕ ಕುಟುಂಬಗಳು ವಸ್ತುಶಃ ಬೀದಿಗೆ ಬಂದಿದ್ದು, ನಗರ ಪ್ರದೇಶಗಳಲ್ಲಿ ಸಿಕ್ಕಷ್ಟು ಕೂಲಿಗೆ ಅಥವಾ ವೇತನಕ್ಕೆ ದುಡಿಯುತ್ತಿದ್ದಾರೆ.
ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ ಉತ್ತಮವಾಗಿದ್ದರೆ ಸಮುದಾಯದ ಕೆಲವರಾದರೂ ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗುತ್ತಿತ್ತು. ಆದರೆ, ಈ ಮೂರೂ ಕ್ಷೇತ್ರಗಳಲ್ಲಿ ಹಿಂದೆ ಬಿದ್ದಿರುವ ಸಮುದಾಯದಿಂದ ರಾಜಕೀಯ ಪ್ರಭಾವ ಬೀರುವಂತಹ ಯಾವೊಬ್ಬ ಮುಖಂಡರೂ ಹುಟ್ಟಿಕೊಳ್ಳಲು ಸಾಧ್ಯವಾಗಿಲ್ಲ.
ಆದರೆ, ಇಡೀ ಸಮುದಾಯಕ್ಕೊಬ್ಬರೇ ರಾಜಕಾರಣಿ ಇದ್ದರು. ಅವರೆಂದರೆ, ಡಾ.ಲಕ್ಷ್ಮೀಸಾಗರ್. ಸಂಸತ್ಸದಸ್ಯರಾಗಿ, ಶಾಸಕರಾಗಿ ಕಾನೂನು ಸಚಿವರಾಗಿದ್ದರು. ಇವರನ್ನು ಹೊರತುಪಡಿಸಿ ರಾಜಕೀಯ ಪ್ರಾಶಸ್ತ್ಯ ಸಮುದಾಯಕ್ಕೆ ಸಿಕ್ಕಿಲ್ಲ.
ಕುಂಬಾರ ಸಮುದಾಯವನ್ನು ಮೀಸಲಾತಿ ವಿಚಾರದಲ್ಲಿ ಎರಡು ವಿಧದಲ್ಲಿ ವಿಂಗಡಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಕುಂಬಾರರನ್ನು ಪ್ರವರ್ಗ 3 ಬಿಯಲ್ಲಿ ಸೇರಿಸಿದ್ದರೆ, ಉಳಿದ ಪ್ರದೇಶಗಳ ಕುಂಬಾರರನ್ನು 2 ಎ ಗೆ ಸೇರ್ಪಡೆ ಮಾಡಲಾಗಿದೆ. ಆದರೆ, 2 ಎ ನಲ್ಲಿ 18 ಜಾತಿಗಳು ಬರುವ ಹಿನ್ನೆಲೆಯಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ಸಿಗುತ್ತಿಲ್ಲ ಎಂಬ ಕೊರಗು ಇದೆ.
ಕುಂಬಾರಿಕೆ ಎನ್ನುವುದು ಈಗ ಕೇವಲ ಕುಂಬಾರ ಸಮುದಾಯಕ್ಕೆ ಸೀಮಿತವಾಗಿಲ್ಲ. ಕಲೆ ಗೊತ್ತಿರುವ ಇತರೆ ಸಮುದಾಯದವರೂ ಮಡಿಕೆ, ದೀಪ ತಯಾರಿಕೆಯನ್ನು ಬಿಟ್ಟು ವ್ಯಾಪಾರ ದೃಷ್ಟಿಯಿಂದ ಅಲಂಕಾರಿಕಾ ವಸ್ತುಗಳನ್ನು ತಯಾರಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ.
ಹೀಗಾಗಿ ಸಾಂಪ್ರದಾಯಿಕ ಮಡಿಕೆಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಇದರ ಜತೆಗೆ ಮಡಿಕೆ ತಯಾರಿಸಲು ಅಗತ್ಯವಾದ ಜೇಡಿಮಣ್ಣು ಮತ್ತು ಕೆಂಪುಮಣ್ಣಿನ ಕೊರತೆ ಎದುರಾಗಿರುವುದೂ ಕುಂಬಾರರು ತಮ್ಮ ಕುಲಕಸುಬು ಕೈಬಿಡಲು ಕಾರಣವಾಗಿದೆ.
ಸಮುದಾಯದಲ್ಲಿ ಇರುವ ಅಲ್ಪ ಜನಸಂಖ್ಯೆಗೆ ನಾಲ್ಕೈದು ಸಂಘಟನೆಗಳು ಇವೆ. ಸಮುದಾಯದ ಏಳ್ಗೆಗಾಗಿ ಹುಟ್ಟಿಕೊಂಡಿದ್ದರೂ ಇವು ಪರಸ್ಪರ ಪೈಪೋಟಿಗೆ ಇಳಿದಿರುವುದು ಸಮುದಾಯದ ಹಿನ್ನಡೆಗೆ ಪ್ರಮುಖ ಕಾರಣವೂ ಆಗಿದೆ.
ರಾಜಕೀಯ ಪ್ರಾತಿನಿಧ್ಯ ಅಥವಾ ಈ ಕ್ಷೇತ್ರದಲ್ಲಿ ನಮ್ಮ ನಾಯಕರಿಲ್ಲದೇ ಸಮುದಾಯ ಬಹಳ ವರ್ಷಗಳಿಂದಲೂ ತುಳಿತಕ್ಕೆ ಒಳಗಾಗುತ್ತಲೇ ಬಂದಿದೆ. ಇದ್ದ ವೃತ್ತಿಯನ್ನೂ ಬಿಡುವಂತಾಗಿರುವ ಸಮುದಾಯದ ಲಕ್ಷಾಂತರ ಕುಟುಂಬಗಳಿಗೆ ಸೂಕ್ತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಪ್ರಾತಿನಿಧ್ಯ ನೀಡುವತ್ತ ಸರ್ಕಾರಗಳು ಗಮನಹರಿಸಬೇಕು - ಡಿ. ಚಂದಪ್ಪ ಮೂಲ್ಯ, ರಾಜ್ಯ ಕುಂಬಾರ ಸಮಾಜದ ಅಧ್ಯಕ್ಷ.
18 ಜಾತಿಗಳಿರುವ ಪ್ರವರ್ಗ 2 ಎ ನಲ್ಲಿ ಶೇ. 15 ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ, ಈ ಮೀಸಲಾತಿ ಅನುಪಾತ ಎಲ್ಲಾ ಜಾತಿಗಳಿಗೆ ಹಂಚಿಹೋಗುವುದರಿಂದ ಕುಂಬಾರರಿಗೆ ಸೂಕ್ತ ಮೀಸಲಾತಿ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಮುದಾಯಕ್ಕೆ ಕನಿಷ್ಟ ಶೇ. 4 ರಷ್ಟು ಒಳಮೀಸಲಾತಿ ನೀಡಬೇಕು -ನಟರಾಜ್, ಕುಂಬಾರರ ಮಹಾಸಂಘದ ಖಜಾಂಚಿ.

ಕಾಡುಗೊಲ್ಲರ ಬಗ್ಗೆ ಬೇಕಿದೆ ನಾಡಿನ ಕಾಳಜಿ

ಮಗು ಹೆತ್ತರೆ, ಸತ್ತರೆ ಎಲ್ಲರಿಗೂ ಸೂತಕ. ಆದರೆ, ಇವರಿಗೆ ಮದುವೆಯೂ ಸೂತಕ!
ಮಹಿಳೆ ಮಗುವನ್ನು ಹೆತ್ತರೆ ತಾಯಿ ಸಂತಸಪಡುವ ಬದಲು ಮಗುವಿನ ಜತೆಗೆ 21 ದಿನಗಳ ಕಾಲ ಊರ ಹೊರಗೆ ಏಕಾಂತ ಜೀವನ ಸಾಗಿಸಬೇಕು. ಅದೇ ರೀತಿ ಹೆಣ್ಣು ಮಕ್ಕಳು ಋತುಮತಿಯಾದರೆ 9 ದಿನಗಳ ಕಾಲ ಮಳೆಯಿರಲಿ, ಚಳಿಯಿರಲಿ, ಬಿಸಿಲಿರಲಿ ಸಣ್ಣ ಗುಡಿಸಿಲಿನಲ್ಲಿ 9 ದಿನಗಳ ಕಾಲ ಸಂಬಂಧಿಕರಿಂದ ದೂರ ಇರಬೇಕು.
ಊರಿನ ಪೂಜಾರಿಗಳು ಸೂತಕ ತೆಗೆಯುವ ಪೂಜೆ ಪುನಸ್ಕಾರಗಳನ್ನು ನೆರವೇರಿಸಿದ ನಂತರವಷ್ಟೇ ಈ ಮಹಿಳೆಯರು ಊರಿನೊಳಗೆ ಪ್ರವೇಶಿಸಬೇಕು. ಒಂದು ವೇಳೆ ಮನೆಯೊಳಗೇ ಮಗು ಜನಿಸಿದರೆ ಅದರ ಹೊಕ್ಕುಳ ಬಳ್ಳಿಯನ್ನು ಕತ್ತರಿಸುವುದಿಲ್ಲ. ಬದಲಿಗೆ ತರಾತುರಿಯಲ್ಲಿ ಊರ ಹೊರಗಿನ ನಿಗದಿತ ಪ್ರದೇಶದಲ್ಲಿ ಗುಡಿಸಲು ನಿರ್ಮಿಸಿ(ಗ್ರಾಮ್ಯ ಭಾಷೆಯಲ್ಲಿ ಗುಡ್ಲು ಎನ್ನಲಾಗುತ್ತದೆ) ಮಗು ಮತ್ತು ತಾಯಿ ಸಮೇತ ಅಲ್ಲಿಗೆ ಕರೆದೊಯ್ಯುತ್ತಾರೆ. ನಂತರ ಅಲ್ಲಿ ಬಳ್ಳಿಯನ್ನು ಕತ್ತರಿಸಲಾಗುತ್ತದೆ.
ಇನ್ನು ಮಹಿಳೆ ತಿಂಗಳಿಗೊಮ್ಮೆ ಮುಟ್ಟಾದರೆ ಅವರೂ ಮೂರುದಿನಗಳ ಕಾಲ ಊರ ಹೊರಗೆ ಇರಬೇಕು. ಈ ಸಂದರ್ಭದಲ್ಲಿ ಅವರು ಯಾವುದೇ ದೇವಾಲಯಗಳಿಗಾಗಲೀ ಅಥವಾ ಶುಭ ಸಮಾರಂಭಗಳಿಗಾಗಲೀ ಹೋಗುವುದು ನಿಷಿದ್ಧ.
ಇಂತಹ ಸಂಪ್ರದಾಯ ಇಲ್ಲಿಗೇ ಮುಗಿಯುವುದಿಲ್ಲ. ಮದುವೆಯೆಂದರೆ ಎಲ್ಲರ ಮನೆಯಲ್ಲಿ ಸಂತಸ, ಸಡಗರ ಇರುತ್ತದೆ. ಮಧುಮಗ ಮತ್ತು ಮಧುಮಗಳಿಗೆ ಗೃಹಸ್ಥಾಶ್ರಮಕ್ಕೆ ಹೋಗುವ ಆತುರತೆ ಇರುತ್ತದೆ. ಆದರೆ, ಈ ಸಮುದಾಯದಲ್ಲಿ ಇರುವ ಪದ್ಧತಿಯೇ ಬೇರೆ. ಊರ ಹೊರಗೆ ಇಡೀ ದಿನ ಕಾಲ ಕಳೆದ ನಂತರ ರಾತ್ರಿಯ ವೇಳೆಗೆ ಸೂತಕ ತೆಗೆದ ನಂತರವಷ್ಟೇ ಅವರು ಮನೆಯೊಳಗೆ ಹೋಗಬೇಕು.
ಇದನ್ನು ನಂಬಿಕೆ ಎಂದಾದರೂ ಭಾವಿಸಿ, ಮೂಢನಂಬಿಕೆ ಎಂದಾದರೂ ಭಾವಿಸಿ. ಇಂತಹ ಸಂಪ್ರದಾಯವನ್ನು ತಲೆತಲಾಂತರದಿಂದ ರೂಢಿಸಿಕೊಂಡು ಬಂದಿರುವ ಸಮುದಾಯವೇ ಕಾಡುಗೊಲ್ಲ.
ಅರಣ್ಯ ಪ್ರದೇಶದಲ್ಲಿ ದನಕರು ಮತ್ತು ಕುರಿ ಸಾಕಾಣಿಕೆಯನ್ನು ಮಾಡುತ್ತಾ ಬಂದಿದ್ದರಿಂದ ಇವರಿಗೆ ಕಾಡುಗೊಲ್ಲರು ಎಂದು ಕರೆಯಲಾಗುತ್ತಿದೆ. ಆದರೆ, ದಿನ ಕಳೆದಂತೆ ಅರಣ್ಯ ವಾಸ ಸ್ಥಾನದಿಂದ ಹೊರಬಂದ ಈ ಸಮುದಾಯ ಜನವಸತಿ ಪ್ರದೇಶದ ಸನಿಹಕ್ಕೆ ಬಂದು ಸೇರಿತು. ಆದರೂ ಈ ಜನವಸತಿ ಪ್ರದೇಶದೊಟ್ಟಿಗೆ ಬೆರೆಯಲಿಲ್ಲ. ಅಂದರೆ, ಗ್ರಾಮದ ಹೊರಗೆ ಹತ್ತಾರು ಮನೆಗಳು ಅಥವಾ ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ 'ಹಟ್ಟಿ' ಅಥವಾ ಗೊಲ್ಲರ ಹಟ್ಟಿ ಎಂದು ಕರೆಯಲಾಗುತ್ತದೆ.
ಈ ಹಟ್ಟಿಯ ಸುತ್ತ ಕಳ್ಳಿ ಬೇಲಿ ಹಾಕುವುದು ಸಮುದಾಯದ ವಿಶೇಷ.
ಇವರ ಮೂಲ ದೆಹಲಿ ಎಂದು ವಾದಿಸುವವರೂ ಇದ್ದಾರೆ. ಮುಸಲ್ಮಾನ ದೊರೆಗಳ ಕಾಟ ತಡೆಯಲಾರದೇ ಈ ಸಮುದಾಯ ದೆಹಲಿಯಿಂದ ಕರ್ನಾಟಕ ಸೇರಿದಂತೆ ಮತ್ತಿತರೆ ರಾಜ್ಯಗಳಿಗೆ ವಲಸೆ ಬಂದಿದ್ದಾರೆಂಬ ಪ್ರತೀತಿಯೂ ಇದೆ. ಆದರೆ, ಇದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳಿಲ್ಲ ಎನ್ನುತ್ತಾರೆ ಇತಿಹಾಸ ತಜ್ಞರು. ಏಕೆಂದರೆ, ಮುಸಲ್ಮಾನರ ಆಳ್ವಿಕೆ ಬರುವ ಮೊದಲೇ ಕಾಡುಗೊಲ್ಲರು ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಹೀಗಾಗಿ ಇವರ ಮೂಲಸ್ಥಾನ ಕರ್ನಾಟಕವೇ ಎಂಬುದನ್ನು ಹಲವು ಶಾಸನಗಳು, ವಚನಗಳು ಹೇಳುತ್ತವೆ.
ರಾಜ್ಯದಲ್ಲಿ ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಸಮುದಾಯದ ಜನ, ಕೂಡ್ಲಿಗಿ, ತರೀಕೆರೆ, ಕಡೂರು, ಜಗಳೂರು, ಕೋಲಾರ, ದಾವಣಗೆರೆ, ಬಳ್ಳಾರಿ, ಹಾವೇರಿ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲೂ ಕಂಡುಬರುತ್ತಾರೆ.
ನಾವು ಹಿಂದೂಧರ್ಮದ ಸಂಪ್ರದಾಯಕ್ಕೆ ಸೇರಿದವರಲ್ಲ ಎಂದು ಹೇಳಿಕೊಳ್ಳುವ ಸಮುದಾಯ ಬುಡಕಟ್ಟು ಸಮುದಾಯದ ಒಂದು ಕೊಂಡಿ ಎಂದು ಹೇಳಿಕೊಳ್ಳುತ್ತದೆ. ಇವರಿಗೆ ರಾಮ, ಕೃಷ್ಣ, ವೆಂಕಟೇಶ್ವರ ಹೀಗೆ ವಿವಿಧ ಹೆಸರಿನ ದೇವರುಗಳಿಲ್ಲ. ಆದರೆ, ಇವರಿಗೆ ಸಾಂಸ್ಕೃತಿಕ ವೀರರೇ ದೇವರು. ಜುಂಜಪ್ಪ, ಯತ್ತಪ್ಪ, ಚಿತ್ರದೇವರು ಮತ್ತು ಕಾಟಿಂ ದೇವರುಗಳೇ ಆರಾಧ್ಯ ದೈವಗಳು.
ರಾಜ್ಯದಲ್ಲಿ ಈ ಕಾಡುಗೊಲ್ಲರು 5 ಲಕ್ಷಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆದರೂ ಉಪಜಾತಿಗಳೇನೂ ಕಮ್ಮಿಯಿಲ್ಲ. 79 ಉಪಜಾತಿಗಳಿದ್ದು, ಪ್ರಮುಖವಾಗಿ ಮೂರ್ಕಟ್ಟೆ, ಕಟ್ಟೆಮನೆ, ತಾಳವಟ್ಟಿ ಕಟ್ಟೆಮನೆ, ಸನ್ನರು, ಕೋಣರ್ ಗೊಲ್ಲರು, ದ್ಯಾವರು ಗೊಲ್ಲರು, ಕಂಬೇರು, ಅಜ್ಜೇರು, ಪೋಲಿನವರು, ಕರಡಿ ಗೊಲ್ಲರು, ಕರಿಯೋಬನಹಳ್ಳಿ, ಚಿತ್ತಗೊಲ್ಲರು ಎಂಬ ಉಪಜಾತಿಗಳಿವೆ.
ಇವರ ಉಡುಪು ವಿಶಿಷ್ಟವಾದುದು. ಕೈಯಲ್ಲೊಂದು ಕೋಲು, ಹೆಗಲ ಮೇಲೆ ಕಂಬಳಿ ಹಾಕಿ ದನ, ಕುರಿಗಳನ್ನು ಮೇಯಿಸಲು ಹೋಗುವ ಇವರ ವೇಷಭೂಷಣದ ಬಗ್ಗೆ ಶ್ರೀಪಾದರು(ಕ್ರಿ.ಶ. 1406) ಕವಿತೆ ಮೂಲಕ ಚಿತ್ರಿಸಿರುವ ಬಗೆ ಇಲ್ಲಿದೆ:-
ಕೋಲುಕೈಯಲಿ ಜೋಲುಗಂಬಳಿ
ಹೆಗಲಮೇಲೆ ಕಲ್ಲಿಚೀಲ ಕೊಂಕಳಲ್ಲಿ
ಕಾಲ ಕಡಗವನಿಟ್ಟು ಕಾಡೊಳಿಹ ಪಶುಹಿಂಡ
ಲಾಲಿಸುವ ಬಾಲಕರ ಮೊಳದೊಳಗಿದ್ದೆನ್ನ
ಕಲ್ಲುಮಣಿ ಕವಡೆಯನು ಕಾಡೊಳಿಹ ಗುಲಗಂಜಿ
ಸಲ್ಲದೊಡವೆಯ ನೀನು ಸರ್ವಾಂಗಕೆ
ಅಲ್ಲಲ್ಲೆಸೆಯೆ ಧರಿಸಿ ನವಿಲುಗರಿಗಳ ಗೊಂಡೆ
ಅಲ್ಲಿ ಗೊಲ್ಲರ ಕೂಡ ಚೆಲ್ಲಾಟವಾಡುತಲಿ...
ಅದೇ ರೀತಿ ಜಾನಪದಲ್ಲಿ ಗೊಲ್ಲರ ಉಡುಗೆ ತೊಡುಗೆಗಳನ್ನು ಹೀಗೆ ಬಿಂಬಿಸಲಾಗಿದೆ:-
ಬೆಟ್ಟದಟ್ಟಿಯ ಪಟ್ಟಿ ಚಲ್ಲಣ
ತೊಟ್ಟ ಪದಕವು ಬಿಲ್ಲೆ ಸರಗಳು
ಕಟ್ಟಿಬಾಪುರೆ ಭುಜದ ಕೀರ್ತಿಯ
ಇಟ್ಟಿ ಮುದ್ರಿಕೆಯುಂಗರ
ಪಚ್ಛೆ ಗಡಗವ ಪವಳಸರವನು
ಹಚ್ಚಿನಾ ಕಾಲ್ಗಡಗ ಗೆಜ್ಜೆಯ
ಪೆಚ್ಚುತನದಲ್ಲಿ ಧರಿಸಿ ಮೆರೆದನು...
ಅನಾದಿ ಕಾಲದಿಂದಲೂ ಸಮುದಾಯದ ಪುರುಷರು ನಿಕ್ಕರ್ ಧರಿಸಿ ಹೆಗಲ ಮೇಲೆ ಕಂಬಳಿ ಹಾಕುತ್ತಿದ್ದರು. ಇದನ್ನು ಹೊರತುಪಡಿಸಿ ಯಾವುದೇ ಬಟ್ಟೆ ತೊಡುತ್ತಿರಲಿಲ್ಲ. ಅದೇ ರೀತಿ ಮಹಿಳೆ ವಿವಾಹ ಆದ ನಂತರ ಕುಪ್ಪಸ ಹಾಕುತ್ತಿರಲಿಲ್ಲ. ಆದರೆ, ಸಾಮಾಜಿಕ ಪ್ರಜ್ಞೆ ಬಂದಂತೆಲ್ಲಾ ಇವರಲ್ಲಿ ಸ್ವಲ್ಪ ಮಟ್ಟಿನ ನಾಗರಿಕತೆ ಬರತೊಡಗಿದೆ. ಪರಿಣಾಮ ಪುರುಷರು ಅಂಗಿ, ಪ್ಯಾಂಟ್ ಸೇರಿದಂತೆ ಮೈ ಮುಚ್ಚುವಂತಹ ಬಟ್ಟೆ ಧರಿಸಿದರೆ, ಮಹಿಳೆಯರು ಕುಪ್ಪಸ, ಸೀರೆ ಉಡುತ್ತಿದ್ದಾರೆ. ಆದರೆ, ಕೂಡ್ಲಿಗಿ ಮತ್ತು ಮೊಳಕಾಲ್ಮೂರು ತಾಲೂಕುಗಳಲ್ಲಿರುವ ಕಾಡುಗೊಲ್ಲರ
ಮಹಿಳೆಯರು ಇಂದಿಗೂ ಕುಪ್ಪಸ ತೊಡುವುದಿಲ್ಲ.
ಸಮುದಾಯದ ಮತ್ತೊಂದು ವೈಚಿತ್ರ್ಯವೆಂದರೆ, ಗಂಡ ಸತ್ತಾಗ ಮಹಿಳೆಯರು ತಾಳಿ ತೆಗೆಯುವುದಿಲ್ಲ, ಹೂವು ಮುಡಿಯುವುದನ್ನು ಬಿಡುವುದಿಲ್ಲ. ಈ ಮಹಿಳೆಯರನ್ನು ಎಂದಿಗೂ ವಿಧವೆಯರೆಂದು ಭಾವಿಸುವುದಿಲ್ಲ. ಇವರು ಎಲ್ಲಾ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.
ಇನ್ನು ಇವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿ ಇತರೆ ಸಮುದಾಯಕ್ಕಿಂತ ಕೆಳಮಟ್ಟದಲ್ಲಿದೆ. ಏಕೆಂದರೆ, ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ಸಮುದಾಯವನ್ನು ಸಮಾಜ ಓಲೈಸಿದ್ದಕ್ಕಿಂತ ಅಲಕ್ಷಿಸಿರುವುದೇ ಹೆಚ್ಚು. ಹೀಗಾಗಿ ಮುಖ್ಯವಾಹಿನಿಗೆ ಬರಲು ಸಮುದಾಯ ಹರಸಾಹಸಪಡುತ್ತಿದೆ.
ಪರಿಶಿಷ್ಟ ಪಂಗಡಕ್ಕಿಂತ ನಿಕೃಷ್ಠವಾಗಿರುವ ಸಮುದಾಯವನ್ನು ಇತರೆ ಹಿಂದುಳಿದ ವರ್ಗದಲ್ಲಿ ಮೊದಲ ವರ್ಗಕ್ಕೆ ಸೇರಿಸಲಾಗಿದೆ. ತಮ್ಮನ್ನೂ ಪರಿಶಿಷ್ಟ ವರ್ಗಕ್ಕೆ ಸೇರಿಸಿ ಅವರಂತೆಯೇ ಸರ್ಕಾರದ ಸೌಲಭ್ಯಗಳನ್ನು ನೀಡುವಂತೆ ಸಮುದಾಯದ ಬೆರಳೆಣಿಕೆಯಷ್ಟು ನಾಯಕರು ದಶಕಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ರಾಜಕೀಯ ಕ್ಷೇತ್ರದಲ್ಲೂ ಸಮುದಾಯದ ಏಳ್ಗೆ ಅಷ್ಟಕಷ್ಟೆ. ಹೊಳಲ್ಕೆರೆಯ ಸಿದ್ರಾಮಪ್ಪ ಒಮ್ಮೆ ಮತ್ತು ಉಮಾಪತಿ ಅವರು ಎರಡು ಬಾರಿ ಶಾಸಕರಾಗಿದ್ದನ್ನು ಹೊರತುಪಡಿಸಿದರೆ ಇನ್ನಾವುದೇ ನಾಯಕರು ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿಲ್ಲ.
ನಮ್ಮ ಸಮುದಾಯವನ್ನು ಕಡೆಗಣಿಸಲಾಗಿದೆ. ನೂರಕ್ಕೆ 10 ಜನರೂ ವಿದ್ಯಾವಂತರಿಲ್ಲ. ಹೀಗಾಗಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಅದಕ್ಕೆ ಸಿಗುವ ಎಲ್ಲಾ ಸೌಲಭ್ಯಗಳು ದೊರೆಯುವಂತಾಗಬೇಕು. ಈ ಮೂಲಕ ನಮ್ಮನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು- ವಿ. ನಾಗಪ್ಪ, ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ.

ರಾಜರ ಪ್ರೀತಿಗೆ ಪಾತ್ರರಾಗಿದ್ದ ಈಡಿಗರು

ರಾಜ ಮಹಾರಾಜರಿಗೆ ಬೇಟೆ ಎಷ್ಟು ಪ್ರಿಯವಾಗಿತ್ತೋ ಅಷ್ಟೇ ಪ್ರೀತಿಗೆ ಪಾತ್ರವಾಗಿದ್ದ ಸಮುದಾಯವಿದು.
ಇವರು ನೀಡುತ್ತಿದ್ದ ತರೇಹಾವಾರಿ ಪೇಯಗಳನ್ನು ಕುಡಿದು ರಾಜರು ಸಂತುಷ್ಟರಾಗುತ್ತಿದ್ದರು. ಇದಕ್ಕಾಗಿ ಕೈತುಂಬಾ ಭಕ್ಷೀಸನ್ನೂ ನೀಡುತ್ತಿದ್ದರು.
ರಾಜರ ಕಾಲದಲ್ಲಿ ದಟ್ಟಡವಿಗಳ ಮಧ್ಯೆ ಸೇಂದಿ ಇಳಿಸುವ ಕಾಯಕದ ಜತೆಗೆ ಗೆಡ್ಡೆಗೆಣಸುಗಳನ್ನು ತೆಗೆದು ಮಾರಾಟ ಮಾಡುತ್ತಾ ಹೊಟ್ಟೆ ಹೊರೆಯುತ್ತಿದ್ದರು.
ಕಾಲಕ್ರಮೇಣ ಈ ಸಮುದಾಯಕ್ಕೆ ಸೇಂದಿ ತೆಗೆಯುವುದೇ ಕುಲಕಸುಬಾಗಿ ಹೋಯ್ತು. ತಲೆತಲಾಂತರದಿಂದ ಈ ಕುಲಕಸುಬನ್ನು ನಂಬಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದ ಈ ಸಮುದಾಯದ ಹೆಸರು ಈಡಿಗ.
ಇವರು ಈಚಲು, ತೆಂಗು ಮತ್ತು ಭಗಿನಿಯಂತಹ ಮರಗಳಿಂದ ಇಳಿಸುತ್ತಿದ್ದ ಸೇಂದಿಯೇ ಕಡುಬಡವರ ಸ್ಕಾಚ್ ವಿಸ್ಕಿಯಾಗಿತ್ತು. ಪ್ರತಿದಿನ ಲಕ್ಷಾಂತರ ಲೀಟರ್ ಸೇಂದಿ ಇಳಿಸಿ ಅದನ್ನು ಮಾರಿ ಜೀವನ ಸಾಗಿಸುತ್ತಿದ್ದರು. ಈ ಸೇಂದಿ ಇಳಿಸುವ ಕಾಯಕ ಬಿಟ್ಟರೆ ಮತ್ತ್ಯಾವುದೇ ಉದ್ಯೋಗ ಇವರಿಗೆ ಗೊತ್ತಿರಲಿಲ್ಲ. ವ್ಯವಸಾಯ ಮಾಡುವ ಬಗ್ಗೆ ಚಿಂತಿಸುತ್ತಿದ್ದರಾದರೂ ಇವರಿಗೆ ಬೊಗಸೆಯಷ್ಟೂ ಜಮೀನಿರಲಿಲ್ಲ.
ರಾಜ ಮಹಾರಾಜರ ನಂತರ ಕಾಲ ಕ್ರಮೇಣ ಹಲವಾರು ಕಾಯ್ದೆಗಳು ಬಂದು ಇವರಿಗೆ ತೊಡಕಾಗಿ ಪರಿಣಮಿಸಿದವು. ಕಾಡಿನಲ್ಲಿ ವಾಸ ಮಾಡಲು ಹಲವು ನಿಬಂಧನೆಗಳು ಜಾರಿಯಾದವು. ಪರಿಣಾಮ ಈ ಸಮುದಾಯ ನಗರ ಮತ್ತು ಜನವಸತಿ ಪ್ರದೇಶಗಳಿಗೆ ವಲಸೆ ಬರಲೇಬೇಕಾಯಿತು.
ಹೀಗೆ ವಲಸೆ ಬಂದರೂ ತಮ್ಮ ವೃತ್ತಿಯನ್ನು ಮಾತ್ರ ಬಿಡಲಿಲ್ಲ. ಸರ್ಕಾರಗಳೇ ಅಧಿಕೃತವಾಗಿ ಸೇಂದಿ ಇಳಿಸುವ ಇವರ ಕಾಯಕಕ್ಕೆ ನೆರವಾಗಿದ್ದವು.
1990 ರ ದಶಕದವರೆಗೆ ಕೈಗೊಂದಿಷ್ಟು ಕೆಲಸ ಅಂದರೆ ಸೇಂದಿ ಇಳಿಸುವುದು ಮತ್ತು ಅದರಿಂದ ಬಂದ ಹಣದಿಂದ ಎರಡೊತ್ತಿನ ಆಹಾರ ಗಿಟ್ಟಿಸುತ್ತಿದ್ದರು. ಆದರೆ, 1992-93 ರ ವೇಳೆಗೆ ರಾಜ್ಯ ಸರ್ಕಾರ ಸೇಂದಿ ಇಳಿಸುವುದನ್ನು ನಿಷೇಧಿಸಿತು. ಮೊದಲೇ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿದಿದ್ದ ಈ ಸಮುದಾಯಕ್ಕೆ ನಿಷೇಧವೆಂಬುದು ಬರಸಿಡಿಲಿನಂತೆ ಬಡಿಯಿತು.
ಅಷ್ಟರ ವೇಳೆಗಾಗಲೇ ಸಮುದಾಯದ ಬೆರಳೆಣಿಕೆಯಷ್ಟು ಮಂದಿ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದುವರೆದಿದ್ದರು. ಹೀಗಾಗಿ ಸೇಂದಿ ಇಳಿಸುವುದನ್ನು ನಿಷೇಧಿಸಿದರೂ ಇಂತಹ ಪ್ರಭಾವಿಗಳು ಸಾರಾಯಿ ಗುತ್ತಿಗೆ ಮತ್ತು ಮಾರಾಟದಲ್ಲಿ ತೊಡಗಿ ತಮ್ಮ ಜೀವನವನ್ನು ಹಸನುಗೊಳಿಸಿಕೊಂಡರು. ಆದರೆ, ಲಕ್ಷಾಂತರ ಮಂದಿ ಬೀದಿಗೆ ಬಿದ್ದರು.
ಬೆಂಗಳೂರು ಗ್ರಾಮಾಂತರ, ಉಡುಪಿ ಸೇರಿದಂತೆ ಕೆಲವೇ ಕೆಲವು ಜಿಲ್ಲೆಗಳಲ್ಲಿ ತೆಂಗಿಗೆ ನುಸಿರೋಗ ಬಂದ ಕಾರಣ ಅಲ್ಲಿ ನೀರಾ ಇಳಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ತಮ್ಮ ತೋಟಗಳಲ್ಲಿ ರೈತರೇ ಹೆಚ್ಚಾಗಿ ನೀರಾ ಇಳಿಸಿ ಮಾರಾಟ ಮಾಡುತ್ತಿರುವುದರಿಂದ ಈಡಿಗ ಸಮುದಾಯಕ್ಕೆ ಇಲ್ಲಿ ಅವಕಾಶವೇ ಇಲ್ಲದಂತಾಗಿದೆ.
ಹೀಗಾಗಿ ಅವರ ಎದುರು ಇದ್ದದ್ದು ಒಂದೇ ಮಾರ್ಗ. ಅದೆಂದರೆ, ಕೂಲಿ ಮಾಡಿ ಕುಟುಂಬ ನಿಭಾಯಿಸಿಕೊಳ್ಳುವುದು. ಅಂದಿನಿಂದ ಇಂದಿನವರೆಗೆ ಸಮುದಾಯದ ಶೇ. 80 ಕ್ಕೂ ಅಧಿಕ ಜನ ಕೂಲಿ- ನಾಲಿ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಕೆಲವರು ಕೃಷಿಯತ್ತ ವಾಲಿದ್ದಾರಾದರೂ ಅವರಿಗೆ ಅಗತ್ಯ ಇರುವ ಜಮೀನು ಇಲ್ಲದಂತಾಗಿದೆ.
ಸೇಂದಿ ನಿಷೇಧ ಮಾಡಿ ದಶಕಗಳೇ ಕಳೆದರೂ ಸರ್ಕಾರ ಮಾತ್ರ ಈ ಸಮುದಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಗೋಜಿಗೆ ಹೋಗಿಲ್ಲ.
ಈಡಿಗ ಜಾತಿಯ ಐತಿಹಾಸಿಕ ಹಿನ್ನೆಲೆ ಕೌತುಕಮಯ. ಪುರಾಣಗಳ ಪ್ರಕಾರ ಈಡಿಗರು ಗೌಡ ಸಮುದಾಯಕ್ಕೆ ಸೇರಿದವರು. ರಾಮಾಯಣ, ಮಹಾಭಾರತ, ಸ್ಕಂದಪುರಾಣ, ಶಿವಪುರಾಣ ಸೇರಿದಂತೆ ಹಲವು ಪುರಾಣಗಳಲ್ಲಿ ಈ ಸಮುದಾಯದ ಉಲ್ಲೇಖವಿದೆ. ಸಂಶೋಧನೆಯೊಂದು ಹೇಳುವ ಪ್ರಕಾರ ಆದಿಶಂಕರಾಚಾರ್ಯ ಮುಂತಾದವರ ಕಾಲದಲ್ಲಿನ ಇತಿಹಾಸದಲ್ಲಿ ಈಡಿಗರು ಗೌಡ ವಂಶಸ್ಥಕ್ಕೆ ಸೇರಿದವರು ಎಂದು ಹೇಳಲಾಗಿದೆ. ಹೀಗಾಗಿ ಇದು ಅತ್ಯಂತ ಪ್ರಾಚೀನ ಸಮುದಾಯವೂ ಹೌದು.
ಈ ಸಮುದಾಯದವನ್ನು ಕರ್ನಾಟಕ ಸೇರಿದಂತೆ ದೇಶವಿದೇಶಗಳಲ್ಲಿ ಬೇರೆಬೇರೆ ಹೆಸರಿನಲ್ಲಿ ಕರೆಯಲಾಗುತ್ತಿದೆ. ಹಿಂದೂ ಧರ್ಮಕ್ಕೆ ಸೇರಿದ ಈ ಸಮುದಾಯ ಭಾರತದಲ್ಲಿ ಹೆಚ್ಚಾಗಿ ಕಂಡುಬರುವುದು ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ. ಉಳಿದ ರಾಜ್ಯಗಳಲ್ಲಿ ಇದ್ದಾರಾದರೂ ಸಂಖ್ಯೆ ಗೌಣವೆನಿಸಿದೆ. ಆಂಧ್ರದಲ್ಲಿ ಈ ಸಮುದಾಯವನ್ನು ಗೌಡ್, ಇಳಿಗರ್, ಈಡಿಗರ್ ಎಂದು, ತಮಿಳುನಾಡಿನಲ್ಲಿ ನಾಡಾರ್, ದೀವರ್ ಹಾಗೂ ಕರ್ನಾಟಕದಲ್ಲಿ ಈಡಿಗ, ಬಿಲ್ಲವ, ಇಳಿಗ, ಕುಮಾರಪೈಕ, ನಾಡಾರ್, ಹಳೆಪೈಕರು, ಈಳಿಗ, ಬಿಲ್ಲವರು, ದೇವರ್, ದೀವರ್, ಗಮಲ್ಲಾ, ಕಲಾಲ, ಬಂಢಾರಿ, ಬೆಲ್ಚಾಡ, ತಿಯಾನ್, ದಿಯಾನ್, ಎಝವ, ನಾಮಧಾರಿ, ಇಲ್ಲವನ್, ನಾಯಕ್, ದೀವರು ಎಂಬ ಪ್ರಮುಖ ಉಪಜಾತಿಗಳಿವೆ.
ಹೀಗೆ ಒಟ್ಟು ಕರ್ನಾಟಕದಲ್ಲಿ ಸಮುದಾಯದ 26 ಕ್ಕೂ ಹೆಚ್ಚು ಉಪಜಾತಿಗಳಿವೆ. ಇವರ ಸಂಖ್ಯೆ ಸುಮಾರು 40 ಲಕ್ಷ ಮೀರುತ್ತದೆ.
ರಾಜ್ಯದಲ್ಲಿ ಈ ಸಮುದಾಯ ಹೆಚ್ಚಾಗಿ ಕಂಡುಬರುವುದು ಶಿವಮೊಗ್ಗ, ಹಳೆಯ ಮೈಸೂರು ಭಾಗದಲ್ಲಿ. ನಂತರದ ಸ್ಥಾನದಲ್ಲಿ ಮಂಗಳೂರು ಮತ್ತು ಉಡುಪಿಯಲ್ಲಿ ಬಿಲ್ಲವ ಹೆಸರಿನಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಯಕ್ ಹೆಸರಿನಲ್ಲಿ ಕರೆಯಲಾಗುತ್ತಿದೆ. ಇದಲ್ಲದೇ ಸಮುದಾಯವನ್ನು ಆರ್ಯ ಈಡಿಗ ಎಂದೂ ಕರೆಯಲಾಗುವುದು.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಇನ್ನೂ ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ಹರಸಾಹಸ ಪಡುತ್ತಿದ್ದರೂ, ರಾಜಕೀಯವಾಗಿ ಸ್ವಲ್ಪ ಮಟ್ಟಿಗೆ ಪ್ರಗತಿ ಸಾಧಿಸಿದ ಹಿಂದುಳಿದ ವರ್ಗದ ಜಾತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ವರನಟ, ಕನ್ನಡದ ಕಣ್ಮಣಿ ಡಾ.ರಾಜ್್ಕುಮಾರ್ ಮತ್ತು ಅವರ ಕುಟುಂಬದ ಬಹುತೇಕ ಸದಸ್ಯರು ಚಲನಚಿತ್ರಗಳ ಮೂಲಕ ಸಮುದಾಯವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ್ದರೆ, ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಜನಾರ್ದನ ಪೂಜಾರಿ, ಆರ್.ಎಲ್. ಜಾಲಪ್ಪ ಮತ್ತು ಅವರ ಪುತ್ರ ನರಸಿಂಹಸ್ವಾಮಿ, ವಿನಯಕುಮಾರ್ ಸೊರಕೆ ಸೇರಿದಂತೆ ಹಲವರು ತಮ್ಮ ಮತ್ತು ತಮ್ಮ ಸಮುದಾಯದ ನೆರವಿನಿಂದ ರಾಜಕೀಯದಲ್ಲಿ ಹೆಸರು ಮಾಡಿದ್ದಾರೆ. ಪ್ರಸ್ತುತ ವಿಧಾನಸಭೆಯಲ್ಲಿ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ಶಾಸಕರಾಗಿದ್ದಾರೆ.
ಇಷ್ಟೇ ಅಲ್ಲದೇ ನೆಟ್ಟಕಲ್ಲಪ್ಪ, ಎಚ್.ಜಿ. ರಾಮುಲು, ಕೆ.ಎನ್. ಗುರುಸ್ವಾಮಿ, ಟಿ.ವಿ.ವೆಂಕಟಸ್ವಾಮಿ, ಗಾಡಿ ಗಣಪತಿಯಪ್ಪ, ಎಚ್.ಆರ್. ಗವಿಯಪ್ಪ, ನಿಡಘಟ್ಟ ಎ.ಅಣ್ಣೇಗೌಡ, ದಾಮೋದರ ಆರ್.ಸುವರ್ಣ, ತಿಮ್ಮೇಗೌಡ, ಜೆ.ಪಿ. ನಾರಾಯಣಸ್ವಾಮಿ, ದಾಸಪ್ಪ, ಓಬಯ್ಯ ಸೇರಿದಂತೆ ಹತ್ತಾರು ಮಂದಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಾಗಿದ್ದಾರೆ.
ನಮ್ಮ ಜನಾಂಗವನ್ನು ರಾಜಕೀಯ ಮತ್ತು ಸಾಮಾಜಿಕವಾಗಿ ಕಡೆಗಣಿಸಲಾಗುತ್ತಿದೆ. ರಾಜ್ಯದ ನಾಲ್ಕನೇ ಅತಿ ದೊಡ್ಡ ಜಾತಿಯಾಗಿದ್ದರೂ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಾಮಾಜಿಕವಾಗಿ ಹಿಂದುಳಿದಿರುವ ಈ ವರ್ಗಕ್ಕೆ ರಾಜಕೀಯ ಕ್ಷೇತ್ರದಲ್ಲಿ ಆದ್ಯತೆ ನೀಡುವ ಮೂಲಕ ಅಭಿವೃದ್ಧಿಪಥದತ್ತ ಸಾಗಲು ಎಲ್ಲಾ ರಾಜಕೀಯ ಪಕ್ಷಗಳು ಆಸಕ್ತಿ ವಹಿಸಬೇಕಾಗಿದೆ- ಈ. ರಾಮಕೃಷ್ಣಯ್ಯ, ಅಧ್ಯಕ್ಷರು, ಅಖಿಲ ಕರ್ನಾಟಕ ಆರ್ಯ ಈಡಿಗರ ಕ್ಷೇಮಾಭಿವೃದ್ಧಿ ಸಂಘ.

ಲಂಬಾಣಿ ಬದುಕಲ್ಲಿ ಮೂಡಬೇಕಿರುವ ಚಿತ್ತಾರ

ಲಂಬಾಣಿ ಅಥವಾ ಬಂಜಾರ. ಈ ಹೆಸರು ಕೇಳಿದಾಕ್ಷಣ ಚಿತ್ತಾರದ ಉಡುಗೆಗಳನ್ನು ಧರಿಸಿದ ಮಹಿಳೆಯರ ನೆನಪಾಗುತ್ತದೆ. ಇವರು ಬಡವರಾದರೂ ಉಡುಗೆಗಳಲ್ಲಿ ಮಾತ್ರ ಅವರ ಶ್ರೀಮಂತ ಕಲೆ ಮೈದಾಳಿರುತ್ತದೆ.
ಅಂದ ಹಾಗೆ ಇಂತಹ ಶ್ರೀಮಂತ ಕಲೆಯನ್ನು ಹೊತ್ತ ಲಂಬಾಣಿ ಅಥವಾ ಬಂಜಾರ ಸಮುದಾಯ ನಿಜಕ್ಕೂ ಆರ್ಥಿಕ ಮತ್ತು ಸಾಮಾಜಿಕವಾಗಿ ಶ್ರೀಮಂತವಾಗಿದೆಯೇ? ಈ ಪ್ರಶ್ನೆಗೆ ಉತ್ತರ ಹುಡುಕಲು ಹೋದರೆ ನಮಗೆ ಸಿಗುವುದು ಇಲ್ಲ ಎಂಬ ಉತ್ತರ.
ಅಷ್ಟಕ್ಕೂ ರಾಜ್ಯದಲ್ಲಿರುವ ಸುಮಾರು 25 ಲಕ್ಷದಷ್ಟು ಜನಸಂಖ್ಯೆಯ ಈ ಸಮುದಾಯ ಕರ್ನಾಟಕದ ಮೂಲದ್ದಲ್ಲ. ಶತಮಾನಗಳ ಹಿಂದೆ ರಾಜಸ್ಥಾನದಿಂದ ವಲಸೆ ಬಂದವರು. ಹೀಗಾಗಿ ಇವರು ನಮ್ಮ ರಾಜ್ಯದ ಶಾಶ್ವತ ಅತಿಥಿಗಳು.
ಇವರ ಕುಲಕಸುಬು ಉಪ್ಪು, ಆಹಾರ ಪದಾರ್ಥಗಳನ್ನು ಎತ್ತಿನ ಗಾಡಿ, ಒಂಟೆ ಮೇಲೆ ಹೇರಿಕೊಂಡು ರಾಜ್ಯದಿಂದ ರಾಜ್ಯಕ್ಕೆ ಸುತ್ತಾಡಿ ಮಾರಾಟ ಮಾಡುವುದು. ಹೀಗೆ ಮಾರಾಟ ಮಾಡುತ್ತಾ ರಾಜಸ್ಥಾನ ಮೂಲವನ್ನೇ ಬಿಟ್ಟು ನಮ್ಮ ರಾಜ್ಯವೂ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ನೆಲೆಸಿದ್ದಾರೆ.
ಈ ಸಮುದಾಯವನ್ನು ವಿವಿಧ ರಾಜ್ಯಗಳಲ್ಲಿ ಲುವಣ, ಲುವಾಡಿಯಾ, ಲುಂಬಾಡಿಯಾ, ಬಂಜೋರಿ, ಬಂಜೂರಿ, ಬಂಜಾರಿ, ಪಿಂಡಾರಿ, ಬಂಗಾಲ, ಲಂಬಾಣಿ, ಲಂಬಾರ, ಲವಾಣಿ, ಲಭಾಣಿಮುಖ ಎಂದು ಕರೆಯಲಾಗುತ್ತಿದೆ. ನಮ್ಮಲ್ಲಿ ಲಂಬಾಣಿ ಮತ್ತು ಬಂಜಾರವೆಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಇದರಲ್ಲೇ ರಾಥೋಡ್, ಭುಖ್ಯಾ, ಚೌಹಾಣ್, ಅಮ್ಗೋಟ್, ಪವಾರ್, ಜಾಧವ್ ಸೇರಿದಂತೆ 70 ಕ್ಕೂ ಹೆಚ್ಚು ಉಪಜಾತಿಗಳನ್ನು ಕಾಣುತ್ತೇವೆ. ಪ್ರಮುಖವಾಗಿ ಗುಲ್ಬರ್ಗಾ, ದಾವಣಗೆರೆ, ಚಿತ್ರದುರ್ಗ, ಬೆಳಗಾವಿ, ಧಾರವಾಡ, ಗದಗ, ರಾಯಚೂರು ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸುಮಾರು 3 ಸಾವಿರಕ್ಕೂ ಅಧಿಕ ತಾಂಡಾಗಳಲ್ಲಿ ನೆಲೆಸಿದ್ದಾರೆ.
ಬದುಕು ಕಿತ್ತುಕೊಂಡ ಬ್ರಿಟಿಷರು
ಇವರ ವ್ಯಾಪಾರವನ್ನೇ ಬ್ರಿಟಿಷರು ಕಿತ್ತುಕೊಂಡರು. ಏಕೆಂದರೆ, ಅವರದು ವ್ಯಾಪಾರ ಮನೋಭಾವವಾಗಿದ್ದು, ತಮ್ಮ ವ್ಯಾಪಾರಕ್ಕೆ ಅಡ್ಡಿ ಆಗುತ್ತಿದ್ದಾರೆ ಎಂಬ ಕಾರಣಕ್ಕೆ. ನಂತರ ಇವರ ಬದುಕು ಮೂರಾಬಟ್ಟೆಯಾಯ್ತು. ಹೀಗಾಗಿ ಮಹಿಳೆಯರು ಮಾಡಿಕೊಂಡು ಬರುತ್ತಿದ್ದ ಕುಸುರಿ ಕೆಲಸದ ಮೇಲೆಯೇ ಇವರ ಕುಟುಂಬ ನಿರ್ವಹಣೆ. ಹೀಗಾಗಿ ಬ್ರಿಟಿಷರು ದೇಶ ಬಿಟ್ಟು ಹೋಗುವವರೆಗೆ ಬಂಜಾರ ಸಮುದಾಯ ಸಂಕಷ್ಟಕ್ಕೆ ಎದುರಾಗಿತ್ತು, ನಂತರ ಮತ್ತೆ ಆಹಾರ ಪದಾರ್ಥಗಳ ಮಾರಾಟದಲ್ಲಿ ತೊಡಗಿತಾದರೂ ಅಷ್ಟರ ವೇಳೆಗೆ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಇವರಿಗೆ ಹೆಚ್ಚಿನ ಆದಾಯ ಬರದಂತಾಯಿತು.
ಪಾಶ್ಚಿಮಾತ್ಯ ಉಡುಗೆ
ಲಂಬಾಣಿ ಮಹಿಳೆಯರು ಧರಿಸುವ ಫೆಟಿಯಾ ಎಂಬ ಹೆಸರಿನ ಗಾಗ್ರಾ ಮತ್ತು ಕಂಚಾಲಿ ಹೆಸರಿನ ದಾವಣಿ ಎಲ್ಲರ ಕಣ್ಮನ ಸೆಳೆಯುತ್ತದೆ. ಈ ಧಿರಿಸು ಪಾಶ್ಚಿಮಾತ್ಯರ ಬಳುವಳಿ ಎಂದೇ ಹೇಳಲಾಗುತ್ತಿದೆ. ಅಲ್ಲಿನ ವಿನ್ಯಾಸ, ಕುಸುರಿ, ಗಾಜಿನ ಚಿತ್ತಾರಗಳು, ಪಾಟ್ಲಿ ಎಂಬ ರಟ್ಟೆ ಗಾತ್ರದ ಬಳೆಗಳು, ಅಂಗೈ ಅಗಲದ ಕಿವಿಯ ರಿಂಗುಗಳು ಹೀಗೆ ಹತ್ತು ಹಲವು ಬಗೆಯ ಸದಭಿರುಚಿಯ ವಿನ್ಯಾಸಗಳು ಉಡುಗೆಗಳಲ್ಲಿ ಕಾಣಸಿಗುತ್ತವೆ.
ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ
ಈ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕವಾಗಿ ಅಷ್ಟೇನೂ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿಲ್ಲ. ಇಂದಿಗೂ ಸಮುದಾಯ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿದೆ. ಕುಲಕಸುಬನ್ನೇ ಬಿಟ್ಟಿರುವ ಸಮುದಾಯ ಬೆಟ್ಟ ಗುಡ್ಡಗಳಿಂದ ಸೌದೆ ತಂದು ಮಾರಾಟದಲ್ಲಿ ತೊಡಗಿದೆ. ಸಮುದಾಯದ ಕೆಲವು ಕುಟುಂಬಗಳು ಕಳ್ಳಭಟ್ಟಿ ಕಾಯಿಸಿ ಮಾರಾಟ ಮಾಡುವ ಕುಖ್ಯಾತಿಯನ್ನೂ ಪಡೆದಿವೆ. ಈಗಲೂ ಕೆಲವು ಪ್ರದೇಶಗಳಲ್ಲಿ ಈ ಕೆಟ್ಟ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿವೆ. ಶಿಕ್ಷಣದಿಂದ ದೂರ ಉಳಿದಿದ್ದ ಸಮುದಾಯದ ಇತ್ತೀಚಿನ ಯುವಕರು ಉನ್ನತ ವ್ಯಾಸಂಗ ಮಾಡಿ ಉತ್ತಮ ಹುದ್ದೆಗಳನ್ನೂ ಪಡೆಯುತ್ತಿದ್ದಾರೆ.
ಖನಿರಾಂ, ರೂಪ್ಲಾನಾಯಕ್್ರಂತಹ ಐಎಎಸ್ ಅಧಿಕಾರಿಗಳೂ ಈ ಸಮುದಾಯಕ್ಕೆ ಸೇರಿದವರು. ಇವರ ಜತೆಗೆ ಕೆಲವು ಕೆಎಎಸ್ ಅಧಿಕಾರಿಗಳೂ ಇದ್ದಾರೆ.
ರಾಜಕೀಯವಾಗಿ ಹೇಳುವುದಾದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಸಮುದಾಯ ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದರು. ಇವರಲ್ಲಿ 7 ಮಂದಿ ಗೆಲುವು ಸಾಧಿಸಿ ಶಾಸಕರಾಗಿದ್ದಾರೆ.
ಸಮಾಜದಲ್ಲಿ ತೀರಾ ತುಳಿತಕ್ಕೆ ಒಳಗಾಗಿದ್ದ ಈ ಸಮುದಾಯ ಇತ್ತೀಚಿನ ವರ್ಷಗಳಲ್ಲಿ ಇತರೆ ಸಮುದಾಯಗಳಂತೆ ಮುಂದುವರೆಯಲು ಪ್ರಯತ್ನಿಸುತ್ತಿದೆ. ಆದರೆ, ಸರ್ಕಾರಗಳು ಸಮುದಾಯದ ಶ್ರೇಯೋಭಿವೃದ್ಧಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಸೂಕ್ತ ರೀತಿಯಲ್ಲಿ ಕಾರ್ಯರೂಪಕ್ಕೆ ತಂದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ - ದ್ಯಾಮಾನಾಯಕ್ ಈಶಪ್ಪ ಚೌಹಾಣ್, ಕರ್ನಾಟಕ ಬಂಜಾರ ಸೇವಾಸಂಘದ ಗೌರವಾಧ್ಯಕ್ಷ.

ಉಪ್ಪಾರರು: ಪುರಾಣ, ಇತಿಹಾಸ, ಪ್ರಸ್ತುತ

ಸ್ತಿನಾವತಿ ಮತ್ತು ಅಯೋಧ್ಯೆ, ಇವೆರಡೂ ಕ್ಷತ್ರಿಯರ ಮೂಲಗಳು ಹಸ್ತಿನಾವತಿಯಲ್ಲಿ ಚಂದ್ರವಂಶವಾದರೆ, ಆಯೋಧ್ಯೆಯಲ್ಲಿ ಸೂರ್ಯವಂಶ ಹುಟ್ಟಿಕೊಂಡಿತ್ತು.
ಚಂದ್ರವಂಶದಲ್ಲಿ ಹಸ್ತಿ, ವೃಕ್ಷರಾಜ, ಭೀಮಸೇನ, ಪ್ರತೀಪ, ಶಂತನು, ಪಾಂಡವರು, ಕೌರವರು ಹುಟ್ಟಿಕೊಳ್ಳುತ್ತಾರೆ.
ಅಯೋಧ್ಯೆಯಲ್ಲಿ ಸೂರ್ಯವಂಶ ಹುಟ್ಟಿಕೊಳ್ಳುತ್ತದೆ. ಈ ವಂಶದವರಾಗಿ ಸಗರ ಚಕ್ರವರ್ತಿ, ಪಂಚಜನ, ಅಂಶುವಂತ, ದಿಲೀಪ ಚಕ್ರವರ್ತಿ, ಭಗೀರಥ, ಶ್ರುತ, ನಾಭಾಗ, ತನುಜಾತ, ಅಂಬರೀಷ, ಕಾರ್ತವೀರ್ಯರಾಜ, ಹರಿಶ್ಚಂದ್ರ, ದಶರಥ, ಶ್ರೀರಾಮ ಚಕ್ರವರ್ತಿ ಮೊದಲಾದವರು ಬರುತ್ತಾರೆ.
ಕಾಡಿನಲ್ಲಿ ಜಮದಗ್ನಿ ಮುನಿ ವಾಸಿಸುತ್ತಿರುತ್ತಾನೆ. ಈತನ ಮಡದಿ ರೇಣುಕಾದೇವಿ. ಇವರಿಗೆ ದೇವತೆಗಳು ವರವಾಗಿ ನೀಡಿದ ಕಾಮಧೇನು ಎಂಬ ಸುಂದರ ಕನ್ಯೆ ಇರುತ್ತಾಳೆ. ಜಮದಗ್ನಿ ಮತ್ತು ರೇಣುಕಾದೇವಿಗೆ ಪರಶುರಾಮನೆಂಬ ಧೈರ್ಯಶಾಲಿ ಮಗನಿರುತ್ತಾನೆ.
ಹೀಗೆ ಬೇಟೆಗೆಂದು ಕಾರ್ತವೀರ್ಯರಾಜ ಕಾಡಿಗೆ ತೆರಳುತ್ತಾನೆ. ಚಕ್ರವರ್ತಿಯನ್ನು ಕಂಡ ಜಮದಗ್ನಿ ಆತನನ್ನು ತನ್ನ ಮನೆಗೆ ಕರೆದೊಯ್ದು ಪುಷ್ಕಳ ಭೋಜನದೊಂದಿಗೆ ಆತಿಥ್ಯ ನೀಡುತ್ತಾನೆ. ಆಗ ಕಾರ್ತವೀರ್ಯರಾಜನ ಕಣ್ಣಿಗೆ ಬಿದ್ದದ್ದೇ ಕಾಮಧೇನು. ಆ ಕಾಮಧೇನುವೇ ಅರಸ ಮತ್ತು ಆತನ ಸೈನ್ಯಕ್ಕೆ ಪುಷ್ಕಳ ಭೋಜನ ನೀಡಿದ್ದನ್ನು ಆತ ಜಮದಗ್ನಿಯಿಂದ ತಿಳಿದುಕೊಳ್ಳುತ್ತಾನೆ.
ಈ ಸಂದರ್ಭದಲ್ಲಿ ಕಾಮಧೇನುವಿನ ಬಗ್ಗೆ ಆಸಕ್ತಿ ತಾಳಿದ ಕಾರ್ತವೀರ್ಯ ರಾಜ, ಇಂತಹ ಕಾಮಧೇನು ಅರಮನೆಯಲ್ಲಿ ಚಕ್ರವರ್ತಿಗಳ ಬಳಿ ಇರಬೇಕಾದವಳು ಕಾಡಿನಲ್ಲಿ ಏಕೆ ಇದ್ದಾಳೆ? ಎಂದು ಪ್ರಶ್ನಿಸಿ ಅದನ್ನು ತನ್ನೊಟ್ಟಿಗೆ ಕಳುಹಿಸಿಕೊಡುವಂತೆ ಜಮದಗ್ನಿಯಲ್ಲಿ ಕೇಳುತ್ತಾನೆ.
ಕಾಮಧೇನುವನ್ನು ದೇವತೆಗಳು ನನಗೆ ವರವಾಗಿ ಕೊಟ್ಟಿದ್ದಾರೆ. ಹಸ್ತಾಂತರಿಸಲು ಸಾಧ್ಯವಿಲ್ಲ. ದೇವತೆಗಳನ್ನು ಕೇಳಿ, ಅವರು ಒಪ್ಪಿದರೆ ಕಾಮಧೇನುವನ್ನು ನಿಮ್ಮೊಟ್ಟಿಗೆ ಕಳುಹಿಸಲು ನನ್ನದೇನೂ ಅಭ್ಯಂತರವಿಲ್ಲ ಎಂದು ಜಮದಗ್ನಿ ಹೇಳುತ್ತಾನೆ.
ಆಗ ಕಾರ್ತವೀರ್ಯರಾಜ ದೇವತೆಗಳ ಬಳಿ ಕೇಳಿಕೊಳ್ಳುತ್ತಾನೆ. ಆದರೆ, ದೇವತೆಗಳು ಒಪ್ಪುವುದಿಲ್ಲ. ಇದರ ಪರಿಣಾಮ ಬ್ರಹ್ಮ ಕುಲಕ್ಕೂ ಮತ್ತು ಕ್ಷತ್ರಿಯ ಕುಲಕ್ಕೂ ಸಂಘರ್ಷ ಏರ್ಪಡುತ್ತದೆ. ಕ್ಷಾತ್ರನಾದ ಕಾರ್ತವೀರ್ಯರಾಜ ಈ ಸಂಘರ್ಷದಲ್ಲಿ ಸೋಲನುಭವಿಸಿದನಾದರೂ ಆಕೆಯನ್ನು ಪಡೆಯಲೇಬೇಕೆಂಬ ಹಠ ಮಾತ್ರ ಬಿಡಲಿಲ್ಲ. ಕೃದ್ಧನಾಗಿ ಜಮದಗ್ನಿಯನ್ನು ಕೊಂದು ಕಾಮಧೇನುವನ್ನು ಹೊತ್ತೊಯ್ಯುತ್ತಾನೆ ಕಾರ್ತವೀರ್ಯರಾಜ. ಈ ವಿಚಾರವನ್ನು ರೇಣುಕಾದೇವಿ ತನ್ನ ಮಗ ಪರಶುರಾಮನಿಗೆ ತಿಳಿಸುತ್ತಾಳೆ. ಆಗ, ಪರಶುರಾಮ ಶಪಥವೊಂದನ್ನು ಮಾಡುತ್ತಾನೆ. ನನ್ನ ತಂದೆಯ ಹತ್ಯೆಗೆ ಪ್ರತಿಕಾರವಾಗಿ ಎಲ್ಲಾ ಕ್ಷತ್ರಿಯರನ್ನು ನಾಶ ಮಾಡುತ್ತೇನೆಂದು. ಪರಶುರಾಮ ತನ್ನ ಕೈಗೆ ಸಿಕ್ಕ ಕ್ಷತ್ರಿಯರನ್ನೆಲ್ಲಾ ಕೊಲ್ಲಲಾರಂಭಿಸಿದ. ಇದು ಮತ್ತಷ್ಟು ವಿಕೋಪಕ್ಕೆ ಹೋಗುತ್ತದೆ ಎಂಬುದನ್ನು ಅರಿತ ನಾರದ ಮುನಿ ಪರಶುರಾಮನನ್ನು ಕರೆದು, ನೀನು ಯಾವುದೇ ಕಾರಣಕ್ಕೂ ಪತ್ನಿಯೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿರುವ ಕ್ಷತ್ರಿಯನನ್ನು, ಪೂಜಾ ಕೈಂಕರ್ಯಗಳನ್ನು ಮಾಡುತ್ತಿರುವ ಕ್ಷತ್ರಿಯನನ್ನು ಕೊಲ್ಲಬಾರದು ಎಂದು ತಾಕೀತು ಮಾಡುತ್ತಾನೆ.
ಪರಶುರಾಮನ ಪರಾಕ್ರಮ ಕಂಡು ಬೆಚ್ಚಿದ ಬಹುತೇಕ ಕ್ಷತ್ರಿಯರು ತಾವೂ ನಾಶವಾಗಿಬಿಡುತ್ತೇವೆಂಬ ಕಾರಣಕ್ಕೆ ಶಸ್ತ್ರತ್ಯಾಗ ಮಾಡಿ, ದೇಶಾಂತರ ಓಡಿ ಹೋಗಿ ಹೊಟ್ಟೆಪಾಡಿಗಾಗಿ ಉಪಕಸುಬುಗಳನ್ನು ಹುಡುಕಿಕೊಂಡರು.
ಹಾಗೆ ಉಪ್ಪು ತಯಾರಿಕೆ ಮತ್ತು ಮಾರಾಟವನ್ನು ಉಪಕಸುಬಾಗಿ ರೂಢಿಸಿಕೊಂಡು ಬಂದ ಕ್ಷತ್ರಿಯರೇ ಇಂದಿನ ಉಪ್ಪಾರ ಸಮುದಾಯದವರು. ಇದು ಪುರಾಣ ಹೇಳುವ ಕತೆ. ಭಾರ್ಗವ ದಂಡಯಾತ್ರೆ ಮತ್ತು ಉಪ್ಪಾರ ಚರಿತಾಮೃತ ಗ್ರಂಥದಲ್ಲಿ ಉಪ್ಪಾರ ಹುಟ್ಟಿನ ಬಗ್ಗೆ ಈ ಉಲ್ಲೇಖವಿದೆ. ಭಗೀರಥ ತನ್ನ ತ್ಯಾಗ, ಸಮರ ನೈಪುಣ್ಯತೆ, ಚಾಣಾಕ್ಷ್ಯತೆ, ದಾನ, ಧೈರ್ಯ ಸೇರಿದಂತೆ ಹಲವು ಪ್ರಮುಖ ಕಾರಣಗಳಿಂದ ಉಪ್ಪಾರರ ಆರಾಧ್ಯ ದೈವವಾಗಿದ್ದಾನೆ.ಶಸ್ತ್ರತ್ಯಾಗ ಮಾಡಿ ದೇಶಾಂತರ ಓಡಿ ಹೋದ ಕ್ಷತ್ರಿಯರು ಅಲ್ಲಲ್ಲಿ ನೆಲೆಯೂರಿದರು. ಜವಳು ಭೂಮಿ ಮತ್ತು ಸಮುದ್ರದಂಡೆಯಲ್ಲಿ ಉಪ್ಪು ತಯಾರಿಕೆಯಲ್ಲಿ ತೊಡಗಿದರು. ಹೀಗಾಗಿಯೇ ಅವರು ಉಪ್ಪಾರರಾದರು. ಪುರಾಣ ಕಾಲದಿಂದಲೂ ಉಪ್ಪು ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿದ್ದ ಇವರ ಜೀವನ ಹಸನಾಗಿತ್ತು. ಆದರೆ, ದೇಶಕ್ಕೆ ಬ್ರಿಟಿಷರು ದಂಡೆತ್ತಿ ಬಂದಾಗ ಉಪ್ಪು ತಯಾರಿಕೆ ಒಂದು ಉದ್ಯಮವಾಗಿ ಕಂಡಿತು. ವ್ಯಾಪಾರೀ ಮನೋಭಾವದ ಬ್ರಿಟಿಷರು ದೇಶದಲ್ಲಿ ಉಪ್ಪು ತಯಾರಿಕೆ ಮೇಲೆ 1880 ರಲ್ಲಿ ನಿಷೇಧ ಹೇರಿದರು. ಇದರ ಪರಿಣಾಮ ಉಪ್ಪಾರರ ಬದುಕು ಬೀದಿಗೆ ಬಿತ್ತು. ಹೀಗಾಗಿ ಸಮುದಾಯದ ಬಹುಪಾಲು ಕುಟುಂಬಗಳು ಕೃಷಿಯನ್ನು ಅವಲಂಬಿಸಿದರೆ, ಮತ್ತೆ ಹಲವು  ಕುಟುಂಬಗಳು ಕೂಲಿ ಕಾರ್ಮಿಕರಾಗಿ ಜೀವನ ನಡೆಸುತ್ತಾ ಬಂದರು. ಅವರ ಈ ಪರಿಸ್ಥಿತಿ ಇಂದಿಗೂ ಮುಂದುವರೆದಿದೆ.
ರಾಜ್ಯದಲ್ಲಿ ಉಪ್ಪಾರರ ಸಂಖ್ಯೆ ಸುಮಾರು 15 ಲಕ್ಷಕ್ಕೂ ಅಧಿಕ ಇದೆ. ಚಾಮರಾಜನಗರ, ಮೈಸೂರು, ಬೆಳಗಾವಿ, ಚಿತ್ರದುರ್ಗ, ಬಿಜಾಪುರ, ಕೊಪ್ಪಳ, ಬಳ್ಳಾರಿ, ತುಮಕೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುವ ಉಪ್ಪಾರರು ಎಲ್ಲಾ ತಾಲೂಕುಗಳಲ್ಲಿ ವಾಸವಾಗಿದ್ದಾರೆ.
ಉಪ್ಪಾರ, ಬೆಲ್ದರ್, ಲೋನಾರಿ, ಮೇಲುಸಕ್ಕರೆಯವರು, ನಾಮದಉಪ್ಪಾರ, ಉಪ್ಪಲಿಗ, ಸುಣ್ಣದ ಉಪ್ಪಾರ, ಉಪ್ಪಾರ ಸೆಟ್ಟಿ ಸೇರಿದಂತೆ 22 ಕ್ಕೂ ಹೆಚ್ಚು ಉಪಪಂಗಡಗಳಿವೆ. ಆದರೆ, ಈ ಉಪಪಂಗಡಗಳಲ್ಲಿ 150 ಕ್ಕೂ ಹೆಚ್ಚು ಬೆಡಗುಗಳಿವೆ. ಈ ಬೆಡಗುಗಳ ವಿಶೇಷವೆಂದರೆ, ಸಸ್ಯ ಅಥವಾ ಪ್ರಾಣಿಯ ಹೆಸರಿನಿಂದ ಗುರುತಿಸಲಾಗುತ್ತದೆ. ಅಂದರೆ, ಅಗಿಲ ಕುಲದವರು, ಆನೆ, ನರಿ, ನಾಗರ, ಕೆಂಡ, ಕುದುರೆ, ಛತ್ರಿ, ಹೊಂಗೆ,ನೇರಳೆ, ಬೇಲದ, ಮುಚ್ಚಳ, ದೊಡ್ಡಿ, ಹೊನ್ನು, ಕರಗ, ಕೊತ್ತಂಬರಿ, ಮಲ್ಲಿಗೆ, ಸಕ್ಕರೆ, ಕಲ್ಲುಸಕ್ಕರೆ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ.  ಇತರೆ ಸಮುದಾಯದ ರೀತಿಯಲ್ಲಿ ಇಲ್ಲಿ ಒಂದೇ ಬೆಡಗಿನವರು ಪರಸ್ಪರ ವೈವಾಹಿಕ ಸಂಬಂಧ ಬೆಳೆಸುವುದಿಲ್ಲ. ಶೈವ ಮತ್ತು ವೈಷ್ಣವ ಅನುಯಾಯಿಗಳಾಗಿದ್ದು, ಕೆಲವು ಬೆಡಗಿನವರು ಜನಿವಾರ ಧರಿಸುವ ಸಂಪ್ರದಾಯವೂ ಇದೆ.
ವಿಶಿಷ್ಟ ನ್ಯಾಯಪದ್ಧತಿಯನ್ನು ಇಂದಿಗೂ ್ನರೂಢಿಸಿಕೊಂಡುಬರಲಾಗುತ್ತಿದೆ. ಇವರ ನ್ಯಾಯಪದ್ಧತಿ ಸುಪ್ರಸಿದ್ಧ ನ್ಯಾಯ ನಿಷ್ಣಾತನಾಗಿದ್ದ ಹಮ್ಮುರಬಿಯನ್ನು ನೆನಪಿಸುತ್ತದೆ. ಅಂದರೆ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿರುವ ಉಪ್ಪಾರ ಜನಾಂಗದ ಗ್ರಾಮಗಳಲ್ಲಿ ಒಬ್ಬ ಯಜಮಾನ ಇರುತ್ತಾನೆ. ಐದು ಗ್ರಾಮಗಳು ಸೇರಿ ಒಂದು ಒಕ್ಕೂಟ ರಚಿಸಿಕೊಳ್ಳುತ್ತಾರೆ. ಐದು ಗ್ರಾಮಗಳ ಯಜಮಾನನ ಮನೆಯ ಕಟ್ಟೆ ನ್ಯಾಯಕಟ್ಟೆಯಾಗಿರುತ್ತದೆ. ಅಲ್ಲಿ ವಿವಾದಗಳನ್ನು ಬಗೆಹರಿಸಲಾಗುತ್ತದೆ.
ಇಂತಹದ್ದೊಂದು ವೈಶಿಷ್ಟ್ಯಪೂರ್ಣವಾದ ಪದ್ಧತಿಯನ್ನು ಇನ್ನೂ ತನ್ನ ಸೆರಗಿನಲ್ಲಿ ಕಟ್ಟಿಕೊಂಡು ಬಂದಿರುವ ಉಪ್ಪಾರರ ಇಂದಿನ ಸಾಮಾಜಿಕ ಪರಿಸ್ಥಿತಿ ಹೇಳಿಕೊಳ್ಳುವ ಮಟ್ಟಿಗೆ ಸುಧಾರಣೆ ಕಂಡಿಲ್ಲ. ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಸಮುದಾಯದಲ್ಲಿ ಇರುವ ಪುರುಷರು ಶೇ. 15 ರಿಂದ 20 ರಷ್ಟು ಅಕ್ಷರಸ್ಥರಾಗಿದ್ದರೆ, ಕೇವಲ ಶೇ. 10 ಕ್ಕಿಂತ ಕಡಿಮೆ ಮಹಿಳೆಯರು ಅಕ್ಷರ ಕಲಿತಿದ್ದಾರೆ. ಒಟ್ಟಾರೆ ಸಮುದಾಯದ ಸಾಕ್ಷರತೆ ಶೇ. 15 ನ್ನು ಮೀರುವುದಿಲ್ಲ. ಬಹುತೇಕ ಕುಟುಂಬಗಳು ಕೂಲಿ ನಾಲಿ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಹೀಗಾಗಿ ಸಮುದಾಯದಲ್ಲಿ ಶೇ. 85 ಕ್ಕಿಂತಲೂ ಹೆಚ್ಚು ಕುಟುಂಬಗಳ ವಾರ್ಷಿಕ ಆದಾಯ  5 ಸಾವಿರಕ್ಕಿಂತಲೂ ಕಡಿಮೆ ಎಂದು ಅಧ್ಯಯನ ನಡೆಸಿದ ಆಯೋಗಗಳು ತಮ್ಮ ವರದಿಯಲ್ಲಿ ಉಲ್ಲೇಖ ಮಾಡಿವೆ. ವಾರ್ಷಿಕ  20 ಸಾವಿರಕ್ಕಿಂತಲೂ ಅಧಿಕ ಆದಾಯ ಇರುವ ಕುಟುಂಬಗಳ ಸಂಖ್ಯೆ ಶೇ. 5 ನ್ನೂ ಮೀರುವುದಿಲ್ಲ ಎಂಬ ಅಂಶ ಅಧ್ಯಯನದಿಂದ ಕಂಡುಬಂದಿದೆ.
ಇನ್ನು ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಉಪ್ಪಾರರನ್ನು ಪ್ರವರ್ಗ-1 ರಲ್ಲಿ ಸೇರ್ಪಡೆ ಮಾಡಲಾಗಿದೆ. ಈ ವರ್ಗದಲ್ಲಿ 85 ಕ್ಕೂ ಹೆಚ್ಚು ಜಾತಿಗಳಿದ್ದು ಮೀಸಲಾತಿಗಾಗಿ ಪರಸ್ಪರ ಹೋರಾಟ ನಡೆಸಬೇಕಾದ ಪರಿಸ್ಥಿತಿ ಜನಾಂಗದ್ದಾಗಿದೆ. ರಾಜಕೀಯವಾಗಿ ಹೇಳುವುದಾದರೆ ಇದುವರೆಗೆ ಯು.ಭೂಪತಿ, ಮಸಣ ಶೆಟ್ಟಿ, ಜವರಾಯಶೆಟ್ಟಿ, ಎಚ್.ಸಿ.ನೀರಾವರಿ, ಪುಟ್ಟರಂಗಶೆಟ್ಟಿ ಅವರನ್ನು ಹೊರತುಪಡಿಸಿದರೆ ಇತರೆ ಯಾರೊಬ್ಬರೂ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿಲ್ಲ. ಚುನಾವಣೆ ವೇಳೆ ಕೆಲವು ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಇವರೇ ನಿರ್ಣಾಯಕರು. ಆದರೆ, ಈ ಸಮುದಾಯದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಮೀಸಲಾತಿ ಬರುವ ಕಾರಣ ಎಸ್ಸಿ ಅಥವಾ ಎಸ್ಟಿಗೆ ಕ್ಷೇತ್ರಗಳು ಮೀಸಲಾಗುವುದರಿಂದ ಸ್ಪರ್ಧೆಯಿಂದ ದೂರ ಉಳಿಯಬೇಕಾಗುತ್ತಿದೆ.
ಇತ್ತೀಚೆಗೆ ಶೈಕ್ಷಣಿಕವಾಗಿ ಸ್ವಲ್ಪ ಮುಂದೆ ಬರುತ್ತಿರುವ ಸಮುದಾಯದ ಹತ್ತಾರು ಅಭ್ಯರ್ಥಿಗಳು ವೈದ್ಯರು, ಎಂಜಿನಿಯರ್್ನಂತಹ ಉತ್ತಮ ಉದ್ಯೋಗ ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿರುವ ತಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮುಖಂಡರು ಹಲವು ಬಾರಿ ಸರ್ಕಾರಗಳಿಗೆ ಮನವಿ ಮಾಡಿದ್ದರೂ ಸಾಧ್ಯವಾಗಿಲ್ಲ. ಉಪ್ಪಾರರ ಅಭಿವೃದ್ಧಿ ನಿಗಮವೊಂದನ್ನು ಸ್ಥಾಪಿಸಲು ಹಿಂದಿನ ಸರ್ಕಾರ ಪ್ರಯತ್ನ ನಡೆಸಿ ಅದಕ್ಕಾಗಿ  5 ಕೋಟಿ ಮೀಸಲಿಟ್ಟಿತ್ತಾದರೂ ನಂತರ ಬಂದ ಸರ್ಕಾರ ಆ ಪ್ರಸ್ತಾವನೆಯನ್ನೇ ಕೈಬಿಟ್ಟಿದೆ. ಇದರ ಪರಿಣಾಮ ಉಪ್ಪಾರರಿಗೆ ನಿಗಮವೆಂಬುದು ಗಗನ ಕುಸುಮವಾದಂತಾಗಿದೆ.

-ರವಿ ಮಾಳೇನಹಳ್ಳಿ